ಚಿಕ್ಕಮಗಳೂರು : ನೀರಿನ ಟ್ಯಾಂಕ್ ಮೀಟರ್ ಬರೆಯುವ ವೇಳೆ ಕರೆಂಟ್ ಪಾಸ್ ಆಗಿ ಮೆಸ್ಕಾಂ ಸಿಬ್ಬಂದಿ ಸ್ಥಿತಿ ಗಂಭೀರವಾಗಿರುವ ಘಟನೆ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ತಗುಲಿದ್ದರಿಂದ ಮೆಸ್ಕಾಂ ಸಿಬ್ಬಂದಿ ವೆಂಕಟೇಶ್ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ.

ನೀರಿನ ಟ್ಯಾಂಕ್ ಮೀಟರ್ ಬರೆಯುವ ವೇಳೆ ಟ್ಯಾಂಕರ್ ಮೋಟರ್ ಬಳಿ ಗ್ರೌಂಡಿಂಗ್ ನಿಂದ ವಿದ್ಯುತ್ ಶಾಕ್ ತಗುಲಿದ್ದು ಈ ವೇಳೆ ಕಳಸ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದು ಆದರೆ ಹೆಚ್ಚಿನ ಚಿಕಿತ್ಸೆಗೆ ಪಡೆಯಲು ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.