ಮೂಡಿಗೆರೆ: ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಹಾಗೂ ಹಲವು ಯುವತಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದಲಿತ ಸಂಘಟನ ಸಮಿತಿ ಮೂಡಿಗೆರೆ ಇವರ ವತಿಯಿಂದ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನಾ ಸಮಿತಿ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಕುಮಾರಿ ಸೌಜನ್ಯ ಸಾವಿಗೆ ಕಾರಣರಾದ ಕಿಚಕರನ್ನು ಈ ಬಂಧಿಸಿ ಗಲ್ಲು ಶಿಕ್ಷೆ ನೀಡಬೇಕು.ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ದಲಿತ ಸಂಘಟನ ಸಮಿತಿ ಗೌರವ ಅಧ್ಯಕ್ಷ ಪೂವಪ್ಪ ಆನೆದಿಬ್ಬ, ತಾಲ್ಲೂಕು ಅಧ್ಯಕ್ಷ ಪೂರ್ಣೇಶ್ ಬೆಟ್ಟದಮನೆ, ಕಾರ್ಯ ಅಧ್ಯಕ್ಷ ಇಂದ್ರೇಶ್, ರಮೇಶ್ ತುದಿಹಾಲ, ಮಹಿಳಾ ಘಟಕದ ಅಧ್ಯಕ್ಷೇ ವೀಣಾ ರಮೇಶ್,ಉಪಾಧ್ಯಕ್ಷೆ ಪ್ರತಿಮಾ ಚೇಗೂ, ಚಂದ್ರಶೇಖರ್ ಪೂರ್ಣಿಮಾ, ಸುನಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.