ಮೂಡಿಗೆರೆ: ಮಲೆನಾಡ ಪರಿಸರ ಹಾಗೂ ಇಲ್ಲಿನ ಜನಗಳೇ ಹಾಗೆ ಸದಾ ಶಾಂತಿ ಕಾಪಾಡೋದರಲ್ಲಿ ಎತ್ತಿದ ಕೈ ಹೌದು ಮಲೆನಾಡು ಅಂದರೆ ಭೂ ಲೋಕದ ಸ್ವರ್ಗ ಅಂತಾನೆ ಹೇಳಬಹುದು ಆದ್ರೆ ಸಕಲೇಶಪುರ ತಾಲೂಕು ಮತ್ತು ಮೂಡಿಗೆರೆ ತಾಲ್ಲೂಕಿಗೂ ಅಂಟಿಕೊಂಡಿರುವ ಆ ಗ್ರಾಮವೇ ಮರಗುಂದ ಅದೆಷ್ಟೋ ಪ್ರವಾಸಿಗರ ನೆಚ್ಚಿನ ಸ್ಥಳ ಇದಾಗಿದ್ದು ಇಲ್ಲಿನ ಪರಿಸರಕ್ಕೆ ಮಾರುಹೋಗದ ಜನರಿಲ್ಲ ಬಿಡಿ.

ಹೀಗೆ ದೇವಾಲಯದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ನಿಟ್ಟಿನಲ್ಲಿ ಪಬ್ಲಿಕ್ ಇಂಪಾಕ್ಟ್ ಭೇಟಿ ಕೊಟ್ಟಾಗ ಕಂಡಿದ್ದು ಮಾತ್ರ ಮೂಲಭೂತ ಸೌಕರ್ಯ ಕೊರತೆಗಳೇ ಸಮಸ್ಯೆಗಳ ಸರಮಾಲೆಯನ್ನು ಕೊರಳಿಗೆ ಧರಿಸಿಕೊಂಡು ಮೌನವಾಗಿ ಭೈರೇಶ್ವರ ಸ್ವಾಮಿ ಕುಳಿತನೆ ಎಂಬ ಪ್ರಶ್ನೆ ಕಾಡುತ್ತಿದೆ..
ದೇವಸ್ಥಾನ ಅರ್ಚಕ ಶ್ರೀ ಸುಧೀರ್ ಭಟ್ ಅವರು ನಮ್ಮ ವಾಹಿನಿಗೆ ಕೆಲವು ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸುತ್ತ ಹೋದ ಸಂದರ್ಭದಲ್ಲಿ ಪ್ರಮುಖ ವಿಚಾರಗಳನ್ನು ಸಮಾಜಕ್ಕೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿಸುವ ಒಂದು ಪ್ರಯತ್ನವೇ ನಮ್ಮ ಉದ್ದೇಶ.
ಅದೇನೋ ಹೇಳ್ತಾರಲ್ಲ ದೂರದ ಬೆಟ್ಟ ನೋಡೋಕೆ ನುಣ್ಣಗೆ ಅಂತ ಆ ಮಾತು ನಿಜಕ್ಕೂ ಸತ್ಯ, ಈ ಸ್ಟೋರಿ ಓದಿದ ನಿಮಗು ಕೂಡ ಹೀಗೆ ಅನ್ನಿಸುತ್ತೆ.ಅಬ್ಬಾಬ್ಬಾ ಅಲ್ಲಿ ಒಂದೆರಡು ಅಲ್ಲ ಸ್ವಾಮಿ ಸಮಸ್ಸೆಗಳ ಸುರಿಮಳೆಯೇ ಇದೆ.

ಮಾತು ಮುಂದುವರೆಸಿದ ಅರ್ಚಕರು ಮೊದಲು ಮೌನವಾಗಿ ಬೇಸರದಿಂದಲೇ ಹೇಳಲು ಆರಂಭಿಸಿದರು ಮೊದಲು ದೂಷಿಸಿದ್ದೆ ಕೆಲ ಮಾನಗೆಟ್ಟ ಪ್ರವಾಸಿಗರ ಬಗ್ಗೆ.. ಇವರೇನು ಮನುಷ್ಯರೇ!? ಮಾನವೀಯತೆ ಇದೆಯಾ..!?. ಮಾನವ ಕುಲಕ್ಕೆ ಜನಿಸಿರುವರೆ?
ಪ್ರವಾಸಿಗರು ದೇವಾಲಯಕ್ಕೆ ಬಂದು ಕರ್ಕಶವಾಗಿ ಕೂಗುವುದು ಚಪ್ಪಲಿ ಧರಿಸಿ ಒಳ ಬರುವುದು, ಮದ್ಯಸೇವನೆ ಮಾಡಿ ಬರುವುದು ಹೀಗೆ ಅನೇಕ ರೀತಿಯ ದುರ್ವತನೆ ತೋರುತ್ತಿದ್ದೂ ಭಗವಂತನ ಪೂಜೆ ಸಲ್ಲಿಕೆ ಸಂದರ್ಭದಲ್ಲಿ ನೋವಾಗುತ್ತೆ.
ಇಂತವರ ಮೇಲೆ ಕಠಿಣ ಕ್ರಮಕ್ಕೆ ಅಗ್ರಹಿಸಿದರು ಇದಲ್ಲದೆ ಗೇಟ್ ಮುಂಭಾಗದಲ್ಲಿ ಪಾದರಕ್ಷಗಳನ್ನು ಮನಬಂದಂತೆ ಬಿಚ್ಚಿ ಬರುವುದು ಅಲ್ಲದೆ. ಸ್ವಚ್ಛತೆ ಕಾಪಾಡುತ್ತಿಲ್ಲ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಶೌಚಾಲಯ ಉಪಯೋಗಕ್ಕೆ ಬಾರದೇ ದೇವಸ್ಥಾನದ ಸುತ್ತಮುತ್ತ ಮೂತ್ರ ವಿಸರ್ಜನೆ ಮಾಡುವುದು ದೇವರ ಕಾರ್ಯ ನನ್ನ ಕರ್ತವ್ಯ ಅದೆಷ್ಟೋ ಬಾರಿ ಸ್ವಂತ ಖರ್ಚಿನಿಂದ ಪೂಜೆ ಸಲ್ಲಿಸಿದ್ದು. ಸರ್ಕಾರ ಕೊಡುವ ಸಂಬಳ ಸಮರ್ಪಕ ವಾಗಿ ಸಿಗುತ್ತಿಲ್ಲ. ಆದರೆ ಭಗವಂತನ ದೈನಂದಿನ ಪೂಜೆ ನಿಲ್ಲಿಸುವುದಿಲ್ಲ ಎಂಬುದಾಗಿ ತಿಳಿಸಿದರು.
ಒಂದು ಕೈಯಿಂದ ಚಪ್ಪಾಳೆ ಬರಲು ಸಾಧ್ಯವಿಲ್ಲ ದೇವಾಲಯದ ಅಭಿವೃದ್ಧಿಗೆ ಗ್ರಾಮಸ್ಥರು. ಜನಪ್ರತಿನಿದಿಗಳು. ಸಂಘ ಸಂಸ್ಥೆಗಳು ಕೈ ಜೋಡಿಸುವಂತೆ ಮನವಿ ಮಾಡಿದರು, ಅಯ್ಯೋ ದೇವಾಲಯಕ್ಕೆ ವಿದ್ಯುತ್ ವ್ಯವಸ್ಥೆ ಇಲ್ಲದೆ ಸೋಲಾರ್ ಅಳವಡಿಸಿದ್ದು ಮಳೆಗಾಲದಲ್ಲಿ ದೇವಾಲಯದ ಒಳಗೆ ಬರಲು ಭಯವಾಗುತ್ತದೆ ಎಂದರು.
ಯು ಪಿ. ಎಸ್. ಕೂಡ ಹಾಳಾಗಿದ್ದು ಎಲ್ಲವನ್ನು ಸ್ವತಃ ರಿಪೇರಿ ಮಾಡಿಸಿಡಲು ನಾನು ಶಕ್ತನಲ್ಲ, ದೇವಾಲಯದ ಮೇಲ್ಚಾವಣಿ ಬಿರುಕು ಬಿಟ್ಟಿದ್ದು ದೇವಾಲಯದ ಒಳಗೆ ಕೆರೆಯಂತೆ ನೀರು ನಿಲ್ಲುತ್ತದೆ. ಇದನ್ನು ಸ್ವಚ್ಛ ಗೊಳಿಸಲು ಕೆಲ ಸಮಯ ನೀಡಬೇಕು ಎಂದರು. ಮನ ಬಂದಂತೆ ವಾಹನ ನಿಲಿಸುತ್ತಿದ್ದೂ ದೇವಾಲಯ ಅಭಿವೃದ್ಧಿಗಾಗಿ ಪಾರ್ಕಿಂಗ್ ನಿಗದಿ ಪಡಿಸುವುದು ಸೂಕ್ತ.ನಾಗರ ಕಟ್ಟೆ ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಬಿರುಕು ಬಿಡುವ ಸಾಧ್ಯತೆ ಇದ್ದು ಪರಿಹಾರ ಮಾರ್ಗ ಕಂಡು ಕೊಳ್ಳಬೇಕು ಎಂದರು.
ದೇವಾಲಯದಲ್ಲಿ ಚಲನಚಿತ್ರ ಕಿರು ಚಿತ್ರ. ಆಲ್ಬಬ್ ಸಾಂಗ್ ಶೂಟಿಂಗ್ ಪರವಾನಿಗೆ ಇಲ್ಲದೆ ಚಿತ್ರೀಕರಣ ನಡೆಸುತ್ತಿದ್ದೂ ಇದ್ದಕ್ಕೆ ಮೊದಲು ಕಡಿವಾಣ ಹೇರಬೇಕು, ರೀಲ್ಸ್ ಮಾಡುವವರು ಹುಚ್ಚು ಹೆಚ್ಚಾಗಿದ್ದು ಗರ್ಭ ಗುಡಿಯ ಹಿಂಬಾಗ ಚಪ್ಪಲಿ ಧರಿಸಿ ಕಾಲುಗಳನ್ನು ದೇವಸ್ಥಾನದ ಗೋಡೆಗೆ ಇಟ್ಟು ರೀಲ್ಸ್ ಮಾಡುವ ಪಾಪಿಗಳಿಂದ ಗುಡಿ ಉಳಿಸಿಕೊಡಿ,ದೇವಾಲಯದ ಆವರಣದಲ್ಲಿ ಮೊಬೈಲ್ ಬ್ಯಾನ್ ಮಾಡುವುದು ಸೂಕ್ತ . ಪ್ರತ್ಯೇಕ ಚಪ್ಪಲಿ ಸ್ಟಾಂಡ್ ಮಾಡಿಸಬೇಕು ಎಂದರು.
ಒಟ್ಟಿನಲ್ಲಿ ಸಮಸ್ಸೆಗಳ ಸಾಗರವಾಗಿರೋ ಮರಗುಂದ ದೇವಾಲಯದ ಬಗ್ಗೆ ಗಮನಿಸಿ.. ದೇವಾಲಯ ಉಳಿಸಿ ಎಂಬುದೇ ನಮ್ಮ ಪಬ್ಲಿಕ್ ಇಂಪಾಕ್ಟ್ ಮನವಿ