ಮೂಡಿಗೆರೆ : ನಗರದ ಬಸ್ ನಿಲ್ದಾಣದಲ್ಲಿ ವರ್ಷಗಳಿಂದ ಕೆಟ್ಟು ಹೋದ ಸಿಸಿ ಕ್ಯಾಮೆರಾ ದುರಸ್ತಿಗೆ ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ.
ಹೌದು .. ಪಟ್ಟಣದ ಕೇಂದ್ರ ಬಿಂದುವಾದ KSRTC ಬಸ್ ನಿಲ್ದಾಣದಲ್ಲಿ ವರ್ಷಗಳ ಹಿಂದೆ ಸಿಸಿ ಕ್ಯಾಮೆರಾಗಳು ಕೆಟ್ಟು ನಿಂತಿದ್ದು ದುರಸ್ತಿ ಪಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ
ಸಾರ್ವಜನಿಕರು ಕುಳಿತುಕೊಳ್ಳುವ ಹಾಲ್, ಮಹಿಳೆಯರ ವಿಶ್ರಾಂತಿ ಕೊಠಡಿ, ಬಸ್ ನಿಲ್ದಾಣದ ಸುತ್ತಮುತ್ತಲು ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಮುಖ್ಯಯಂತ್ರ ಕೆಟ್ಟು ಒಂದು ವರ್ಷ ಕಳೆದರೂ ಯಾರೂ ದುರಸ್ತಿಗೆ ಮುಂದಾಗಿಲ್ಲ ಕ್ಯಾಮೆರಾ ಕೆಟ್ಟಿರುವುದರಿಂದ ಪೋಲಿ ಪುಂಡರು, ಕಳ್ಳರ ಅಟ್ಟಹಾಸ ಜಾಸ್ತಿ ಆಗಿದೆ ಎನ್ನುತ್ತಿದ್ದಾರೆ.
ವರ್ಷಗಳ ಹಿಂದೆ ಅಳವಡಿಸಿದ ಸಿಸಿ ಕ್ಯಾಮೆರಾಗಳು ಕೆಟ್ಟು ಹೋಗಿರುವುದಾಗಿದೆ. ಕ್ಯಾಮೆರಾ ಕೆಟ್ಟಿರುವುದರಿಂದ ಅನ್ಯ ಚಟುವಟಿಕೆಗಳ ತಾಣವಾಗಿ ಬಸ್ ಸ್ಟಾಂಡ್ ಬದಲಾಗುತ್ತಿರುವುದು ಅಷ್ಟೇ ಸತ್ಯ ವಾಗಿದೆ ಹಾಗಾಗಿ
ಸಿಸಿ ಕ್ಯಾಮೆರಾ ದುರಸ್ತಿ ಪಡಿಸುವುದರಿಂದ ಪೊಲೀಸ್ ಕಾರ್ಯಗಳಿಗೂ ಅನುಕೂಲವಾಗುತ್ತದೆ.
ಸಿಸಿ ಕ್ಯಾಮೆರಾಗಳು ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿಲ್ಲ. ಕಂಪನಿಯವರು ದುರಸ್ತಿಗೊಳಿಸಿಲ್ಲ
ಮಹಿಳೆಯರು ಭಯಬೀತಾರಾಗಿದ್ದಾರೆ ಇದರ ಬಗ್ಗೆ ಗಮನ ಹರಿಸದೆ ಬೇಜವಾಬ್ದಾರಿ ತೋರುತ್ತಿರುವುದು ಪ್ರಯಾಣಿಕರಿಗೆ ಬೇಸರ ತಂದಿದೆ.
ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಿಸಿ ಕ್ಯಾಮೆರಾ ಅಳವಡಿಸಿದ ಕಂಪನಿಯವರ ಮೇಲೆ ಕ್ರಮ ಕೈಗೊಂಡು ದುರಸ್ತಿಗೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
