Thursday, February 12, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ: ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ಸಹೋದರರಿಬ್ಬರ ಭಕ್ತಿಯ ಪಾದಯಾತ್ರೆ!

ಕೊಟ್ಟಿಗೆಹಾರ: ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ಸಹೋದರರಿಬ್ಬರ ಭಕ್ತಿಯ ಪಾದಯಾತ್ರೆ!

ಮೂಡಿಗೆರೆ: ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ಬೆಂಗಳೂರಿನ ಜಾಲಹಳ್ಳಿಯ ಇಬ್ಬರು ಸಹೋದರರು ಭಕ್ತಿಯ ಪಾದಯಾತ್ರೆ ನಡೆಸಿರುತ್ತಾರೆ.

ಸಹೋದರರಾದ ಹೇಮಂತ್ ಮತ್ತು ಅನಿಲ್ ಕೊಟ್ಟಿಗೆಹಾರದಿಂದ ಧರ್ಮಸ್ಥಳದವರೆಗೆ ಕಾಲ್ನಡಿಗೆಯ ಧರ್ಮ ಸಂರಕ್ಷಣ ಪಾದಯಾತ್ರೆ ಕೈಗೊಂಡಿದ್ದಾರೆ. ಹಾಗೆ ಕೊಟ್ಟಿಗೆಹಾರದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಿದ ಇವರಿಗೆ ಗ್ರಾಮಸ್ಥರಿಂದ ಶುಭ ಹಾರೈಕೆ ದೊರೆತಿದ್ದು ಸಂತೋಷದಿಂದ ಬೀಳ್ಕೊಟ್ಟರು.

ಹಾಗೆ ಧರ್ಮಸ್ಥಳ ನಮ್ಮ ಭಕ್ತಿಯ ಕೇಂದ್ರ, ಎಲ್ಲರಿಗೂ ಸಮಾನ ಸೇವೆ ದೊರೆತಿದೆ ಎಂದು ಹೇಮಂತ್ ಅಭಿಪ್ರಾಯಪಟ್ಟರು. ಡಾ. ವೀರೇಂದ್ರ ಹೆಗ್ಗಡೆ ಅವರ ತ್ಯಾಗಮಯ ಸೇವೆ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ಹಚ್ಚಿದೆ. ಅನ್ನಸತ್ರದಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಉಚಿತ ಊಟ, ಚಾರಿಟಬಲ್ ಆಸ್ಪತ್ರೆಯಲ್ಲಿ ಬಡವರಿಗೆ ಉತ್ತಮ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಸ್ವಾವಲಂಬನೆ ಯೋಜನೆಗಳ ಮೂಲಕ ಗ್ರಾಮೀಣ ಹಾಗೂ ಮಹಿಳೆಯರಿಗೆ ಬದುಕಿನ ಬೆಳಕು ಇವೆಲ್ಲ ಅವರ ಸೇವೆಯ ದೀಪಗಳು ಎಂದು ಅನಿಲ್ ಶ್ಲಾಘಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!