ಮೂಡಿಗೆರೆ: ಬೈಕ್ ಮತ್ತು ಗೂಡ್ಸ್ ಆಟೋ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಕೈ ತುಂಡಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿ ಬಳಿ ನಡೆದಿದೆ.
ಗೋಣಿಬೀಡು ಹೋಬಳಿ ಊರುಬಗೆ ಸುತ್ತಮುತ್ತಲಿನ ಅರಣ್ಯ ಪಾಲಕಾನಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್( 45) ಎಂಬುವರ ಕೈ ತುಂಡಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಎಂಜಿಎಂ. ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚುವರಿ ಚಿಕಿತ್ಸೆಗಾಗಿ ಹಾಸನಕ್ಕೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.
ಸ್ಥಳಕ್ಕೆ ಮೂಡಿಗೆರೆ ಪೋಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಗೂಡ್ಸ್ ಆಟೋ ಚಾಲಕನಿಗೆ ಪೊಲೀಸರು ಬಲೆ ಬೀಸಿದ್ದಾರೆ.
