ಚಾರ್ಮಾಡಿ; ಲಾರಿಯೊಂದು ತಿರುವಿನಲ್ಲಿ ಟರ್ನ್ ಮಾಡುವಾಗ ಏಕಾಏಕಿ ಕೆಟ್ಟು ನಿಂತ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ನ 11ನೇ ನಡೆದಿದೆ.

ಚಾರ್ಮಾಡಿ ಘಾಟಿಯಲ್ಲಿ 12-14 ಚಕ್ರದ ಲಾರಿ ಸಂಚಾರಕ್ಕೆ ನಿಷೇಧವಿದೆ. ಆದರೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕ 14 ಚಕ್ರದ ಲಾರಿ ಸಾಗಿದೆ. ಪರಿಣಾಮ 11ನೇ ತಿರುವಿನಲ್ಲಿ ಲಾರಿ ಚಾಲಕನಿಗೆ ಲಾರಿ ಟರ್ನ್ ಮಾಡೋದಕ್ಕೆ ಸಾಧ್ಯವಾಗದೇ ಅಲ್ಲಿ ಸಿಲುಕಿಕೊಂಡಿದೆ. ನಡು ರಸ್ತೆಯಲ್ಲೇ ಲಾರಿ ಕೆಟ್ಟು ನಿಂತ ಪರಿಣಾಮ ಬೆಳಗ್ಗಿನಿಂದಲೇ ವಾಹನ ಸವಾರರು ಪರದಾಡುವಂತಾಗಿದೆ. ಮುಂಜಾನೆಯಿಂದಲೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು,ಚಾರ್ಮಾಡಿ ಘಾಟ್ ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಇದ್ದರೂ ಲಾರಿ ಹೋಗಲು ಅನುಮತಿ ಕೊಟ್ಟಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.