Saturday, February 14, 2026
Homeಕ್ರೈಮ್ಮೂಡಿಗೆರೆ: ಚಾಲಕರು & ಪಾದಚಾರಿಗಳು ರಸ್ತೆ ಸುರಕ್ಷತೆ ಬಗ್ಗೆ ಶಿಸ್ತು, ಜ್ಞಾನ ಬೆಳೆಸಿಕೊಳ್ಳಬೇಕು: ಠಾಣಾಧಿಕಾರಿ ಹರ್ಷವರ್ಧನ್

ಮೂಡಿಗೆರೆ: ಚಾಲಕರು & ಪಾದಚಾರಿಗಳು ರಸ್ತೆ ಸುರಕ್ಷತೆ ಬಗ್ಗೆ ಶಿಸ್ತು, ಜ್ಞಾನ ಬೆಳೆಸಿಕೊಳ್ಳಬೇಕು: ಠಾಣಾಧಿಕಾರಿ ಹರ್ಷವರ್ಧನ್

ಮೂಡಿಗೆರೆ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2026 ಅಂಗವಾಗಿ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷಾ ಸಪ್ತಾಹ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ನೇತೃತ್ವದಲ್ಲಿ ಕಾನೂನು ಅರಿವು, ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಪಟ್ಟಣದ ಬೀದಿಗಳಲ್ಲಿ ವಿವಿಧ ಶಾಲೆಯ ಮಕ್ಕಳು ಮೆರವಣಿಗೆ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು ಬಳಿಕ ರೋಟರಿ ವೃತ್ತದಲ್ಲಿ ಅನೇಕ ವಾಹನ ಸವರರನ್ನು ತಡೆಗಟ್ಟಿ ಕಾನೂನು ಪಾಲನೆ, ರಸ್ತೆ ಸಂಚಾರದ ಕುರಿತು ಮಾಹಿತಿ ಮೂಡಿಗೆರೆ ಠಾಣಾಧಿಕಾರಿ ಹರ್ಷವರ್ಧನ್ ಮಾಹಿತಿ ನೀಡಿದರು

ಸುದ್ದಿಗಾರರೊಂದಿಗೆ ಮಾತನಾಡಿ ಆಟೋ ಚಾಲಕರಿಗೆ, ವಾಹನದ ದಾಖಲಾತಿ ಸುರಕ್ಷಿತ ವಾಹನ ಚಾಲನೆ, ಸಂಚಾರ ನಿಯಮ ರಸ್ತೆ ಬದಿಗಳಲ್ಲಿ ಅಳವಡಿಸಲಾದ ಎಚ್ಚರಿಕೆ ಹಾಗೂ ಸೂಚನಾ ಫಲಕಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಅಪಘಾತ ಸಂಭವಿಸಿದ ಕೂಡಲೇ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ ಪೊಲೀಸರಿಗೆ ಮಾಹಿತಿ ನೀಡಲು ಕೋರಲಾಯಿತು. ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆ ಬಗ್ಗೆ ಉತ್ತಮ ಶಿಸ್ತು ಮತ್ತು ಜ್ಞಾನ ಬೆಳೆಸಿಕೊಳ್ಳಬೇಕು ಎಂದರು

ಶಿಸ್ತಿನ ಸಂಚಾರ, ಸುಗಮ ಸಂಚಾರಕ್ಕೆ ಹಾದಿ ಎಂಬುದನ್ನು ತಿಳಿದಿರಬೇಕು. ಇಲ್ಲವಾದಲ್ಲಿ ಅಪಾಯಕಾರಿ. ಈ ನಿಟ್ಟಿನಲ್ಲಿ ತಾಲ್ಲೂಕು ಸಂಚಾರ ಪೊಲೀಸರು ‘ರಸ್ತೆ ಸುರಕ್ಷಾ ಸಪ್ತಾಹ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು

‘ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ’ಎಂಬುದು ಈ ಸಪ್ತಾಹದ ಪ್ರಮುಖ ವಿಷಯ.
ಇದರಲ್ಲಿ ಪ್ರಮುಖವಾಗಿ ರಸ್ತೆ ಅಪಘಾತಗಳು, ಸಾರ್ವಜನಿಕರಿಗೆ ಸಂಚಾರ ಸುರಕ್ಷತಾ ಸೂಚನೆಗಳು, ರಸ್ತೆ ಅಪಘಾತ ನಿಯಂತ್ರಣ, ರಸ್ತೆ ಸುರಕ್ಷೆ ಮತ್ತು ಜೀವನ ರಕ್ಷೆ, ಮಕ್ಕಳು ಏನು ಮಾಡಬೇಕು, ವಾಹನ ಚಾಲಕರು ಏನು ಮಾಡಬೇಕು, ಪಾದಚಾರಿಗಳು ಹೇಗೆ ಸಂಚರಿಸಬೇಕು, ಸಂಚಾರದ ಸಂಕೇತಗಳು, ಸುಗಮ ಸಂಚಾರಕ್ಕೆ ಪ್ರಾಧನ್ಯತೆ ನೀಡಿ ಕಡ್ಡಾಯವಾಗಿ ಪಾಲಿಸಬೇಕಾದ ಚಿಹ್ನೆಗಳು, ಕಾಲು ನಡಿಗೆಯ ಸುರಕ್ಷಿತ ದಾರಿ, ಸಿಗ್ನಲ್‌ನಲ್ಲಿ ಆಗುವ ಅಪಘಾತಗಳು ಸೇರಿದಂತೆ ಇತರೆ ಪ್ರಮುಖ ವಿಷಯಗಳ ಬಗ್ಗೆ ಸಾರ್ವಜನಿಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ತಿಳಿಹೇಳಲಾಯಿತು

ಈ ಸಂದರ್ಭದಲ್ಲಿ ASI ಶಶಿ, ಪೊಲೀಸ್ ಸಿಬ್ಬಂದಿಗಳು, ಸ್ಕೌಟ್ಸ್‌ & ಗೈಡ್ಸ್ ನ ಮಗ್ಗಲಮಕ್ಕಿ ಗಣೇಶ್, ಬಕ್ಕಿ ಮಂಜುನಾಥ್ ಸೇರಿದಂತೆ ಶಾಲಾ ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು

ವರದಿ :ಪುನೀತ್ ಕಡಿದಾಳು

9483811848

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!