ಮೂಡಿಗೆರೆ : ತಾಲ್ಲೂಕಿನ ಚಕ್ಕಮಕ್ಕಿ ಗ್ರಾಮದ ಪ್ರಗತಿಪರ ವ್ಯಕ್ತಿಯಾಗಿದ್ದ ದಿವಂಗತ ರಫೀಕ್ ಬಿ.ಎ. ಅವರ ಪುತ್ರ ಹಾಗೂ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗದ ವಿದ್ಯಾರ್ಥಿ ಮೊಹಮ್ಮದ್ ನಹೀಮ್, ‘ಡೇಟಾನೋವಾ’ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸೃಜನಶೀಲ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ರಚಿಸಲಾದ ಈ ಸಂಘಕ್ಕೆ ನಹೀಮ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ತಾಂತ್ರಿಕ ಕಾರ್ಯಗಾರಗಳು, ಕ್ಲಬ್ ಚಟುವಟಿಕೆಗಳು ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಾಮುಖ್ಯತೆ ನೀಡುತ್ತಾ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ನಹೀಮ್ ಮುನ್ನಡೆ ನೀಡಲಿದ್ದಾರೆ.
ನಹೀಮ್ ಅವರ ಆಯ್ಕೆ ಕುರಿತು ಚಕ್ಕಮಕ್ಕಿ ಗ್ರಾಮಸ್ಥರು, ಸ್ನೇಹಿತರು ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
