ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ, ಕಡಿದಾಳು, ಬಕ್ಕಿ, ದಾರದಹಳ್ಳಿ ಗ್ರಾಮಗಳಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಬೈಕ್ ಸವಾರನಿಗೆ ರಸ್ತೆಯಲ್ಲಿ ಒಂಟಿ ಸಲಗ ಸಿಕ್ಕಿದ್ದು ವಿಡಿಯೋ ಮಾಡಿ ಹರಿಬಿಡಲಾಗಿದೆ. ಆನೆ ಇರುವ ಮಾಹಿತಿ ದೊರೆತಿದ್ದು
ಒಂಟಿ ಸಲಗ ಕಾಣಿಸಿಕೊಂಡ ಕಾರಣ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಹೊರಬರದಂತೆ ವಿನಂತಿ ಮಾಡಿದ್ದಾರೆ.ಹಾಗೆ
ಕಾಡಾನೆ ಕಂಡುಬಂದಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ