Saturday, February 7, 2026
Homeಜಿಲ್ಲಾಸುದ್ದಿಮೂಡಿಗೆರೆ: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನ ಆಚರಣೆ

ಮೂಡಿಗೆರೆ: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನ ಆಚರಣೆ

ಮೂಡಿಗೆರೆ: ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಮುಖ ಸಂದೇಶಗಳಾದ ಒಂದು ಜಾತಿ, ಒಂದು ಮತ, ಒಂದೇ ದೇವರು ಮನುಷ್ಯನಿಗೆ ಎಂಬ ತತ್ವದ ಅನ್ವಯ ಎಲ್ಲರೂ ಸಮಾನರು,ಜಾತಿಯನ್ನು ಕೇಳಬೇಡಿ, ಹೇಳಬೇಡಿ ಮತ್ತು ಚಿಂತಿಸಬೇಡಿ’ ಎಂದು ವಿಶ್ವಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನವನ್ನು ಸಡಗರ ಸಂಭ್ರಮದಿಂದ ಪಟ್ಟಣದ ಡಾ. ಪಿ. ಎ. ಅಡ್ಯಾಂತಾಯ ಸ್ಮಾರಕ ಸಮುದಾಯ ಭವನದಲ್ಲಿ ಆಚರಿಸಲಾಯಿತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಬಿಲ್ಲವ ಮಹಾ ಮಂಡಳಿ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್‌ ಸಮಾಜನದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವೆಂಬ, ಒಬ್ಬ ಮಹಾನ್ ಸಮಾಜಕ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ತಮ್ಮ ಇಡೀಜೀವನವನ್ನು ಮುಡಿಪಾಗಿಟ್ಟು ಹೋರಾಡಿದವರು ಎಂದು ಅಪರು ಹೇಳಿದರು.

ಮುಂದಿನ ವರ್ಷ ಸಂಘಟನೆಗೆ 50 ವರ್ಷ ತುಂಬಿದ ಸಂಭ್ರಮದಲ್ಲಿ ನಾವೆಲ್ಲ ಇದ್ದು ಈ ಕಾರ್ಯಕ್ರಮಕ್ಕೆ ವಿದೇಶದಲ್ಲಿರುವ ನಮ್ಮ ಸಮುದಾಯದ ಎಲ್ಲರನ್ನು ಆಹ್ವಾನಿಸಿ 50000 ಕ್ಕೂ ಹೆಚ್ಚು ಜನಸಂಖ್ಯೆ ಸೇರಿಸಿ ಅದ್ದೂರಿ ಕಾರ್ಯಕ್ರಮ ಮಾಡೋಣ ಎಂದರು.

ಗುರುಗಳಿಗೆ ಪೂಜೆ ಸಲ್ಲಿಸುತ್ತ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ ಎಂದರು.ಬಿಲ್ಲವ ಸಂಘಟನೆ ದೊಡ್ಡ ಮಟ್ಟದಲ್ಲಿ ಬೆಳೆದು ಇನ್ನಷ್ಟು ಸಮಾಜ ಸೇವೆ ಮಾಡಬೇಕು ಸೇವೆ ಮಾಡುವುದನ್ನೆ ನಮಗೆ ಹಿರಿಯರು ತಿಳಿಸಿದ್ದಾರೆ.

ಸಂಘದ ಬಳಿ ನಾವು ಹೋಗಬೇಕು. ಸಂಘ ನಮ್ಮ ಬಳಿ ಬರುವುದಿಲ್ಲ.. ಕಷ್ಟದಲ್ಲಿ ಸಂಘಟನೆ ಕೈ ಹಿಡಿಯುತ್ತದೆ ಎಂದರು.ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮನೋಜ್ ಪೂಜಾರಿ ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವವೇ ಇಂದು ಜಗತ್ತಿನಲ್ಲಿರುವುದು.

ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು ಎಂಬ ಸತ್ಯವಾಕ್ಯವನ್ನು ಸಮಾಜಕ್ಕೆ ಸಾರಿದವರಲ್ಲಿ ಪ್ರಮುಖರು ಎಂದು ತಿಳಿಸಿದರು.

ಸಂಸ್ಕೃತ ಭಾಷೆಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು.

ಅವರು ಬೋಧಿಸಿದ್ದು, ದೇಶ ಸೇವೆಯೇ ಈಶ ಸೇವೆಯೆಂದು. ನಾರಾಯಣ ಗುರುಗಳು ಕೇರಳದ ಶಿವಗಿರಿಯಿಂದ 45 ಕಿಲೋಮೀಟರ್ ಉತ್ತರಕ್ಕೆ ತಿರುವನಂತಪುರದಿಂದ 12 ಕಿಲೋಮೀಟರ್ ದೂರದ ಉತ್ತರಪೂರ್ವ ಸೀಮೆಯಲ್ಲಿರುವ ಚೆಂಬಳಾಂತಿ ಗ್ರಾಮದ ತೀಯಾ ಸಮಾಜದವರಾದ ಮದನ್ ಆಸನ್ ಹಾಗೂ ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ದಿನಾಂಕ 18-8-1854 ರಂದು ಜನಿಸಿದರು ಎಂದು ಅವರು ವಿವರಿಸಿದರು.

ಶ್ರೀಮತಿ ನಯನ ಮೋಟಮ್ಮ ಮಾತನಾಡಿ, ಶಾಸಕಿಯಾಗಿ ನನಗೆ ಎಲ್ಲಾ ಸಂಘ ಧರ್ಮ ಒಂದೇ ಆಗಿದ್ದು, ಮೀಸಲು ಕ್ಷೇತ್ರದಲ್ಲಿ ನಾನಿದ್ದು ಎಲ್ಲಾ ಕೆಲಸಗಳು ಸಮನಾಗಿ ನಡೆಯುತ್ತಿವೆ. ಎಂದರು.

ನಾರಾಯಣ ಗುರುಗಳ ಚಿಂತನೆಯಂನಂತೆ ಈ ಸಮುದಾಯದವರು ಮೊದಲು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು.

ಆ ಮೂಲಕ ಸಮುದಾಯ ಸಮಾಜಿಕವಾಗಿ ಆರ್ಥಿಕ ವಾಗಿ ಮುಂದೆ ಬರಬೇಕು ಎಂದರು. ಮಹಿಳೆಯರ ಶಕ್ತಿ ಕಂಡು ಹೆಮ್ಮೆ ಆಗುತ್ತಿದೆ. ಇಲ್ಲೂ ಸಹ ಹೆಣ್ಮಕ್ಕಳು ಸ್ಟ್ರಾಂಗ್ ಅನ್ನೋದನ್ನ ಸಾಬೀತಾಗಿದ್ದು.

ಮಹಿಳೆಯರು ಸ್ವಾವಲಂಬಿ ಗಳಾಗಬೇಕು ಎಂದರು. ಈ ಸಮುದಾಯದಿಂದ ಒಬ್ಬ ಯುವಕ ಅಥವಾ ಯುವತಿ IAS ಆಗಲೇ ಬೇಕು ಈ ಕಟ್ಟಡದ ಸಂಪೂರ್ಣ ಕಾಮಗಾರಿಗೆ ಸಹಕಾರ ನೀಡುವುದಾಗಿ ತಿಳಿಸಿದರು
ಕಾರ್ಯಕ್ರಮ ಉಪನ್ಯಾಸ ಭಾಷಣ ನೀಡಿದ ಶ್ರೀ ರವಿಕಿರಣ್ ಶಾಂತಿ ಬಿಳಗುಳ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಜಕ್ಕೆ ನೀಡಿದ ಕೊಡುಗೆ ನಾವೆಲ್ಲ ಮರೆಯಬಾರದು.

ಅವರ ಮಾರ್ಗದರ್ಶನ ನಮಗೆಲ್ಲ ಸ್ಪೂರ್ತಿಯಾಗಿಟ್ಟುಕೊಂಡು ಜೀವನದಲ್ಲಿ ಮುಂದೆ ಸಾಗೋಣ ಎಂದರು. ಕೇರಳದಲ್ಲಿ ಅನೇಕ ಜಾತಿಪಂಥಗಳಿದ್ದವು. ಮೇಲ್ದಾತಿ, ಕೆಳಜಾತಿ, ಅಸ್ಪೃಷ್ಯತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಎಲ್ಲೆಡೆ ಜನರ ಮನಸ್ಸನ್ನು ಹರಿದು ತಿನ್ನುತ್ತಿದ್ದವು. ಆಗ ಪಣತೊಟ್ಟು ಜಾತಿಯತೆ ತೊಲಗಿಸುವುದು ತಮ್ಮ ಜೀವನದ ಧೈಯವೆಂದು ಶಪಥಮಾಡಿದವರು ನಾರಾಯಣ ಗುರುಗಳು ಎಂದರು.

ಸಮಾಜದ ವಿರೋಧಿ ಕಾರ್ಯಗಳಿಗೆ ಮುಟ್ಟುಗೋಲು ಹಾಕಲು ಅವರು ತೆಗೆದುಕೊಂಡ ಕ್ರಮಗಳು, ಆಂದೋಲನಗಳು ಅನನ್ಯ. ಕೆಳವರ್ಗದಲ್ಲಿ ಜನಿಸಿದ ಜನರಿಗೆ ದೇವಸ್ಥಾನಗಳಲ್ಲಿ ಅನುಮತಿಕೊಡಲು ಅವರು ಬೇಡಲಿಲ್ಲ. ಅಥವಾ ಹಿಂಸಾಚಾರದ ಚಳುವಳಿಗಳನ್ನೂ ನಡೆಸದೆ, ತಾವೇ ದೇವಾಲಯಗಳನ್ನು ಸ್ಥಾಪಿಸುವುದರ ಮೂಲಕ ಒಂದು ಹೊಸ-ಅನನ್ಯ-ಆಲೋಚನಾ ಕ್ರಮವನ್ನು ಹುಟ್ಟುಹಾಕಿದರು.

ಕೇರಳದಾದ್ಯಂತವೂ ಸುಮಾರು 60 ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿದರು ಎಂದು ಹೇಳಿದರು. ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು.

ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು. ಅಹಿಂಸೆಯಲ್ಲಿ ಬುದ್ಧ, ಯೋಗದಲ್ಲಿ ಅವರು ಪತಂಜಲಿ, ಜ್ಞಾನದಲ್ಲಿ ಶಂಕರ, ಅಹಿಂಸೆಯಲ್ಲಿ
ಮಾನವೀಯತೆಯಲ್ಲಿ ಏಸು ಗಳೆಲ್ಲರಂತೆ ಇದ್ದರು ಎಂದು ವಿವರವಾಗಿ ಉಪನ್ಯಾಸ ನೀಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾನಿದ್ಯ ಭೂಮಿಕಾ ಸಂಜನಾ,ಅನ್ವಿತಾ.ರಕ್ಷಿತ್. ಭುವನ್. ಅವರುಗಳನ್ನು ಗೌರವಿಸಲಾಯಿತು.

ಕರಾಟೆ ಕ್ಷೇತ್ರದಲ್ಲಿ 6 ವರ್ಷದ ವಿಭಾಗದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಕೀರ್ತಿ ಮೆರೆದ ಸಿಂಚನ ಹಾಗೂ ಸನ್ನಿದಿ ಅವರನ್ನು ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಗೌರವಧ್ಯಕ್ಷ ಸುರೇಶ್ ಪೂಜಾರಿ, ಹೆಚ್. ಎಂ. ಸತೀಶ್, ನಾಗರತ್ನ. ಯೋಗೀಶ್ ಪೂಜಾರಿ. ಸುಪ್ರಿಯಾ. ಗಂಗಮ್ಮ. ಗುಣಶೇಖರ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ :ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!