Sunday, March 29, 2026
Homeಜಿಲ್ಲಾಸುದ್ದಿಮೂಡಿಗೆರೆ : ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗೆ ಮುಕ್ತಿ ಕೊಟ್ಟ ಛತ್ರಮೈದಾನ ಯುವಕರು

ಮೂಡಿಗೆರೆ : ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗೆ ಮುಕ್ತಿ ಕೊಟ್ಟ ಛತ್ರಮೈದಾನ ಯುವಕರು

ಮೂಡಿಗೆರೆ: ತಾಲೂಕಿನ ಸಚಿವರು, ಶಾಸಕರು, ಸಂಸದರು ಕಣ್ಮುಚ್ಚಿ ಕುಳಿತಿದ್ದು ಹದಗೆಟ್ಟ ರಸ್ತೆ ದುರಸ್ಥಿಯಾಗದ ಕಾರಣ ಛತ್ರ ಮೈದಾನದ ಯುವಕರ ತಂಡವೊಂದು ದೇಣಿಗೆ ಸಂಗ್ರಹಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹೌದು.. ಈ ರಸ್ತೆ ಮೂಲಕ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ, ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹೋಗುವವರು ಮತ್ತು ದೈನಂದಿನ ಕೆಲಸ ಕಾರ್ಯಗಳಿಗೆ ಬರುವ ರೈತರು ಇದೆ ರಸ್ತೆಯಲ್ಲಿ ಸಾಗಬೇಕು. ಪಟ್ಟಣದ ಕೇಂದ್ರಬಿಂದುವಾದ ಪೊಲೀಸ್ ಠಾಣೆ ಮುಂಭಾಗ ದೊಡ್ಡ ಪ್ರಮಾಣದ ಗುಂಡಿ ಬಿದ್ದು ಹಾಳಾಗಿ ಹಲವು ತಿಂಗಳುಗಳೇ ಕಳೆದಿವೆ.ಈ ಕುರಿತಾಗಿ ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿ ಕೂಡ ವರದಿ ಮಾಡಿದ್ದೂ ಗಮನಿಸಿದ್ದೇವೆ

ಇದನ್ನು ಗಮನಿಸಿದ ಯುವಕರು ತಾವೇ ದುರಸ್ತಿ ಕೈಗೊಂಡಿದ್ದಾರೆ. ಬಸ್ ಸ್ಟಾಂಡ್ ಮುಖ್ಯ ರಸ್ತೆಯಿಂದ ಬೇಲೂರು ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರು ಮಳೆಗಾಲದಲ್ಲಿ ಬರಲು ಹರಸಹಾಸ ಪಡಬೇಕು. ವಾಹನಗಳ ತಳಭಾಗಕ್ಕೆ ಅನೇಕ ಬಾರಿ ಹಾನಿಯಾಗಿದೆ ಅದಲ್ಲದೆ ರಸ್ತೆಯಲ್ಲೇ ಪೈಪ್‍ಲೈನ್‍ಗಾಗಿ ಚರಂಡಿ ತೋಡಿ ಚೆನ್ನಾಗಿದ್ದ ರಸ್ತೆಯನ್ನು ಹಾಳು ಮಾಡಿದ್ದಾರೆ. ಶಾಸಕರಿಗೆ ಮನವಿ ಸಲ್ಲಿಸಿದರೆ ಭರವಸೆ ಕೊಟ್ಟರೇ ಹೊರತು ಕಾಮಗಾರಿ ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ

ಇಡೀ ತಾಲೂಕಿನ ಸುತ್ತಮುತ್ತ ಗುಂಡಿಗಳದ್ದೆ ದರ್ಬಾರ್ ಚುನಾವಣೆ ಮುನ್ನ ಸಚಿವರು ನೀಡಿದ ಭರವಸೆ ಏನಾದವು ಎಂದು ಪ್ರಶ್ನಿಸಿದರು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಿ ಬಿಟ್ಟರೆ ಸಾಲದು. ಶೀಘ್ರ ರಸ್ತೆ ದುರಸ್ತಿ ಕೈಗೊಳ್ಳಬೇಕು’ ಎಂದು ಯುವಕರು ಒತ್ತಾಯಿಸಿದರು.

​ಮೂಡಿಗೆರೆ ಪಟ್ಟಣದ ಪೊಲೀಸ್ ಠಾಣೆ ಬಳಿ ರಸ್ತೆ ಮೇಲಿನ ಗುಂಡಿಗಳನ್ನು ಯುವಕರು ಮುಚ್ಚುತ್ತಿರುವುದು ಸಾರ್ವಜನಿಕರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ರಸ್ತೆ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ಕುತ್ತು ಬಂದಿದೆ. ಅನೇಕ ಬೈಕ್ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ಆಸ್ಪತ್ರೆಗೆ ಹೋಗುವ ರೋಗಿಗಳು ಪರದಾಡುತ್ತಿದ್ದಾರೆ.

ಈ ಕೆಟ್ಟ ರಸ್ತೆ ದುರಸ್ತಿ ಮಾಡುವಂತೆ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೂ ಅವರು ಕನಿಷ್ಠ ಗುಂಡಿ ಮುಚ್ಚಲು ಮುಂದಾಗುತ್ತಿಲ್ಲ. ಈ ಕಾರಣ ನಾವೇ ಗುಂಡಿ ಮುಚ್ಚಲು ಮುಂದಾಗಿದ್ದೇವೆ’ ಎಂದು ಯುವಕರು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ವ್ಯಾನ್‌ನಲ್ಲಿ ಸಿಮೆಂಟ್, ಎಂಸ್ಯಾಂಡ್, ಕಾಂಕ್ರಿಟ್ ತಂದು ಠಾಣೆ ಬಳಿ ಇರುವ ದೊಡ್ಡ ದೊಡ್ಡ ಗುಂಡಿ ಮುಚ್ಚಿದ್ದೇವೆ. ಈ ಕಾರ್ಯಕ್ಕೆ ಛತ್ರಮೈದಾನ ಯುವಕರಾದ ಗೋಪಾಲ್,ಜೀವನ, ಪ್ರೀತೇಶ್. ಅವಿನಾಶ್, ಜಗದೀಶ್, ಯೋಗೇಶ್ ಸಹಕಾರ ನೀಡಿದ್ದಾರೆ.

ವಾರದೊಳಗೆ ಈ ರಸ್ತೆ ಮೇಲಿನ ಎಲ್ಲಾ ಗುಂಡಿ ಮುಚ್ಚದಿದ್ದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವರದಿ : ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!