Thursday, March 26, 2026
Homeಜಿಲ್ಲಾಸುದ್ದಿಮೂಡಿಗೆರೆ : ಸಾಧನೆ ಮಾತನಾಗಬೇಕೆ ಹೊರತು, ಮಾತು ಸಾಧನೆಯಾಗಬಾರದು: ಆರತಿ ಕೃಷ್ಣ

ಮೂಡಿಗೆರೆ : ಸಾಧನೆ ಮಾತನಾಗಬೇಕೆ ಹೊರತು, ಮಾತು ಸಾಧನೆಯಾಗಬಾರದು: ಆರತಿ ಕೃಷ್ಣ

ಮೂಡಿಗೆರೆ : ತಾಲೂಕಿನಲ್ಲಿ ಡಿ. ಎಂ. ಪುಟ್ಟೇಗೌಡ ಅಭಿಮಾನಿ ಬಳಗದಿಂದ ವಿಧಾನಪರಿಷತ್ ಸದಸ್ಯೆ ಆರತಿ ಕೃಷ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆರತಿ ಕೃಷ್ಣ ಸಾಧನೆ ಮಾತಾಗಬೇಕೆ ಹೊರತು ಮಾತುಗಳೇ ಸಾಧನೆಯಗಬಾರದು ಈ ನಿಟ್ಟಿನಿಲ್ಲಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಿದರೆ ಜನರ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯವಿದೆ ಎಂದು ಹೇಳಿದರು.

ಪಕ್ಷದಲ್ಲಿ ನನಗೆ ಹೊರ ದೇಶದ ಕಾರ್ಯಕ್ರಮ ಆಯೋಜನೆ ಮಾಡುವ ಜವಾಬ್ದಾರಿ ನೀಡಿದ್ದರಿಂದ ಈ ಭಾಗದಲ್ಲಿ ಹೆಚ್ಚಾಗಿ ಗುರುತಿಕೊಳ್ಳಲು ಸಾಧ್ಯವಾಗಿರಲಿಲ್ಲ. ನನ್ನ ತಂದೆ ಕಂಡ ಕನಸು ಈಡೇರಿಸಲು ಇದೀಗ ಒಂದು ಅವಕಾಶ ಸಿಕ್ಕಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ದಿನದಲ್ಲಿ ಎಲ್ಲಾ ಸಂಘಟನೆ ಹಾಗೂ ಪಕ್ಷದ ಮುಖಂಡರೊಂದಿಗೆ ನಿರಂತರ ವಾಗಿ ಜೊತೆಗಿದ್ಫು ಸಂಪರ್ಕ ಮಾಡುವ ಮೂಲಕ ಜಿಲ್ಲೆಯಲ್ಲಿರುವ ಕಾಡು ಪ್ರಾಣಿಗಳ ಹಾವಳಿ. ಬೆಳೆ ಹಾನಿ. ಮುಂತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸುವುದಾಗಿ ತಿಳಿಸಿದರು.

ಇದೆ ವೇಳೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಆರತಿ ಕೃಷ್ಣ ಅವರ ತಂದೆ ಬೇಗಾನೆ ರಾಮಯ್ಯ ಅವರು ಮಂತ್ರಿಯಾದ ಸಂದರ್ಭದಲ್ಲಿ ಜಿಲ್ಲೆಯ ಉದ್ದಗಲಕ್ಕೂ ಹಳ್ಳಿ ಹಳ್ಳಿಗಳಲ್ಲಿ ಬಡ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಿದ್ದರು. ಈ ಹಿನ್ನಲೆ ಬೋರ್‌ವೆಲ್ ರಾಮಯ್ಯ ಎಂದೆ ಹೆಸರುವಾಸಿಯಾಗಿದ್ದರು. ಅವರ ಪುತ್ರಿ ಆರತಿಕೃಷ್ಣ ಅವರಿಗೆ ಎಂಎಲ್‌ಸಿ ಸ್ಥಾನ ದಕ್ಕಿರುವುದು ಶ್ಲಾಘನೀಯ ಎಂದರು.

ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ನೇರ ಒಡನಾಟ ಹೊಂದಿದ್ದರಿಂದ ಜಿಲ್ಲೆಯಲ್ಲಿ ರೈತರ, ಕಾರ್ಮಿಕರ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಕೆಂಪೇಗೌಡ ಒಕ್ಕಲಿಗ ವೇದಿಕೆ ಮೂಡಿಗೆರೆ ಘಟಕದ ವತಿಯಿಂದ ಆರತಿ ಕೃಷ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಎಂಎಲ್‌ಸಿ ಗಾಯಿತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಓ.ಎಸ್.ಗೋಪಾಲಗೌಡ, ಎಚ್.ಎಚ್.ದೇವರಾಜ್, ಬಿ.ಎಸ್.ಜಯರಾಂಗೌಡ, ಎಂ.ಪಿ.ಮನು, ಎಂ.ಎಲ್.ಮೂರ್ತಿ, ನಿರ್ಮಲಾ ಮಂಚೇಗೌಡ, ಸವಿತಾ ರಮೇಶ್, ಡಾ.ವಿಜಯ್‌ಕುಮಾರ್, ಎಚ್.ಆರ್.ಅಶೋಕ್, ಎ.ಜೆ.ಸುಬ್ರಾಯಗೌಡ, ಸಿ.ಕೆ.ಇಬ್ರಾಹಿಂ, ಅಯೂಬ್ ಹಾಜಿ, ಮನು ಮರೆಬೈಲ್, ಸುರೇಶ್ ಆಲ್ದೂರು ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!