ಮೂಡಿಗೆರೆ: ತಾಲೂಕಿನ ಹಳೇಮೂಡಿಗೆರೆ ತೋಟದಲ್ಲಿ ರುದ್ರಯ್ಯ ಎಂಬುವರಿಗೆ ಸೇರಿದ್ದ ಕೋಳಿ ಫಾರಂನನ್ನು ಕಿಡಿಗೇಡಿಗಳು ದ್ವಂಸಗೊಳಿಸಲಾಗಿದೆ.

ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕರಿಗೆ ಛಲವಾದಿ ಮಹಾಸಭಾ ಮೂಡಿಗೆರೆ ಘಟಕದ ವತಿಯಿಂದ ದೂರು ನೀಡಿದ್ದುರುದ್ರಯ್ಯ ಅವರು ಸಿ. ಪಿ.ಎಂ.ಎಲ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದು ಇವರ ಏಳಿಗೆ ಸಹಿಸದ ಕಿಡಿಗೇಡಿಗಳು ಈ ಕೃತ್ಯ ಹೆಸಗಿದ್ದಾರೆ.
ಜು. 22ರ ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಇಂತಹ ನೀಚ ಕೆಲಸ ಮಾಡಿದ್ದು ಸುಮಾರು 50ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಕತ್ತಿಯಿಂದ ಕೊಚ್ಚಿ ಸಾಯಿಸಿದ್ದಾರೆ ಇಂತಹವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.