ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಬಸ್ ಚರಂಡಿಗೆ ಬಿದ್ದ ಪರಿಣಾಮ ಹಲವರಿಗೆ ಗಾಯವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ.

ಸಕಲೇಶಪುರದಿಂದ ಮರಗುಂದ , ಹೇರಿಕೆ,ಹೊಸಕೆರೆ ಮಾರ್ಗವಾಗಿ ಹೋಗುವ ಬಸ್ ಇದಾಗಿದ್ದು , ಬೆಳಗ್ಗೆಯಿಂದಲೂ ಮಳೆ ಸುರಿಯುತ್ತಿದ್ದ ಪರಿಣಾಮ ಹಾಗೆ ರಸ್ತೆ ಗುಂಡಿಗಳ ಮಯವಾಗಿದ್ದು ಚಾಲಕನ ನಿಯಂತ್ರಣ ತಪ್ಪಿ ಅಚಾತುರ್ಯ ನಡೆದಿದೆ.
ಇದೆ ಮಾರ್ಗದಲ್ಲಿ ಎರಡನೇ ಬಾರಿ ಅವಘಡ ಸಂಭವಿಸಿದ್ದು ಚಾಲಕನ ನಿರ್ಲಕ್ಷವೇ ಕಾರಣ ಎಂಬುದು ಸಾರ್ವಜನಿಕ ರ ಆರೋಪ ಮಾಡುತ್ತಿದ್ದು ಶಾಲಾ ಮಕ್ಕಳು,ಮಹಿಳೆಯರು. ಮಕ್ಕಳು ಹಿರಿಯರು ಪ್ರಯಾಣಿಸುವಾಗ ಚಾಲಕರು ಎಚ್ಚರ ವಹಿಸಬೇಕು. ನಿರ್ವಾಹಕರಿಗೆ ಬಸ್ ಚಾಲನೆ ಮಾಡಲು ನೀಡುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಸ್ಥಳಿಯರು ಆರೋಪ ಮಾಡುತ್ತಿದ್ದಾರೆ.
ಕಿರಿದಾದ ರಸ್ತೆ ಇದಾಗಿದ್ದು ಚಾಲಕ ಮಕ್ಕಳೊಂದಿಗೆ ಹೆಚ್ಚು ಮಾತಾಡಿಕೊಂಡು ಬಸ್ ಚಾಲನೆ ಮಾಡುತ್ತಿದ್ದು ಚಾಲಕರ ಬೇಜವಾಬ್ದಾರಿ ಕಂಡಿದೆ ಹಾಗೆ ಕಾಂಟ್ರಾಕ್ಟ್ ಮುಖೇನ ಚಾಲಕರ ನೇಮಕವು ಘಟನೆಗೆ ಕಾರಣ ಎಂಬ ಆರೋಪ ಸಹ ಕೇಳಿಬರುತ್ತಿದೆ.
ಈ ಕೂಡಲೇ ಅಲ್ಲಿನ ಡಿಪೋ ಮ್ಯಾನೇಜರ್ ಎಚ್ಚೆತ್ತುಕೊಂಡು ಸರ್ಕಾರಿ ಬಸ್ ಗಳಿಗೆ ಸರಿಯಾದ ಚಾಲಕರನ್ನು ನೇಮಿಸಿಕೊಳ್ಳಬೇಕು ಹಾಗೆ ಇಂತಹ ಅಚಾತುರ್ಯ ಇನ್ನೊಂದು ಸಲ ಆಗದಂತೆ ತಡೆಯಬೇಕು