ಕೊಟ್ಟಿಗೆಹಾರ : ಇಸ್ರೇಲ್-ಇರಾನ್ ಮಧ್ಯೆ ಸಂಘರ್ಷದಿಂದ ಗ್ಯಾಸ್ ಅಭಾವ ಹಿನ್ನೆಲೆ ಗ್ಯಾಸ್ ಇಲ್ಲದೆ ಅಡುಗೆ ಮಾಡಲು ಪರದಾಟ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
ಹೌದು .. ಬಯಲು ಪ್ರದೇಶದಲ್ಲಿ ಸೌದೆ ಓಲೆ ಹಾಕಿ ಅಡುಗೆ ಮಾಡ್ತಿರುವ ಸಿಬ್ಬಂದಿಗಳು ಐದು ದಿನಗಳಿಂದ ಗ್ಯಾಸ್ ಇಲ್ಲದೆ ಸೌದೆಯಲ್ಲೇ ಅಡುಗೆ ಮಾಡ್ತಿದ್ದು ಈ ಪ್ರೌಢ ಶಾಲೆಯಲ್ಲಿ ಸುಮಾರು 60-70 ಜನ ಮಕ್ಕಳಿದ್ದಾರೆ ಹೀಗಾಗಿ ಅವರಿಗೆ ತೊಂದರೆ ಆಗದಂತೆ ಈ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಸೂಚನೆ ಮಧ್ಯೆಯೂ ಗ್ಯಾಸ್ ಏಜೆನ್ಸಿಯ ನಿರ್ಲಕ್ಷ್ಯ ಆರೋಪ ತೋರುತ್ತಿದ್ದು ಪರೀಕ್ಷಾ ಸಮಯದಲ್ಲಿ ಅಡುಗೆ ತಯಾರಿಸಲು ಶಿಕ್ಷಕರ ಪರದಾಟ ಹಾಗೆ ಪರೀಕ್ಷೆ ಸಮಯವಾದ್ದರಿಂದ ಮಕ್ಕಳಿಗೆ ರಿವಿಸನ್ ಮಾಡ್ತಿರೋ ಶಿಕ್ಷಕರು ಕೂಡಲೇ ಗ್ಯಾಸ್ ಸೌಲಭ್ಯ ಕಲ್ಪಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳಿಯರು ಆಗ್ರಹಿಸಿದ್ದಾರೆ.
ವರರಿ: ಶಾಲಿನಿ ಪಿ.ಗೌಡ
