Thursday, March 26, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಾಂಗ್ಲಾ ನುಸುಳುಕೋರರಿಂದ ಭಾರತಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ: ಸುದೇವ್ ಗುತ್ತಿ

ಮೂಡಿಗೆರೆ: ಬಾಂಗ್ಲಾ ನುಸುಳುಕೋರರಿಂದ ಭಾರತಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ: ಸುದೇವ್ ಗುತ್ತಿ

ಮೂಡಿಗೆರೆ: ಜಿಲ್ಲೆಯಲ್ಲಿ ಬಾಂಗ್ಲಾ ನುಸುಳುಕೋರರಿಂದ ಕಾನೂನು ಬಾಹೀರವಾದ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸುದೇವ್ ಗುತ್ತಿ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆ ಅಧಿಕವಾಗಿದೆ. ಇಲ್ಲಿನ ಕಾನೂನಿಗೆ ಬೆಲೆ ಕೊಡದೇ ಅಕ್ರಮ ಚಟುವಟಿಕೆ ಹೆಚ್ಚಾಗಿ ನಡೆಸುತ್ತಿದ್ದಾರೆ. ಬಾಂಗ್ಲಾದವರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೂ, ವಿಳಾಸವಿಲ್ಲದ ಕಾರಣ ಪೊಲೀಸರು ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರಿಯೆಗೊಂಡಿದೆ. ಈಗಾಗಲೇ ಕಾಫಿ ತೋಟಕ್ಕೆ ಕಾರ್ಮಿಕರ ಕೊರತೆಯಿಂದಾಗಿ ತೋಟದ ಮಾಲೀಕರು ಬಾಂಗ್ಲಾ ವಲಸಿಗರ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಅವರಿಗೆ ಆಧಾರ್ ಕಾರ್ಡ್ ಸೇರಿದಂತೆ ಇತರೇ ಮೂಲ ಸೌಕರ್ಯ ಒದಗಿಸುತ್ತಿದ್ದಾರೆ. ತೋಟದ ಮಾಲೀಕರಿಂದ ನೆಲೆ ಪಡೆದುಕೊಂಡಿರುವ ಬಾಂಗ್ಲಾದವರಿಂದ ಯಾವುದೇ ಅಹಿತಕರ ಘಟನೆ ನಡೆದರೆ, ಮೊದಲು ತೋಟದ ಮಾಲೀಕರನ್ನೇ ಆರೋಪಿಯನ್ನಾಗಿ ಮಾಡಬೇಕೆಂದು ಆಗ್ರಹಿಸಿದರು. ಅಸ್ಸಾಂನವರೆಂದು ತಪ್ಪು ಮಾಹಿತಿ ನೀಡಿ ಭಾರತದಲ್ಲಿ ದೊಡ್ಡ ಮಟ್ಟದ ದ್ರೋಹಿ ಕೆಲಸ ಮಾಡಲು ಸಜ್ಜಗುತ್ತಿದ್ದಾರೆ ಎಂದರು

ಮೊನ್ನೆಯಷ್ಟೇ ಬಾಂಗ್ಲಾದಲ್ಲಿ ನಡೆದ ಹಿಂದೂ ಯುವಕ ದೀಪು ಚಂದ್ರದಾಸ್ ಹತ್ಯೆ ನಡೆಸಿರುವುದು ಖಂಡನೀಯ. ಅಸ್ಸಾಂ ಮುಖ್ಯಮಂತ್ರಿ ಕೂಡ ಬಾಂಗ್ಲಾ ನುಸುಳುಕೋರರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಬಾಂಗ್ಲಾದವರು ತೋಟದಲ್ಲಿ ಕೆಲಸ ಮಾಡುವ ಜತೆಗೆ ವಾರದ ಸಂತೆಯಲ್ಲಿ ವ್ಯಾಪಾರ ವಹಿವಾಟು ಪ್ರಾರಂಭಿಸಿದ್ದಾರೆ. ಅಲ್ಲದೇ ಮದುವೆಯಾದ ಅಪ್ರಾಪ್ತ ಬಾಲಕೀಯರು ಗರ್ಭಿಣಿಯಾಗುತ್ತಿರುವುದು ಕಂಡು ಬರುತ್ತಿದೆ. ಅವರಿಗೆ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಜನನ ಪ್ರಮಾಣ ಪತ್ರ ಪಡೆದು, ಇಲ್ಲಿನ ಮೂಲ ದಾಖಲೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಮುಂದಿನ ದಿನದಲ್ಲಿ ಅಪಾಯ ತರುವ ಮುನ್ಸೂಚನೆಯಾಗಿದೆ.

ಹಾಗಾಗಿ ಇನ್ನು ಒಂದು ವಾರದಲ್ಲಿ ನಮ್ಮ ದೇಶದ ಮೂಲನಿವಾಸಿಗಳ ಭದ್ರತೆಗೆ ಜಿಲ್ಲಾಡಳಿತ ಮತ್ತು ಸರಕಾರ ಕ್ರಮ ವಹಿಸಿ, ಬಾಂಗ್ಲಾ ನಿವಾಸಿಗಳನ್ನು ಮೂಲ ಸ್ಥಾನಕ್ಕೆ ಸ್ಥಳಾಂತರಿಸಬೇಕು. ಇಲ್ಲವಾದರೆ ತಾವೇ ಬಾಂಗ್ಲಾ ನಿವಾಸಿಗಳನ್ನು ಓಡಿಸಲು ಮುಂದಾಗಬೇಕಾಗುತ್ತದೆ ಇಲ್ಲವಾದರೆ ಬಾಂಗ್ಲಾ ವಲಸಿಗರಿಂದ ಭಾರತಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತು ತಾಲೂಕು ಉಪಾಧ್ಯಕ್ಷ ಅಭಿಲಾಷ್ ಉಗ್ಗೇಹಳ್ಳಿ, ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಭಜರಂಗದಳ ತಾಲೂಕು ಸಂಚಾಲಕ ಸಂತೋಷ್ ಜನ್ನಾಪುರ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!