Thursday, March 26, 2026
Homeಕ್ರೈಮ್ಮೂಡಿಗೆರೆ: ಹುಬ್ಬಳ್ಳಿಯಲ್ಲಿ ಮರ್ಯಾದೆ ಹತ್ಯೆ ನಡೆಸಿದ ಆರೋಪಿಗೆ ಮರಣ ದಂಡನೆ ವಿಧಿಸಲಿ : DSS ವತಿಯಿಂದ...

ಮೂಡಿಗೆರೆ: ಹುಬ್ಬಳ್ಳಿಯಲ್ಲಿ ಮರ್ಯಾದೆ ಹತ್ಯೆ ನಡೆಸಿದ ಆರೋಪಿಗೆ ಮರಣ ದಂಡನೆ ವಿಧಿಸಲಿ : DSS ವತಿಯಿಂದ ತಹಸೀಲ್ದಾರ್‌ʼಗೆ ಮನವಿ

ಮೂಡಿಗೆರೆ: ಹುಬ್ಬಳ್ಳಿಯಲ್ಲಿ ನಡೆದ ಘಟನೆ ಕುರಿತು ಜಾತಿ ಮನಸ್ಥಿತಿಯನ್ನು ಹೊಂದಿ ಮರ್ಯಾದೆ ಹತ್ಯೆ ನಡೆಸಿರುವ ಆರೋಪಿಯನ್ನು ಮರಣದಂಡನೆಗೆ ಗುರಿಯಾಗಿಸಬೇಕು ಎಂದು DSS ಅಂಬೇಡ್ಕರ್ ಧ್ವನಿ ಸಂಘಟನೆ ಸದಸ್ಯರು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂಘಟನೆ ಅಧ್ಯಕ್ಷ ಸುಂದ್ರೇಶ್ ಇನಂವಿಪುರದಲ್ಲಿ ಭಾನುವಾರ ನಡೆದ ಘಟನೆ ಖಂಡನೀಯ ಎಂದರು

ಮಾನ್ಯಳ ತಂದೆ ಪ್ರಕಾಶ್ ಗೌಡ ಪಾಟೀಲ್ ಮಾಡಿರುವುದು ಕಾನೂನು ರೀತಿಯ ಅಪರಾಧವಾಗಿದೆ.ಈ ಸಮಾಜದಲ್ಲಿ ಸಮಾನತೆ ಎಂಬುದು ಮರೀಚಿಕೆಯಾಗಿದೆ, ಮಾನ್ಯ ಅವರನ್ನು ಕಳೆದ ಜೂನ್ ನಲ್ಲಿ ವಿವೇಕಾನಂದ ಕಾನೂನು ರೀತಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದರು ವಿವೇಕಾನಂದ ಅವರ ಕುಟುಂಬದ ಜಾತಿ ಆಧರಿಸಿ 6 ತಿಂಗಳ ಗರ್ಭಿಣಿಯಾಗಿದ್ದ ಮಾನ್ಯ ಕೊಲೆ ದೊಡ್ಡ ದುರಂತದ ವಿಚಾರ ಎಂದರು ಈ ಘಟನೆ ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಸುವ್ಯವಸ್ಥೆ ಕಾಪಡಬೇಕು ಈ ಕೂಡಲೆ ಪ್ರಕಾಶ್ ಗೌಡ ಪಾಟೀಲ್ ಎಂಬಾತನನ್ನು ಮರಣದಂಡನೆ ವಿಧಿಸಬೇಕು ಎಂದು DSS ಸಂಘಟನೆ ಪರವಾಗಿ ಅಗ್ರಹಿಸಿದರು

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಪೂರ್ಣೇಶ್, ಕಸಬಾ ಹೊಬಳಿ ಅಧ್ಯಕ್ಷ ಸತೀಶ್ ನಾಗಲಾಪುರ.ಗೊಣಿಬೀಡು ಹೊಬಳಿ ಅಧ್ಯಕ್ಷ ಚಂದ್ರಶೇಖರ್, ಕಸಬಾ ಉಪಾಧ್ಯಕ್ಷ ಧರ್ಮೆಶ್ ಗೌರಿಕೆರೆ.ಕಸಬಾ ಸಾಮಾಜಿಕ ಜಾಲತಾಣ ವೆಂಕಟೇಶ್ ಘಟ್ಟದಳ್ಳಿ ಸದಸ್ಯರಾದ ರವಿ, ಹರೀಶ್,
ಗೊಣಿಬೀಡು ಹೊಬಳಿ ಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!