Thursday, February 12, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ: ಗೌರಿ ಗಣೇಶ್ & ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಳೆ ನಡುವೆಯೇ ಪೊಲೀಸರಿಂದ ಪಥಸಂಚಲನ

ಕೊಟ್ಟಿಗೆಹಾರ: ಗೌರಿ ಗಣೇಶ್ & ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಳೆ ನಡುವೆಯೇ ಪೊಲೀಸರಿಂದ ಪಥಸಂಚಲನ

ಮೂಡಿಗೆರೆ: ಗೌರಿ ಗಣೇಶ್ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೊಟ್ಟಿಗೆಹಾರ ಪಟ್ಟಣದಲ್ಲಿ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪಥಸಂಚಲನ ಜರುಗಿತು.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ಸಾರಾತ್ಯಾ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪಥಸಂಚಲನದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್‌ಪೆಕ್ಟರ್, ಮೂಡಿಗೆರೆ, ಗೋಣಿಬೀಡು, ಬಣಕಲ್ ಹಾಗೂ ಬಾಳೂರು ಠಾಣೆಗಳ ಉಪನಿರೀಕ್ಷಕರು (ಎಸ್‌ಐಗಳು) ತಮ್ಮ ಸಿಬ್ಬಂದಿಯೊಂದಿಗೆ ಪಾಲ್ಗೊಂಡರು.

ಮಳೆಯ ಪರಿಣಾಮವಾಗಿ ಸಾಮಾನ್ಯ ಮೆರವಣಿಗೆಯ ಬದಲು ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನಗಳಲ್ಲೇ ಕೂತು ಪಥಸಂಚಲನ ನಡೆಸಿದರು. ಹಬ್ಬಗಳನ್ನು ಎಲ್ಲ ಧರ್ಮದವರು ಒಗ್ಗಟ್ಟಿನಿಂದ ಆಚರಿಸಬೇಕು ಎಂಬ ಸೌಹಾರ್ದ ಸಂದೇಶವನ್ನು ಪೊಲೀಸರು ಹಂಚಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!