ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ದಾರದಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಡಿದಾಳು ಗ್ರಾಮದ ಬೀದಿಗಳಲ್ಲಿ ದೀಪಗಳಿಲ್ಲದೆ ಪರದಾಟ ಪಡುತ್ತಿದ್ದೂ ಗ್ರಾಮ ಪಂಚಾಯಿತಿ ಸದಸ್ಯರ ರಾಜೀನಾಮೆಗೆ ಗ್ರಾಮಸ್ಥ ಪುನೀತ್ ಕಡಿದಾಳ್ ಆಗ್ರಹಿಸಿದ್ದಾರೆ
ಈ ಕುರಿತು ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ನಾಲ್ಕಾರು ವಿದ್ಯುತ್ ಕಂಬಗಳಲ್ಲಿ ದೀಪ ಉರಿಯದೆ ಇದ್ದು ಕ್ರಿಮಿ ಕೀಟಗಳು ಕಚ್ಚಿ ಪ್ರಾಣ ಹಾನಿಯಾದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು. ಈ ಕಾರಣದಿಂದ ಹಲವು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿದ್ದರು. ನಿರ್ಲಕ್ಷ್ಯ ತೋರುತ್ತಿದ್ದೂ ಸಣ್ಣ ಪುಟ್ಟ ವಿಚಾರಗಳು ಇವರ ತಲೆಗೆ ಹೋಗದೆ ಇರುವುದು ಬೇಸರ.
ಚುನಾಯಿತ ಪ್ರತಿನಿಧಿಯಾಗಿ ಸಾರ್ವಜನಿಕರ ಸೇವೆಗೆ ಬೇಜವಾಬ್ದಾರಿತನ ತೋರುತ್ತಿದ್ದೂ ರಾಜೀನಾಮೆ ನೀಡಿ ಮನೆಯಲ್ಲಿ ಇರಲು ಗ್ರಾಮದ ಯುವಕ ಆಗ್ರಹಿಸಿದ್ದಾನೆ. ಮೌಖಿಕವಾಗಿ ಗ್ರಾಮ ಪಂಚಾಯತ್ ಮುಖ್ಯ ನಿರ್ವಣಾಧಿಕಾರಿಗಳಿಗೂ ತಿಳಿಸಿದ್ದು ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದರು.
ಜನ ಸೇವೆ ಜನಾರ್ಧನ ಸೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರೆ ಏನು ಪ್ರಯೋಜನ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸಿರಬೇಕು. ನಮ್ಮ ಗ್ರಾಮದಲ್ಲಿ ಅನೇಕ ಸಮಸ್ಯೆಗಳಿದ್ದು ಗ್ರಾಮ ಪಂಚಾಯಿತಿ ಸದಸ್ಯರ ಮೌನವಾಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.