Saturday, March 28, 2026
Homeಜಿಲ್ಲಾಸುದ್ದಿಮೂಡಿಗೆರೆ : ಧಾರಾಕಾರ ಮಳೆಗೆ ಕಾಫಿ ಬೆಳೆಗಾರರು ಕಂಗಾಲು, ಪರಿಹಾರ ಘೋಷಣೆಗೆ ಒತ್ತಾಯ

ಮೂಡಿಗೆರೆ : ಧಾರಾಕಾರ ಮಳೆಗೆ ಕಾಫಿ ಬೆಳೆಗಾರರು ಕಂಗಾಲು, ಪರಿಹಾರ ಘೋಷಣೆಗೆ ಒತ್ತಾಯ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಾದ್ಯಂತ ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಫಿ, ಮೆಣಸು ಅಡಿಕೆ, ಬೆಳೆಗೆ ರೋಗ ಬಂದು ಬೆಳೆ ಹಾಳಾಗಿ ಹೋಗುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಯೂ ಉದುರಿ ನೆಲಸಮವಾಗಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದ್ದು, ಕೃಷಿ ವಿಜ್ಞಾನಿಗಳು ತಕ್ಷಣವೇ ಬೆಳೆ ರೋಗದ ಬಗ್ಗೆ ವೀಕ್ಷಣೆ ನಡೆಸಬೇಕು ಬೆಳೆಗಾರರು ಮನವಿ ಮಾಡಿದ್ದಾರೆ.ಹಾಗೆ ತಾಲ್ಲೂಕಿನಲ್ಲಿ ಮಳೆ ಜೋರಾಗಿ ಬಂದಿರುವುದರಿಂದ ವಾಣಿಜ್ಯ ಬೆಳೆಗಳಿಗೆ ಹಾನಿ ಆಗಿದೆ.

ಸರಿಯಾದ ಸಮಯಕ್ಕೆ ರಸಗೊಬ್ಬರ ಹಾಕಲು ಮಳೆ ಬಿಟ್ಟಿಲ್ಲ ಸುಮಾರು ಹದಿನೈದು ದಿನಗಳಿಂದ ಒಂದು ದಿನಕ್ಕೆ 8,10, ಇಂಚು ಮಳೆ ಸುರಿಯುತ್ತಿದ್ದೂ ರೈತರು ಚಿಂತಾಮಗ್ನರಾಗಿದ್ದಾರೆ. ಇದರಿಂದ ಬೆಳೆಗೆ ಪೆಟ್ಟು ಬಿದ್ದಿದೆ.

ಹಾಗೆ ಧಾರಾಕಾರವಾಗಿ ಸುರಿದ ಮಳೆಯಿಂದ ಅಡಿಕೆ, ಮೆಣಸು ಕಾಫಿ ಉದುರಿ ಹೋಗಿದೆ ಮತ್ತು ರೋಗಗಳಿಂದ ಗಿಡಗಳು ಸೋತು ಹೋಗಿ, ಹಾಳಾಗಿ ಹೋಗುತ್ತಿವೆ. ಆದ್ದರಿಂದ ರೈತರು ಗಾಬರಿಗೊಂಡಿದ್ದಾರೆ. ತಕ್ಷಣವೇ ಕೃಷಿ ವಿಜ್ಞಾನಿಗಳು ಬೆಳೆ ಸಮೀಕ್ಷೆ ನಡೆಸಬೇಕು, ಕೃಷಿ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಿ ಬೆಳೆ ನಷ್ಟ ಪರಿಹಾರ ಘೋಷಿಸಿ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!