Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಿಜೆಪಿ ಮಂಡಲದ ವತಿಯಿಂದ ಪಂಡಿತ್ ದೀನಾ ದಯಾಳ್ ಉಪಾಧ್ಯಯ ಜನ್ಮದಿನ ಆಚರಣೆ

ಮೂಡಿಗೆರೆ: ಬಿಜೆಪಿ ಮಂಡಲದ ವತಿಯಿಂದ ಪಂಡಿತ್ ದೀನಾ ದಯಾಳ್ ಉಪಾಧ್ಯಯ ಜನ್ಮದಿನ ಆಚರಣೆ

ಮೂಡಿಗೆರೆ: ಭಾರತೀಯ ರಾಜಕಾರಣಿ, ಬಲಪಂಥೀಯ ಚಿಂತಕರು ಹಾಗೂ ಭಾರತೀಯ ಜನಸಂಘದ ನೇತಾರರು ಆದಂತಹ ಪಂಡಿತ್ ದೀನಾ ದಯಾಳ್ ಉಪಾದ್ಯಯ್ ಅವರ ಜನ್ಮ ದಿನವನ್ನು ಬಿಜೆಪಿಪಕ್ಷದ ಕಚೇರಿ ಪಂಚವಟಿಯಲ್ಲಿ ಆಚರಿಸಲಾಯಿತು

ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಸರೋಜ ಸುರೇಂದ್ರ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಂಡಿತ್ ದೀನದಯಾಳ್‌ರವರು ಮತ್ತು ಬಿಜೆಪಿ ಪಕ್ಷ ಕಟ್ಟುವಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ್ದಾರೆ ಎಂದರು.

ಬಿಜೆಪಿ ಪಕ್ಷ ವಿಶ್ವದ ಅತಿಡೊಡ್ಡ ರಾಜಕೀಯ ಪಕ್ಷವಾಗಿದೆ ೧೪ಕೋಟಿ ಸದಸ್ಯರು ಹೊಂದಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯರು ಸಂಘಟನೆ ಮೂಲಕ ಬಿಜೆಪಿ ಪಕ್ಷ ಕಟ್ಟಿದರು. ಜೀವನಪೂರ್ತಿ ಸಂಕಷ್ಟಗಳನ್ನು ಎದುರಿಸಿದರು.

ಅತಿ ಚಿಕ್ಕ ವಯಸ್ಸಿನಲ್ಲಿ ಪ್ರಾಮಾಣಿಕ ತನವನ್ನು ಮೈಗೊಡಿಸಿಕೊಂಡಿದ್ದರು.ಅವರು ಕಟ್ಟಿದ ಪಕ್ಷದಲ್ಲಿ ನಾವು ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುವುದು ಸೌಭಾಗ್ಯ ನಮ್ಮದಾಗಿದೆ. ಪಕ್ಷಕ್ಕೆ ಹಾಗೆ ಸಮಾಜಕ್ಕೆ ದೀನ್ ದಯಾಳ್ ಉಪಾಧ್ಯಾಯರು ನೀಡಿದ ಕೊಡುಗೆಗಳನ್ನು ತಿಳಿಸಿಕೊಟ್ಟರು .

ಈ ಸಂದರ್ಭದಲ್ಲಿ ಮೂಡಿಗೆರೆ ಮಂಡಲ ಪ್ರಧಾನ ಕಾರ್ಯದರ್ಶಿ ಧನಿಕ್ ಕೊಡದಿಣ್ಣೆ, ರೈತ ಮೋರ್ಚಾ ಮಂಡಲ ಅಧ್ಯಕ್ಷರಾದ ಪ್ರವೀಣ್ ಮಗ್ಗಲಮಕ್ಕಿ, ನಗರ ಅಧ್ಯಕ್ಷರಾದ ರಂಗನಾಥ, ನಗರ ಪ್ರಧಾನ ಕಾರ್ಯದರ್ಶಿ ಮೋಹನ್, ಮಂಡಲ ಕಾರ್ಯದರ್ಶಿ ಪದ್ಮಣ್ಣ, ಹಳೇಮೂಡಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಂಜಿತ, ಪಟ್ಟಣ ಪಂಚಾಯತಿ ಮಾಜಿ ಸದಸ್ಯರಾದ ರಾಮಕೃಷ್ಣ,ಹಾಗೂ ಶ್ರೇಷ್ಠಿ,ಇಂದ್ರೇಶ ಶರತ್ ಕುನ್ನಳ್ಳಿ ಮುಂತಾದವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!