ಚಿಕ್ಕಮಗಳೂರು/ ಕಡೂರು: ಗಂಗಾ ಕಲ್ಯಾಣ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕೊಡಲು 20 ಸಾವಿರ ಲಂಚ ಪಡೆಯುವಾಗ ಮೆಸ್ಕಾಂ ಜೆಇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.
ಹೌದು ..ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೆಸ್ಕಾಂ ಜೆಇ ಪ್ರಶಾಂತ್ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಶಾಂತ್ ಗಂಗಾ ಕಲ್ಯಾಣ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕೊಡಲು 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಡೂರು ತಾಲೂಕಿನ ಮತಿಘಟ್ಟದ ಮೆಸ್ಕಾಂ ಜೆಇ ಜೆಪಿ ಪ್ರಶಾಂತ್, ಈ ಹಿಂದೆ ಕೂಡ ಇವರ ಮೇಲೆ ಲಂಚದ ಆರೋಪ ಕೇಳಿ ಬಂದಿತ್ತು.