Wednesday, March 25, 2026
Homeಕ್ರೈಮ್ಮೂಡಿಗೆರೆ: ಪಟ್ಟಣದಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್ :‌ ದೂರು - ಪ್ರತಿದೂರು ಸಲ್ಲಿಕೆ

ಮೂಡಿಗೆರೆ: ಪಟ್ಟಣದಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್ :‌ ದೂರು – ಪ್ರತಿದೂರು ಸಲ್ಲಿಕೆ

ಮೂಡಿಗೆರೆ: ಕಾಫಿನಾಡು ಚಿಕ್ಕಮಗಳೂರಲ್ಲಿ ಮತ್ತೆ ಕೇಳಿಬಂತು ಲವ್ ಜಿಹಾದ್ ಪ್ರಕರಣ.. ಹೌದು ಮೂಡಿಗೆರೆ ಪಟ್ಟಣದಲ್ಲಿ ಲವ್ ಜಿಹಾದ್ ಎಂಬ ಆರೋಪವೊಂದು ಕೇಳಿ ಬಂದಿದ್ದು ಪಿಯುಸಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ಸಮುದಾಯದ ಅಪ್ರಾಪ್ತ ಯುವಕ ಮತ್ತು ಹತ್ತನೇ ತರಗತಿ ಓದುತ್ತಿರುವ ಹಿಂದೂ ಸಮುದಾಯದ ಅಪ್ರಾಪ್ತ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಇಬ್ಬರೂ ಅನ್ಯ ಧರ್ಮಕ್ಕೆ ಸೇರಿದವರಾಗಿವುದರಿಂದ, ಅವರ ಪ್ರೇಮದ ವಿಚಾರ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಅಪ್ರಾಪ್ತ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ​

ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಘಟನೆಯ ಬೆನ್ನಲ್ಲೇ ಬಾಲಕಿಯ ತಂದೆ ಕೂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನ್ನ ಮಗಳ ವಿಚಾರದಲ್ಲಿ ಯುವಕನ ವರ್ತನೆಯನ್ನು ಖಂಡಿಸಿ ದೂರು ನೀಡಿದ್ದಾರೆ. ಎರಡು ಕಡೆ ಯವರ ದೂರಿನ ಹಿನ್ನಲೆ ಪೊಲೀಸರು FIR ಸಂಖ್ಯೆ 51/2026 ಹಾಗೂ 52/2026 ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!