Saturday, February 7, 2026
Homeಜಿಲ್ಲಾಸುದ್ದಿಮೂಡಿಗೆರೆ: ಜಾತಿ ಸಮೀಕ್ಷೆ :ಅಧಿಕಾರಿಗಳಿಂದ ಒತ್ತಾಯದ ಜಾತಿ ನಮೂನೆ, ಸಾರ್ವಜನಿಕರ ಆರೋಪ

ಮೂಡಿಗೆರೆ: ಜಾತಿ ಸಮೀಕ್ಷೆ :ಅಧಿಕಾರಿಗಳಿಂದ ಒತ್ತಾಯದ ಜಾತಿ ನಮೂನೆ, ಸಾರ್ವಜನಿಕರ ಆರೋಪ

ಮೂಡಿಗೆರೆ: ತಾಲೂಕಿನ ಬಿಳಗುಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳೀಯರು ಹೇಳಿದ ಜಾತಿ ಬಿಟ್ಟು ಅಧಿಕಾರಿಗಳೇ ಮನಬಂದಂತೆ ಜಾತಿ ನಮೂನೆ ಮಾಡಿಕೊಳ್ಳುತ್ತಿರುವ ಘಟನೆ ನಡೆದಿದ್ದು, ಸ್ಥಳೀಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಪ್ರತಿಕ್ರಿಯಿಸಿ ಮಾತನಾಡಿದ ಚಂದ್ರು ಒಡೆಯರ್, ಜಾತಿ ಕಾಲಂ ತಪ್ಪಾಗಿ ಜಾತಿ ಹಾಗೂ ಉಪಜಾತಿ ನಮೂದಿಸುತ್ತಿರುವುದು ಸರಿಯಲ್ಲ,

ಅಧಿಕಾರಿಗಳು ಸಾರ್ವಜನಿಕರ ಜಾತಿ ಉಪಜಾತಿ ಇಷ್ಟ ಬಂದಂತೆ ನಮೂದಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು

ಈ ಸಾಲಿನ ಗಣತಿದಾರರಾದ ಶ್ರೀಮತಿ ಚೂಡಾಮಣಿ ಅವರು ಸುಭಾಷ್ ನಗರದಲ್ಲಿರುವ ರುಕ್ಮಿಣಿ ಎಂಬುವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿ ನೀಡುವ ವೇಳೆ ನಮ್ಮ ಜಾತಿ ಮಳೆಯಾಳಿ ಬಿಲ್ಲವ ಹಿಂದೂಳಿದ ವರ್ಗಗಳಿಗೆ ಸೇರಿದ್ದು ಎಂದು ಜಾತಿ ಪ್ರಮಾಣ ಪತ್ರ ನೀಡಿದರು ಸಹ ಲೆಕ್ಕಕೆ ತೆಗೆದುಕೊಳ್ಳದೆ ಅವರ ಇಚ್ಛಾನುಸಾರ ಮಲೇಯಾಳಿ ನಾಯರ್ ಎಂದು ಬರೆದುಕೊಂಡು ಹೋಗಿದ್ದು ಅಧಿಕಾರಿಗಳ ಈ ನಡತೆ ಎಷ್ಟು ಸರಿ ಎಂದು ಪ್ರಶ್ನಿಸಿದರು

ಅದಲ್ಲದೆ ಅವರೊಂದಿಗೆ ಏರು ಧ್ವನಿಯಲ್ಲಿ ಮಾತನಾಡಿ ಇಂತಹ ಜಾತಿ ಬರೋದಿಲ್ಲ ಎಂಬುದಾಗಿ ಹೋಗಿದ್ದಾರೆ. ಅಲ್ಲದೆ ಇವರ ಕರ್ತವ್ಯ ಲೋಪ ಎಸಗಿರುವ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ. ರುಕ್ಮಿಣಿ ಅವರ ನೈಜ ಜಾತಿ ಯನ್ನು ನಮೂದಿಸಬೇಕು ಎಂದು ಒತ್ತಾಯಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!