ಮೂಡಿಗೆರೆ: ಚೈತನ್ಯ ಎ.ಎ. ಸಹಯೋಗ ಮೂಡಿಗೆರೆ ಇವರ ವತಿಯಿಂದ ದೀನ ದಯಾಳು ಉಪಾಧ್ಯಾಯ ಸಭಾ ಭವನದಲ್ಲಿ ಮದ್ಯವ್ಯಸನಿಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಆಲ್ಕೋಹಾಲಿಕ್ ಅನಾನಿಮಸ್ ಉಚಿತ ಸಲಹೆ ನೀಡುವ ಸಂಸ್ಥೆಯಾಗಿದ್ದು, ಮೂಡಿಗೆರೆ ಪಟ್ಟಣಕ್ಕೆ ಎ.ಎ.ಆಗಮಿಸಿ ಇಂದಿಗೆ 27 ವರ್ಷ ಕಳೆದಿದ್ದುಈ ಹಿನ್ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
1998ರಲ್ಲಿ ಮೂಡಿಗೆರೆಯಲ್ಲಿ ಇಬ್ಬರು ಮಧ್ಯ ವ್ಯಸನಿಗಳಿಂದ ಆರಂಭವಾದ ಸಂಸ್ಥೆ ಹಲವಾರು ಮದ್ಯವ್ಯಸನಿಗಳಿಗೆ ಮದ್ಯ ಸೇವನೆಯಿಂದ ದೂರವೀರಲು ಸಹಾಯಕವಾಗಿದೆ. ವಿಶ್ವದ 190.ಕ್ಕೂ ಹೆಚ್ಚು ದೇಶಗಳಲ್ಲಿ ಎ.ಎ.ಗ್ರೂಪ್ ಗಳು ಕೆಲಸ ಮಾಡುತ್ತಿವೆ.ಗೌಪ್ಯತೆ ಕಾಪಾಡುವುದರ ಜೊತೆಗೆ ಉಚಿತವಾಗಿ ಸೇವೆ ನೀಡಲಾಗುವುದು. ಯಾವುದೆ ಚಿಕಿತ್ಸೆ ಇರುವುದಿಲ್ಲ ಎಂಬುದಾಗಿ ಸಂಸ್ಥೆ ಮೂಲಗಳಿಂದ ತಿಳಿಸಿದೆ.
ನಿಮಗೆ ಅಥವಾ ನಿಮ್ಮವರಿಗೆ ಮದ್ಯವ್ಯಸನದ ವ್ಯಸನದಿಂದ ಹೊರಗೆ ಬರಲು ಅವಶ್ಯಕತೆ ಇದೆಯೆ ಸಹಾಯವಾಣಿ ಸಂಖ್ಯೆ 9632367598 ಸಂಪರ್ಕಿಸಬಹುದು.
ಈ ಕಾರ್ಯಕ್ರಮಕ್ಜೆ ಮಂಗಳೂರು, ಕೇರಳ, ಉಡುಪಿ, ಕಾರ್ಕಳ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,ದಾವಣಗೆರೆ ಹಾಗೂ ವಿವಿಧ ಭಾಗಗಳಿಂದ ಮದ್ಯ ವ್ಯಸನಿಗಳು ಭಾಗವಹಿಸಿದ್ದರು.