Tuesday, February 10, 2026
Homeಕ್ರೈಮ್ಮೂಡಿಗೆರೆ: ವೈದ್ಯರು ಸಾವನ್ನಪ್ಪಿದೆಯೆಂದು ಕಳುಹಿಸಿದ್ದು, ಜೋರಾಗಿ ಅತ್ತು ಉಸಿರಾಡಿ ಬದುಕಿದ ಕಂದಮ್ಮ!

ಮೂಡಿಗೆರೆ: ವೈದ್ಯರು ಸಾವನ್ನಪ್ಪಿದೆಯೆಂದು ಕಳುಹಿಸಿದ್ದು, ಜೋರಾಗಿ ಅತ್ತು ಉಸಿರಾಡಿ ಬದುಕಿದ ಕಂದಮ್ಮ!

ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆಯೊಂದು ಆಕ್ಸಿಜನ್‌ ತೆಗೆದರೆ ಮಗು ಸಾಯುತ್ತೆಂದು ಹೇಳಿ ಕೊಟ್ಟು ಕಳುಹಿಸಿದ ಮಗುವೊಂದು ರಸ್ತೆ ಮಾರ್ಗದಲ್ಲಿ ಜೋರಾಗಿ ಅತ್ತು ಉಸಿರಾಡಿ ಪುನರ್‌ ಜನ್ಮ ಪಡೆದುಕೊಂಡಿದೆ.

ಈ ಮಗು ಮೂಡಿಗೆರೆ ತಾಲೂಕಿನ ಸುಪ್ರೀತಾ ಮತ್ತು ಹರೀಶ್‌ ದಂಪತಿಯದಾಗಿದೆ.

ಮಗುವಿಗೆ ಮೂರು ದಿನ ಚಿಕಿತ್ಸೆ ನೀಡಿ ಫಲಕಾರಿಯಾಗಿಲ್ಲ ಮಗು ಸಾಯುತ್ತದೆ ಎಂದು ಖಾಸಗಿ ಆಸ್ಪತ್ರೆಯವರು ಹೇಳಿದ್ದರು. ಆದರೆ ಊರಿಗೆ ಹೋಗುವ ಮಾರ್ಗದಲ್ಲಿ ಜೋರಾಗಿ ಅತ್ತು ಉಸಿರಾಡಿದ.

ಸ್ಮಶಾನಕ್ಕೆ ಹೋಗುತ್ತಿದ್ದ ಮಗುವನ್ನು ಮತ್ತೆ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಮಗು ಮೂಡಿಗೆರೆ ತಾಲೂಕಿನ ಲೋಕವಳ್ಳಿ ಗ್ರಾಮದ ಕಾಫಿ ಎಸ್ಟೇಟ್‌ ನಲ್ಲಿ ಕೂಲಿ ಕಾರ್ಮಿಕರ ಮಗುವಾಗಿತ್ತು.

ಇನ್ನೂ ಈ ಮಗು ಕೂಡಲೇ ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಅಲ್ಲದೇ ವೈದ್ಯರು ಮೂಡಿಗೆರೆಯಿಂದ ಹಾಸನದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!