ಮೂಡಿಗೆರೆ : ಹಳೇಮೂಡಿಗೆರೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮಪಂಚಾಯತಿ ಸದಸ್ಯರುಗಳ ಐದು ವರ್ಷಗಳ ಅವಧಿ ಮುಗಿದು ಫೆ 3ರಂದು ಹೊಸ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಕ ಮಾಡಿದ್ದರು ಫಲಕದಲ್ಲಿ ಮಾತ್ರ ಸದಸ್ಯರ ಹೆಸರನ್ನು ತೆಗೆಯದೆ ಹಾಗೆ ಬಿಟ್ಟಿರುವುದು ಅಚ್ಚರಿಯನ್ನು ತಂದಿದೆ.

ಈ ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆಢಳಿತಾಧಿಕಾರಿಯಾಗಿ ನೇಮಕಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು ಹಾಲಿ ಸದಸ್ಯರು ಇದ್ದಾರೆಂಬಂತೆ ನಾಮಫಲಕದಲ್ಲಿ ಪ್ರದರ್ಶಿಸುವ ಮೂಲಕ ನಿಯಮ ಬಾಹಿರವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಳೇ ಮೂಡಿಗೆರೆ ಗ್ರಾಮಪಂಚಾಯತಿಯಲ್ಲಿ ಕುಡಿಯುವ ನೀರಿನ ಪೈಪ್ ಗಳು ಒಡೆದು ನೀರು ಪೋಲಾಗುತ್ತಿದೆ ಅದನ್ನು ಸರಿ ಪಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರೆ ಗಾಢ ನಿದ್ರೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಈ ಹಿಂದೆ ಅಂದರೆ ಮಾಜಿ ಸದಸ್ಯರುಗಳನ್ನೆ ಅವಲಂಭಿತವಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಯಾವುದೇ ಕೆಲಸಕ್ಕೆ ಹೋದರೂ ಗ್ರಾಮಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಇಂದು ಕೇಕಾಶಗಳಿವೆ ಎರಡು ದಿನ ಬಿಟ್ಟು ಬನ್ನಿ ಎಂದು ಕಚೇರಿಯಿಂದ ಹೊರಕ್ಕೆ ಕಳುಹಿಸುತ್ತಿದ್ದಾರೆ. ಅದೇ ಮಾಜಿ ಸದಸ್ಯರುಗಳು ತಿಳಿಸಿದರೆ ತಕ್ಷಣವೇ ಅವರ ಕೆಲಸವನ್ನು ಮಾಡಿಕೊಡುತ್ತಿದ್ದಾರೆ, ಐದು ವರ್ಷದ ಅವದಿ ಮುಗಿದು ಅಧಿಕಾರಿಗಳು ನೇಮಕ ಗೊಂಡರು ಮಾಜಿ ಸದಸ್ಯರುಗಳ ಮಾತೆ ನಡೆಯುತ್ತಿದೆ ಎಂದರೇ ಅಧಿಕಾರಿಗಳನ್ನು ನೇಮಕ ಮಾಡಿರುವುದು ಅಧಿಕಾರಿಗಳು ನಾಮಕವಸ್ಥೆಗೆ ಎಂದು ದೂರಿರುವ ಸ್ಥಳೀಯರು ತಕ್ಷಣವೇ ಮಾಜಿ ಸದಸ್ಯರುಗಳ ಫಲಕದಿಂದ ತೆಗೆಯುವುದರೊಂದಿಗೆ, ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡಿಸದೇ ಇದ್ದಲ್ಲಿ ಅಧಿಕಾರಿಗಳ ವಿರುದ್ದ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
