Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ಪಟ್ಟದೂರು ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬ್ಯಾಡ್ಮಿಂಟನ್ ಆಯೋಜನೆ

ಮೂಡಿಗೆರೆ: ಪಟ್ಟದೂರು ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬ್ಯಾಡ್ಮಿಂಟನ್ ಆಯೋಜನೆ

ಮೂಡಿಗೆರೆ: ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ಪಟ್ಟದ್ದುರು ವತಿಯಿಂದ ಕ್ಲಬ್ ಆಹ್ವಾನಿತ ಬ್ಯಾಡ್ಮಿಟನ್ ಪಂದ್ಯಕೂಟ ಪಟ್ಟದೂರು ಕ್ಲಬ್ ನಲ್ಲಿ ನಡೆಯಿತು

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷ ಅರುಣ್ ಚೆಂಗಪ್ಪ, ಕ್ರೀಡೆ ಸ್ನೇಹ ವೃದ್ಧಿಗೆ ಸಹಕಾರಿಯಾಗಿದೆ. ಹಳ್ಳಿ ಪ್ರತಿಭೆಗಳು ಡೆಲ್ಲಿ ಮಟ್ಟದ ಕ್ರಿಡಾಕೂಟದಲ್ಲಿ ಭಾಗಿಯಾಗಿ ಯಶಸ್ಸು ಕಾಣಲಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು  

ಆಯೋಜಕರಾದ ಕುಲದೀಪ್ ಗೌಡ ಮಾತನಾಡಿ, ವೃತ್ತಿ ಜೀವನದಲ್ಲಿ ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಯುವಕರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.

ಕೆಲ ಸಂದರ್ಭಗಳಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಯುವಕರು ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕಾರ್ಯ ಒತ್ತಡದ ನಡುವೆ ಆರೋಗ್ಯದ ಗಮನ ಹರಿಸುವುದು ಕಷ್ಟ. ದೈಹಿಕ ಆರೋಗ್ಯಕ್ಕಾಗಿ ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.

ಬದಲಾದ ಆಹಾರ ಪದ್ಧತಿಯಿಂದ ದೈಹಿಕ ದಂಡನೆ ಇಂದು ಅಗತ್ಯವಾಗಿದೆ. ಇಲ್ಲವಾದಲ್ಲಿ ರೋಗಗಳು ಬರುತ್ತವೆ. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು

ಗ್ರಾಮ ಪಂಚಾಯಿತಿ ಸದಸ್ಯ ಸಂಪತ್ ಗೌಡ ಬಿಳ್ಳೂರು ಮಾತನಾಡಿ, ಕ್ರೀಡೆಯೂ ಜೀವನದ ಒಂದು ಭಾಗವಾಗಿದ್ದು ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತದೆ. ನೀತಿ ನಿಯಮಗಳ ಸಂವಹನೆಯೊಂದಿಗೆ ಶಿಸ್ತಿನ ಅರಿವು ಉಂಟಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವುಗಳು ಸಹಜ ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೆಯೇ ಜೀವನದ ಒಂದು ಭಾಗವೆಂದು ಪರಿಗಣಿಸುವುದರಿಂದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯ ಎಂದರು.

ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ಹಿರಿಯ ಸದಸ್ಯ ಪ್ರಮೋದ್ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಕ್ರೀಡೆ ಜೊತೆಗೆ ಯೋಗ, ವ್ಯಾಯಾಮ ಮಾಡಬೇಕು ಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ದೇಹದ ಸ್ಥಿರತೆ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು

ಈ ಕ್ರೀಡಾಕೂಟದಲ್ಲಿ ಪ್ಲಾಂಟರ್ಸ್ ಕ್ಳಬ್ ಬಣಕಲ್ ಆಟಗಾರರಾದ ಚಂದನ್ ಹಾಗೂ ಸೌರವ್, ದ್ವಿತೀಯ ಬಹುಮಾನ ಪಟ್ಟದೂರ್ ಸ್ಪೋರ್ಟ್ಸ್ ಕ್ಲಬ್ ಆಟಗಾರರಾದ ಕುಲದೀಪ್ ಮತ್ತು ಅತಿತ್, ತೃತೀಯ ಬಹುಮಾನ ಪಟ್ಟದೂರ್ ಸ್ಪೋರ್ಟ್ಸ್ ಕ್ಲಬ್ ಆಟಗಾರರಾದ ನಿಯತ್ ಮತ್ತು ಶಿವಚರಣ್ ಪಡೆದುಕೊಂಡರು

ಈ ಸಂದರ್ಭದಲ್ಲಿ ವಂದೇ ಮಾತರಂ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷರು, ಹಿರಿಯ ಸದಸ್ಯರು, ಹಾಲಿ ಸದಸ್ಯರು, ವಿವಿಧ ಕ್ಲಬ್ ಸದಸ್ಯರು ಸೇರಿದಂತೆ ಬಿಳ್ಳೂರು, ಪಟ್ಟದೂರು ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!