Friday, March 27, 2026
Homeಕ್ರೈಮ್ಮೂಡಿಗೆರೆ : ದತ್ತ ಜಯಂತಿ ಅಂಗವಾಗಿ ತಾಲೂಕಿನಾದ್ಯಂತ ಸಂಪೂರ್ಣ ಬಂದ್: ಶಾಂತಿಯುತ ಕಾರ್ಯಕ್ರಮ

ಮೂಡಿಗೆರೆ : ದತ್ತ ಜಯಂತಿ ಅಂಗವಾಗಿ ತಾಲೂಕಿನಾದ್ಯಂತ ಸಂಪೂರ್ಣ ಬಂದ್: ಶಾಂತಿಯುತ ಕಾರ್ಯಕ್ರಮ

ಮೂಡಿಗೆರೆ: ದತ್ತ ಜಯಂತಿ ಪ್ರಯುಕ್ತ ಕೊಟ್ಟಿಗೆಹಾರ ಮತ್ತು ಬಣಕಲ್, ಗೋಣಿಬೀಡು, ಬಾಳೂರು ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಎಲ್ಲಾ ಅಂಗಡಿ–ಮುಂಗಟ್ಟುಗಳು ಮಂಗಳವಾರ ಸಂಪೂರ್ಣವಾಗಿ ಬಂದ್‌ ಆಗಿದ್ದವು. KSRTC ಬಸ್ ಹಾಗೂ ಖಾಸಗಿ ವಾಹನ ಸಂಚಾರವು ಎಂದಿನಂತೆ ನಡೆಯಿತು.


ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳಲು ಕರಾವಳಿ ಭಾಗಗಳಿಂದ 137 ದತ್ತಮಾಲಾಧಾರಿಗಳ ಚಾರ್ಮಾಡಿ ಮಾರ್ಗವಾಗಿ ಸಂಚರಿಸಿದವು. ಹಾಗೂ ಬೇಲೂರು ಮಾರ್ಗವಾಗಿ 24 ಮಾಲಧಾರಿಗಳ ವಾಹನಗಳು ಸಂಚರಿಸಿದವು ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಪೊಲೀಸ್ ಇಲಾಖೆ ಕತ್ತೆಚ್ಚರ ವಹಿಸಿ ವಾಹನಗಳಿಗೆ ಸೀರಿಯಲ್ ನಂಬರ್ ಪಟ್ಟಿಗಳನ್ನು ಅಂಟಿಸಿ ಮಾರ್ಗದರ್ಶನ ನೀಡಿದರು.


ಅಂಗಡಿ–ವ್ಯಾಪಾರ ಸಂಪೂರ್ಣ ಬಂದ್ ಆಗಿದ್ದರಿಂದ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನೆರವೇರಿದವು. ಗಡಿ ಭಾಗಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದ್ದು, ಗೋಣಿಬೀಡು ಮೂಡಿಗೆರೆ -ಬಣಕಲ್–ಬಾಳೂರು ಸೇರಿದಂತೆ ಹೊರ ಜಿಲ್ಲೆಗಳ ಪೊಲೀಸರು ತಪಾಸಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.


ದತ್ತ ಜಯಂತಿ ದಿನ ಪೊಲೀಸ್ ಇಲಾಖೆ ವಿಶೇಷ ಎಚ್ಚರಿಕೆ ವಹಿಸಿದ್ದು, ವೃತ್ತ ನಿರೀಕ್ಷಕ ರಾಜಶೇಖರ್. ಗೋಣಿಬೀಡು ಠಾಣಾಧಿಕಾರಿ ಹರ್ಷವರ್ಧನ್ ಮೂಡಿಗೆರೆ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಬಣಕಲ್ ಠಾಣಾಧಿಕಾರಿ ಡಿ.ವಿ. ರೇಣುಕಾ. ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ತಮ್ಮ ತಂಡಗಳಿಗೆ ಮಾರ್ಗದರ್ಶನ ನೀಡಿ ರಾತ್ರಿ–ಹಗಲು ನಿರಂತರ ಗಸ್ತು ತಿರುಗಿ ಪರಿಸ್ಥಿತಿಯನ್ನು ನಿಗಾವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!