ಚಿಕ್ಕಮಗಳೂರು: ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆಯಾಗಿದ್ದಾರೆ. ಕಡೂರು ತಾಲೂಕಿನ ಸಖರಾಯಪಟ್ಟಣದ ನೀಲಗಿರಿ ಪ್ಲಾಂಟೇಶನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶರತ್ (33) ಸಖರಾಯಪಟ್ಟಣದ ಹಳೇಹಟ್ಟಿ ತಾಂಡ್ಯ ಬಳಿ ಮೃತದೇಹ ಪತ್ತೆಯಾಗಿದೆ.
ಕಳೆದೊಂದು ವಾರದಿಂದ ಶರತ್ ನಾಪತ್ತೆಯಾಗಿದ್ರೆಂದು ಅರಣ್ಯದಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು-ಅರಣ್ಯ ಸಿಬ್ಬಂದಿಗಳು ನಿಲಗಿರಿ ಪ್ಲಾಂಟೇಶನ್ ನಿಂದ 5 ಕಿಮೀ ದೂರದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಶವ ಪತ್ತೆಯಾಗಿದೆ.
ಮಂಗಳೂರಿನ ಸುಳ್ಯದಿಂದ ಕಳೆದ 6 ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದ 33 ವರ್ಷದ ಫಾರೆಸ್ಟ್ ಗಾರ್ಡ್ ಶರತ್ ಕೊಡಗು ಜಿಲ್ಲೆಯ ಕಾಲೂರು ಗ್ರಾಮದವರಾಗಿದ್ದರು. ಕಡೂರು ತಾಲೂಕಿನ ಸಖರಾಯಪಟ್ಟಣ ಅರಣ್ಯ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿದ್ದು ನೀಲಗಿರಿ ಪ್ಲಾಂಟೇಶನ್ ನಲ್ಲಿ ನರ್ಸರಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ಶರತ್
10 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆಯಾಗಿದ್ದು. ಶರತ್ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಜೊತೆಯಲ್ಲೇ ಕೆಲಸ ಮಾಡುತ್ತಿದ್ದವರೋ ಅಥವಾ ಕಾಡುಗಳ್ಳರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು. ಶರತ್ ಮರಣೋತ್ತರ ಪರೀಕ್ಷೆ ಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸದ್ಯ ಶರತ್ ಸಾವಿನ ಸುತ್ತ ನೂರಾರು ಅನುಮಾನ ವ್ಯಕ್ತವಾಗಿದ್ದು. ಸಖರಾಯಪಟ್ಟಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
