ಚಿಕ್ಕಮಗಳೂರು: ಸೋದರತೆ ಸಾರುವ ರಕ್ಷಾ ಬಂಧನ ಕಾರ್ಯಕ್ರಮ ವನ್ನು ಬ್ರಹ್ಮಕುಮಾರಿ ಸಂಘದವರು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಆಚರಿಸಿದರು.
ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ಮತ್ತು ರಕ್ಷಣೆಯ ಸಂಕೇತವಾಗಿದೆ. ಈ ಹಬ್ಬದಲ್ಲಿ, ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟಿ, ಅವನ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವ ದಿನ. ಪ್ರತಿಯಾಗಿ, ಸಹೋದರನು ತನ್ನ ಸಹೋದರಿಯನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವುದಾಗಿ ವಾಗ್ದಾನ ಮಾಡಿ ಸಹೋದರಿಯರಿಗೆ ಸದಾ ರಕ್ಷಣೆ ನೀಡುವ ಹಬ್ಬವಾಗಿದೆ.
ಇದು ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವ ಹಬ್ಬವಾಗಿದೆ.
ಈ ಹಿನ್ನಲೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ವೈದ್ಯರಿಗೂ, ಸಿಬ್ಬಂದಿಗಳಿಗೂ ರಾಕಿ ಕಟ್ಟುವುದರ ಮೂಲಕ ದೇವರು ಒಳಳ್ಳೆಯದನ್ನ ಕರುಣಿಸಲಿ ಎಂದು ಪ್ರಾರ್ಥಿಸಿ ನಾಡಿನ ಜನತೆಗೆ ರಕ್ಷಾ ಬಂಧನದ ಮಹತ್ವ ತಿಳಿಸಿ ಬ್ರಹ್ಮಕುಮಾರಿ ಸಂಘದ ವತಿಯಿಂದ ಶುಭಾಶಯ ತಿಳಿಸಿದರು