Saturday, February 14, 2026
Homeಜಿಲ್ಲಾಸುದ್ದಿಮೂಡಿಗೆರೆ: ಪುಲ್ವಾಮಾ ದಾಳಿಗೆ 7 ವರ್ಷ : ಹುತಾತ್ಮ ವೀರ ಯೋಧರಿಗೆ ABVP ವತಿಯಿಂದ ಗೌರವ...

ಮೂಡಿಗೆರೆ: ಪುಲ್ವಾಮಾ ದಾಳಿಗೆ 7 ವರ್ಷ : ಹುತಾತ್ಮ ವೀರ ಯೋಧರಿಗೆ ABVP ವತಿಯಿಂದ ಗೌರವ ನಮನ

ಮೂಡಿಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ವತಿಯಿಂದ ಪುಲ್ವಾಮ ದಾಳಿಯಿಂದ ಹುತಾತ್ಮ ಹೊಂದಿರುವ ಯೋಧರಿಗೆ ಮೂಡಿಗೆರೆ ನಗರದ ಅಮರ್ ಜವಾನ್ ವೃತ್ತದಲ್ಲಿ ಪುಷ್ಪಾರ್ಚನೆ ಹಾಗೂ ಜ್ಯೋತಿಬೆಳಗಿ ಮೌನಚರಣೆ ಸಲ್ಲಿಸುವುದರ ಮೂಲಕ ಕರಾಳ ದಿನ ಆಚರಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ABVP ತಾಲ್ಲೂಕು ಅಧ್ಯಕ್ಷ ಯಶವಂತ್, 2019 ಫೆ.14 ರಂದು ಪುಲ್ವಾಮಾ ಜಿಲ್ಲೆಯ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್’ಪಿಎಫ್ ಸಿಬ್ಬಂದಿನ್ನು ಸಾಗಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ಆತ್ಮಾಹುತಿ ಬಾಂಬರ್ ಇದ್ದ ವಾಹನವನ್ನು ಡಿಕ್ಕಿ ಹೊಡೆಸಿ ಸ್ಫೋಟ ನಡೆಸಲಾಗಿತ್ತು.

ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯಲ್ಲಿ ಭಾಗಿಯಾಗಿತ್ತು. 1989ರ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತೀ ದೊಡ್ಡ ದಾಳಿ ಇದಾಗಿತ್ತು. ಈ ದಾಳಿಗೆ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ದಾಳಿಯಲ್ಲಿ ಹುತಾತ್ಮರಾದವರ ಪೈಕಿ ಕರ್ನಾಟಕ ಯೋಧ ಹೆಚ್.ಗುರು ಕೂಡ ಒಬ್ಬರಾಗಿದ್ದಾರೆ. ಎಂದರು

ಯೋಧರು ಭಾರತದ ಪ್ರಮುಖ ಆಸ್ತಿ, ನಮಗಾಗಿ ಜೀವ ಬಿಟ್ಟ ಗೌರವಿಸುವುದು ನೆನಪಿಸುವುದು ಭಾರತೀಯರ ಆಧ್ಯ ಕರ್ತವ್ಯ ಯುವಕರು ರಾಷ್ಟ ಪ್ರೇಮ ಬೆಳೆಸಿಕೊಳ್ಳಬೇಕು. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕಾರ್ಯಕರ್ತರು ಜಯ ಘೋಷಣೆ ಕೂಗಿ ಶತ ಶತ ನಮನಗಳು ಸಲ್ಲಿಸಿದರು

ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಶ್ರವಣ್ ಹಾಲೂರು, ಡಿಎಸ್ ಬಿಜಿ ಕಾಲೇಜು ಘಟಕ ಅಧ್ಯಕ್ಷ ಅಂಕುಶ್, ಉಪಾಧ್ಯಕ್ಷ ಸಾತ್ವಿಕ್, ಸಾಮಜಿಕ ಜಾಲತಾಣ ಪ್ರಮುಖ್ ಹರ್ಷಿತ್, ಹೆಚ್,ಆರ್, ರತನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!