Friday, February 13, 2026
Homebig breakingಮಂಡ್ಯ ನಗರಸಭೆ ಚುನಾವಣೆ - Half ಮೆಂಟಲ್‌ಗಳ ಬಗ್ಗೆ ಮಾತಾಡಲ್ಲ ಅಂತ ರವಿ ಗಣಿಗ ಹೇಳಿದ್ದು...

ಮಂಡ್ಯ ನಗರಸಭೆ ಚುನಾವಣೆ – Half ಮೆಂಟಲ್‌ಗಳ ಬಗ್ಗೆ ಮಾತಾಡಲ್ಲ ಅಂತ ರವಿ ಗಣಿಗ ಹೇಳಿದ್ದು ಯಾರಿಗೆ..?

ಪಬ್ಲಿಕ್‌ ಇಂಪ್ಯಾಕ್ಟ್‌ ಮಂಡ್ಯ : ಮಂಡ್ಯ ನಗರಸಭೆ ಚುನಾವಣೆಯಲ್ಲಿ ನಾವು ಸೋತಿಲ್ಲ. ನಮ್ಮ ಗೆಲುವನ್ನು ಅವರು ತಪ್ಪಿಸಿದ್ದಾರೆಂದು ಮಂಡ್ಯ ಶಾಸಕ ರವಿ ಗಣಿಗ ಪ್ರತಿಕ್ರಿಯಿಸಿದ್ದಾರೆ.
ಚುನಾವಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ. ನಮ್ಮ ಸದಸ್ಯರನ್ನ ಬೆದರಿಸಿ, ಫಿಲಂ ಸ್ಟೈಲ್‌ ಥರ ಕಿಡ್ನಾಪ್‌ ಮಾಡಿದ್ದಾರೆ. ಹೀಗಾಗಿ ಒಂದು ಮತದಿಂದ ಸೋತಿದ್ದೇವೆ. ಇಲ್ಲವಾದಲ್ಲಿ ಗೆಲುವು ನಮ್ಮದೇ ಆಗುತ್ತಿತ್ತು. ನಮ್ಮ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಜೆಡಿಎಸ್‌ ಸದಸ್ಯರು ನಮಗೆ ಮತ ಹಾಕುವವರಿದ್ದರು ಎಂದರು.
ನಮ್ಮ ಜನಪ್ರಿಯತೆಯಿಂದ ಹೆಚ್ಚು ಮತ ಸಿಕ್ಕಿದೆ. ನಮ್ಮ ಸದಸ್ಯರನ್ನು ಹೈಜಾಕ್‌ ಮಾಡಿದ್ದರಿಂದ ಗೆಲುವು ತಪ್ಪಿದೆ. ನಾಮಪತ್ರ ಸಲ್ಲಿಸಬೇಕಿದ್ದವರನ್ನ ಕಿಡ್ನಾಪ್‌ ಮಾಡಿದ್ದಾರೆ. ಆದರೆ ನಾವು ಯಾರನ್ನೂ ಹೈಜಾಕ್‌ ಮಾಡಿಲ್ಲ ಎಂದ ರವಿ ಗಣಿಗ, ಅಡ್ಡ ಮತದಾನ ಮಾಡಿದ ಕಾಂಗ್ರೆಸ್‌ ಸದಸ್ಯರ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದರು. ಹಾಫ್‌ ಮೆಂಟಲ್‌ಗಳ ಬಗ್ಗೆ ನಾವು ಮಾತಾಡೋದಿಲ್ಲ ಅಂತ ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!