ಮೂಡಿಗೆರೆ : ಅಯ್ಯೋಯ್ಯೋ… ನಮಗೇಕೆ ಇಂತ ಶಿಕ್ಷೆ!!?? ಅಧಿಕಾರಿಗಳೇ ನಿಮಗೆ ನಾವು ಮನುಷ್ಯರಂತೆ ಕಾಣುತ್ತಿಲ್ಲವಾ…??ಪೌರ ಕಾರ್ಮಿಕರ ಪರವಾಗಿ ನಿಮ್ಮ ಪಬ್ಲಿಕ್ ಇಂಪಾಕ್ಟ್ ಮಾನವೀಯತೆ ವರದಿ.ನಿಮ್ಮ ವಾಹಿನಿಗೆ ಸದಾ ನಿಮ್ಮದೆ ಚಿಂತೆ… ಇದು ಪಬ್ಲಿಕ್ ಇಂಪಾಕ್ಟ್… ಪಬ್ಲಿಕ್ ಪರ ನಮ್ಮ ಧ್ವನಿ.ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರೇ ನೀವೊಂದು ತಾಸು ಆ ಜಾಗದಲ್ಲಿ ಕುಳಿತು ನೋಡಿ ಆಗ ಇವರ ನೋವು ಅರ್ಥ ಅಗಬಹುದು

ಹೌದು… ತಾಲ್ಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳ ದೃಷ್ಟಿಯಲ್ಲಿ ಮೃಗಗಳಂತೆ ಕಾಣುತ್ತಿದ್ದಾರೆ ಎಂದು ಅನಿಸುತ್ತಿದೆ. ರಿ ಸ್ವಾಮಿ.. ಅವರು ಮನುಷ್ಯರೇ ಅವರಿಗೂ ಕುಟುಂಬವಿದೆ. ಅವರ ಬರುವಿಕೆಗೆ ಮನೆಯವರು ಕಾಯುತ್ತಿರುತ್ತಾರೆ…. ಎಂಬುದು ನಿಮಗೇಕೆ ನೆನಪಿಗೆ ಬಾರದಾಯಿತು… ನಾಚಿಕೆಯಗಬೇಕು.. ನಿಜ್ವಾಗ್ಲೂ ನೀವು ಮೃಗಗಳಂತೆ ವರ್ತಿಸಿತ್ತಿರುವಿರೆಕೆ??
ಮೂಡಿಗೆರೆ ಪಟ್ಟಣದ ಬೀಜುವಳ್ಳಿ ಗ್ರಾಮದಲ್ಲಿ ಕಸದ ಯಾರ್ಡ್ ನ ಪೌರ ಕಾರ್ಮಿಕನಿಗೇಕೆ ಈ ಶಿಕ್ಷೆ. ನಿಜಕ್ಕೂ ನೀಮಗೆ ಮಾನವೀಯತೆ ಇದೆಯೇ!! ಮೂಡಿಗೆರೆ ಪಟ್ಟಣ ಪಂಚಾಯಿತಿ ಹಗರಣಗಳ ಸುರಿಮಾಲೆ ಗೆ ಮಾತ್ರ ಸೀಮಿತ ಎಂಬುದನ್ನು ಪದೇ ಪದೇ ನಾವು ಕೂಡ ಸುದ್ದಿ ಬಿತ್ತರಿಸಲಿರುತ್ತೇವೆ. ಆದರೆ ಇದು ನಿಜಕ್ಕೂ ನಿಮ್ಮ ಹೇಯ ಕೆಲಸವಲ್ಲದೆ ಮತ್ತೇನು ಸ್ವಾಮಿ.
ಹೌದು ಕಾಣದ ಕೈಗಳು ಬಿಸಾಕುವ ಕಸ ಕಾಯೋಕೆ ನೇಮಿಸಿರುವ ಪೌರ ಕಾರ್ಮಿಕನ ಆರೋಗ್ಯದ ಬಗ್ಗೆ ನಿಮಗೇಕೆ ಇಷ್ಟೊಂದು ತಾತ್ಸರ… ಹಗಲಿರುಳು ಎಂದು ನೋಡದೆ ಪಟ್ಟಣದ ಸ್ವಚ್ಛತೆಗಾಗಿ ದುಡಿಯುವ ಆ ಜೀವಗಳಿಗೆ. ಬೆಲೆ ಇಲ್ಲವ… ತು ನಿಮ್ಮ ಜನ್ಮಕ್ಕೆ ನಾಚಿಕೆ ಆಗಬೇಕು,, ನಿಮ್ಮ ಮನೆಯವರನ್ನು ಒಂದು ತಾಸು ಕೂರಿಸಿ ತೋರಿಸಿ

ಅಬ್ಬಾಬ್ಬ ಅಂದೆಂತ ದುರ್ವಸನೇ ನಿಜಕ್ಕೂ ಸಾರ್ವಜನಿಕರು ಪಟ್ಟಣ ಪಂಚಾಂಯಿತಿ ಅಧಿಕಾರಿಗಳಿಗೆ ಛಿ ಮಾರಿ ಹಾಕೋದರಲ್ಲಿ ತಪ್ಪೇನು ಇಲ್ಲ ಬಿಡಿ.. ಇದು ಒಂದು ಕಡೆ ಆದ್ರೆ ದೈನಂದಿನ ಕೆಲಸಕ್ಕೆ ಈ ಮಾರ್ಗದಲ್ಲಿ ಪಟ್ಟಣಕ್ಕೆ ಬರೋ ಸಾರ್ವಜನಿಕರ ಶಾಪ ಖಂಡಿತ ತಟ್ಟುತ್ತೆ.

ತಟ್ಟಲೆ ಬೇಕು ಬೇಕು ಅದೇನೋ ಕಸ ಹಾಕಬಾರದು ಅಂತ ಸಿಸಿ ಕ್ಯಾಮೆರಾ ಹಾಕಿದಿರಿ ಅದ್ಯಾಕೆ ಕೆಲಸ ಮಾಡುತ್ತಿಲ್ಲವ ಅಥವಾ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ ಅಂತ ಆ ಬಿಲ್ ಕೂಡ ಗುಳುಂ ಆಯ್ತಾ ಅನುಮಾನ ಪಡ್ಲೆ ಬೇಕು, ನಿಮ್ ಹಗರಣ ಒಂದ,ಎರಡ ನೋಡಿ ಸ್ವಾಮಿ ಪಾಪ ಏನೋ ಕಾಯಂ ಹುದ್ದೆ ಅಂದ ಮಾತ್ರಕ್ಕೆ ಕೆಲಸ ಮಾಡೋ ವ್ಯಕ್ತಿ ನಿಮ್ಮ ಹಾಗೇ. ಮನುಷ್ಯ ಆ ಜಾಗದಲ್ಲಿ ಇರೋದು ಅವರ ಆರೋಗ್ಯ ತುಂಬಾನೇ ಇಂಪಾರ್ಟೆಂಟ್… ಹಾಗಾಗಿ ಅಲ್ಲಿನ ದುರ್ವಸನೆ ತಗೊಂಡ್ ಕೆಲಸ ಮಾಡೋಕೆ ಕಷ್ಟ.. ಅವರ ಅರೋಗ್ಯ ದೃಷ್ಟಿಯಿಂದ ಬೇಕಾದ ಸಾಮಗ್ರಿಗಳನ್ನು ದೊರಕಿಸಿ.. ಅವರ ಕುಟುಂಬದ ಜೊತೆಗೆ ಚೆನ್ನಾಗಿ ಇರೋಕೆ ವ್ಯವಸ್ಥೆ ಮಾಡಿ ಕೊಡಿ ಎಂಬುದು ನಮ್ಮ ವಾಹಿನಿ ಆಶಯ…