ಮೂಡಿಗೆರೆ: ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಅನಾಥ ವೃದ್ಧೆಯೊಬ್ಬರಿಗೆ ಆಶ್ರಯ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದೆ.
ಮೂಡಿಗೆರೆಯ ಬಿದರಹಳ್ಳಿ ಗ್ರಾಮದ ಲಕ್ಷ್ಮಮ್ಮ(80) ಎಂಬವರಿಗೆ ಬಂಧು ಬಳಗ ಯಾರೂ ಇಲ್ಲ. ಜೊತೆಗೆ ಅನಾರೋಗ್ಯ ಬೇರೆ. ಈ ವೃದ್ಧೆಯ ಕಷ್ಟ ನೋಡಲಾರದೇ ಅವರ ನೋವಿಗೆ ಮಿಡಿದ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಅವರನ್ನು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಜೊತೆಗೆ ಅವರಿಗೆ ಆಶ್ರಯದ ವ್ಯವಸ್ಥೆಯನ್ನೂ ಕಲ್ಪಿಸಿದೆ.ಅವರನ್ನು ತುಮಕೂರಿನ ಆಶ್ರಮ ಸೇರಿಸಿ, ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಇದೇ ಆಶ್ರಮದಲ್ಲಿ ಹೆಚ್ಚಿನ ಚಿಕಿತ್ಸೆ ಕೂಡ ನೀಡುವ ಭರವಸೆ ನೀಡಿದ್ದಾರೆ ಎಂದು ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಫಿಶ್ ಮೋಣು ತಿಳಿಸಿದ್ದಾರೆ.
ಈ ವೇಳೆ ಅಬ್ದುಲ್ ರೆಹಮಾನ್, ಮೂರ್ತಿ,ಹಸನ್ ಅಲಿ, ಗ್ರಾಮಸ್ಥರಾದ ಜಯರಾಮ್ ಗೌಡ್ರು ಬೈರೇಗೌಡ್ರು, ಜಯಂತ್ ಗೌಡ್ರು, ಗ್ರಾಮ ಪಂಚಾಯತಿ ಅಧ್ಯಕ್ಷ ಯೋಗೇಶ್, ಆಟೋ ಗಣೇಶ್ ಸೇರಿದಂತೆ ಸ್ಥಳೀಯರು ಇದ್ದರು.
