Monday, February 9, 2026
Homeಕ್ರೈಮ್ಮೂಡಿಗೆರೆ: ಕತ್ತಲೆಯಲ್ಲಿ ಕೆಲಸ ಮಾಡಿಸಿ ಕಳ್ಳರಂತೆ ವರ್ತಿಸಿದರಾ ಪ. ಪಂ.ಅಧಿಕಾರಿಗಳು: ಕಾರ್ಮಿಕರ ಬಗ್ಗೆ ತಾತ್ಸಾರವೇ..?

ಮೂಡಿಗೆರೆ: ಕತ್ತಲೆಯಲ್ಲಿ ಕೆಲಸ ಮಾಡಿಸಿ ಕಳ್ಳರಂತೆ ವರ್ತಿಸಿದರಾ ಪ. ಪಂ.ಅಧಿಕಾರಿಗಳು: ಕಾರ್ಮಿಕರ ಬಗ್ಗೆ ತಾತ್ಸಾರವೇ..?

ಮೂಡಿಗೆರೆ: ಕೇಂದ್ರ ಸರ್ಕಾರದ ಬೃಹತ್ ಯೋಜನೆಗಳಲ್ಲೊಂದಾದ ಮನೆಮನೆಗೆ ಕುಡಿಯುವ ನೀರಿನ ಅಮೃತ್ ಯೋಜನೆ ಜಾರಿಗೆ ಬಂದಿದ್ದೇ ಬಂದಿದ್ದು ಮೂಡಿಗೆರೆ ಪಟ್ಟಣ ಪಂಚಾಯತಿ ಹಗಲು ರಾತ್ರಿ ಎನ್ನದೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದ ಕೆಲಸ ಮಾಡುತ್ತಿದೆ, ಸಂಜೆ 4-6ಗಂಟೆಯ ಮೇಲೆ ಸರ್ಕಾರದ ಸುತ್ತೋಲೆ ಪ್ರಕಾರ ಕೆಲಸವನ್ನು ಮಾಡುವ ಹಾಗೇ ಇಲ್ಲಾ ಆದರೆ ಅದನ್ನೆಲ್ಲಾ ಗಾಳಿಗೆ ತೂರಿ 7 ಗಂಟೆಯ ಸಮದಲ್ಲಿ ಯಾವುದೇ ಬೆಳಕು ಇಲ್ಲದೆ ಕಾಮಗಾರಿ ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಯಾವುದೇ ಬೆಳಕಿನ ಸೌಲಭ್ಯ ವಿಲ್ಲದೆ ಕತ್ತಲೆಯಲ್ಲಿ ಬೀಡಿ ಸೇದಿಕೊಂಡು ಕಾಮಗಾರಿ ನಡೆಸುತ್ತಿದ್ದು ಇನ್ನು ಕಾಮಗಾರಿಯ ಗುಣಮಟ್ಟ ಹೇಗಿದೆ ಎಂದು ಆ ದೇವರೇ ಬಲ್ಲಾ. ಕತ್ತಲೆಯಲ್ಲಿ ಟ್ಯಾಂಕ್ ಮೇಲ್ಬಾಗದಿಂದ ಕಾರ್ಮೀಕರೇನಾದರೂ ಕಳಗೆ ಉರುಳಿದರೆ ಸ್ವರ್ಗಕ್ಕೆ ಉಚಿತ ಟಿಕೆಟ್. ನಿರ್ಮಾಣದ ಸಮಯದಲ್ಲಿ ಕೆಲಸಗಾರರು ಮಾಡುವ ಕೆಲಸದ ಮೇಲೆ ನಿಗಾ ಇಡಲು ಓರ್ವ ಗುತ್ತಿಗೆದಾರ ಮತ್ತು ಇಂಜಿನಿಯರ್ ಇರಬೇಕು ಆದರೆ ಅವರಾರು ಇಲ್ಲದೆ ಕಾರ್ಮಿಕರೇ ಕತ್ತಲೆಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ ಎಂದರೇ ಗುಣಮಟ್ಟ ಹೇಗಿರಬೇಕು ಎನ್ನುವುದೇ ಪ್ರಶ್ನೆಯಾಗಿದೆ. ಇದು ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣದ ಸಮೀಪವೇ ನಡೆಯುತ್ತಿದ್ದರು ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದೇ ಇರುವುದು ಶೋಚನಿಯ ಸಂಗತಿಯಾಗಿದೆ.

ಕೇಂದ್ರ ಸರ್ಕಾರದ ಹಣ ಬಿಡುಗಡೆಯಾದರೆ ಸಾಕು ಕಾಮಗಾರಿ ಯಾವ ರೀತಿಯಾದರೂ ಇರಲಿ ಅದರ ರಿಪೇರಿಗೆ ಮತ್ತೆ ಹಣ ಬರುತ್ತದೆ ಎಂದು ಲೆಕ್ಕಾಚಾರವೋ ಏನೋ ಎಂಬ ಮಾತುಗಳು ಕೇಳಿಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!