Friday, February 13, 2026
Homeಜಿಲ್ಲಾಸುದ್ದಿಮೂಡಿಗೆರೆ: ಮಿತಿಮೀರಿದ ಕಾಡಾನೆ ಹಾವಳಿ: ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲ: ಪ್ರತಿಭಟನೆಯ ಎಚ್ಚರಿಕೆ ನೀಡಿದ ರೈತರು

ಮೂಡಿಗೆರೆ: ಮಿತಿಮೀರಿದ ಕಾಡಾನೆ ಹಾವಳಿ: ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲ: ಪ್ರತಿಭಟನೆಯ ಎಚ್ಚರಿಕೆ ನೀಡಿದ ರೈತರು

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು ನಾಡಿಗೆ ಲಗ್ಗೆಯಿಡುತ್ತಿರುವ ಪ್ರಕರಣಗಳು ದಿನೇ ದಿನೇ ಕಂಡುಬರುತ್ತಿವೆ. ಇದು ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದ್ದು ವರ್ಷವಿಡೀ ಬೆಳೆದ ಬೆಳೆಯನ್ನೇ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ ಹಾಗೆ ಮಾನವನ ಪ್ರಾಣಕ್ಕೂ ಆನೆಗಳು ಕಂಟಕವಾಗುತ್ತಿವೆ.

ಕಳೆದ ನಾಲ್ಕು ವರ್ಷದ ಹಿಂದೆ ಪ್ರಾಕೃತಿಕ ವಿಕೋಪದ ಬಳಿಕ ಕಾಡಾನೆ ಹಾವಳಿ ಸ್ವಲ್ಪಮಟ್ಟಿಗೆ ತಗ್ಗಿತ್ತು. ಇದರಿಂದ ರೈತರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಆನೆ–ಮಾನವ ಸಂಘರ್ಷ ಮಿತಿಮೀರಿದೆ. ಅನೆ ಸಂತತಿ ಹೆಚ್ಚಾಗಿದೆಯೇ ಎಂಬ ಸಂದೇಹ ಜಿಲ್ಲೆಯ ಜನರನ್ನು ಕಾಡಲು ಆರಂಭಿಸಿದೆ.

ಬೇಸಿಗೆ ಮಳೆಬಿದ್ದರೂ ಅರಣ್ಯ ಪ್ರದೇಶದಲ್ಲಿರುವ ಕೆರೆ, ಬಾವಿ, ತೋಡುಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಆನೆಗಳಿಗೆ ಅಗತ್ಯವಿದ್ದ ಆಹಾರವೂ ಅರಣ್ಯದಲ್ಲಿ ಲಭಿಸುತ್ತಿಲ್ಲ. ಇದರಿಂದ ಕಾಡಾನೆಗಳು ನಾಡಿನತ್ತ ವಲಸೆ ಬರುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್, ಆರ್, ಪುರ ಹಾಗೂ ಬಾಳೆಹೊನ್ನೂರು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಆನೆ ವ್ಯಾಪ್ತಿಯ ಬಹುತೇಕ ಗ್ರಾಮಗಳು ಆನೆ ಹಾವಳಿಯಿಂದ ತತ್ತರಿಸಿವೆ.

ಮೂಡಿಗೆರೆ ತಾಲೂಕಿನ ಹೊಸಕೆರೆ, ಸತ್ತಿಗನಹಳ್ಳಿ, ಸಾರಗೋಡು, ಹೊಯ್ಸಳಲು, ಚಂದ್ರಪುರ, ಕಸ್ಕೆಬೈಲ್ ಗ್ರಾಮದಲ್ಲಿ ಆನೆ ಹಾವಳಿ ಮಿತಿಮೀರಿದೆ. ಕಂದಕ ನಿರ್ಮಾಣ, ಸೋಲಾರ್‌ ಬೇಲಿ ಅಳವಡಿಕೆ ಉಪಾಯಗಳು ಈ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ‘ಶಾಶ್ವತ ಪರಿಹಾರ ಕ್ರಮ ರೂಪಿಸಿ’ ಎಂದು ಗ್ರಾಮಸ್ಥರು ಬೇಡಿಕೆಯಿಟ್ಟಿದ್ದರೂ ಅರಣ್ಯ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.

ಕಾಫಿ, ಬಾಳೆ ಬೆಳೆಯು ಆನೆ ಹಾವಳಿಗೆ ನಾಶವಾಗುತ್ತಿವೆ ಎಂದು ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಿದ್ದಾರೆ. ಸಮಸ್ಯೆಗೆ ಮುಕ್ತಿ ನೀಡದಿದ್ದರೆ ಸತ್ಯಾಗ್ರಹ ನಡೆಸುವ ನಿರ್ಧಾರಕ್ಕೆ ಹಲವು ಗ್ರಾಮಸ್ಥರು ಬಂದಿದ್ದಾರೆ. ಹೊಸಕೆರೆ ಗ್ರಾಮದ ಸುತ್ತಲು ಮಾತ್ರವಲ್ಲದೆ ದರ್ಶನ. ದಾರದಹಳ್ಳಿ, ಕಡಿದಾಳು, ಬಿಳ್ಳೂರು ಪ್ರದೇಶಗಳಲ್ಲಿ ಆನೆ ಹಾವಳಿ ಈಗ ಹೆಚ್ಚಾಗಿದ್ದು ಸ್ಥಳೀಯರು ಜೀವ ಭಯದಲ್ಲಿ ಓಡಾಡುತ್ತಿದ್ದಾರೆ.

ಮಲೆನಾಡು ಭಾಗವಾದ ಮೂಡಿಗೆರೆ ತಾಲ್ಲೂಕು ಹೆಚ್ಚಾಗಿ ಕಾಫಿ ತೋಟವನ್ನೇ ಒಳಗೊಂಡಿದ್ದು ಕಾಡಾನೆ ಹಾವಳಿ ವಿಪರೀತ. ಇದರಿಂದ ರೈತರು ಹೈರಾಣಾಗಿದ್ದಾರೆ. ಕಾಫಿ ತೋಟದಲ್ಲಿ ಆನೆಗಳು ಬಿಡಾರ ಹೂಡಿದ್ದು ಅನೇಕ ಕೂಲಿ ಕಾರ್ಮಿಕರು ಕೆಲಸಕ್ಕೆ ಹೊರಡಲು ಎದರುತ್ತಿದ್ದೂ.. ಆನೆ ಹಾವಳಿಯಿಂದ ಜೇವನ ನಡೆಸಲು ಕಷ್ಟ ಆಗುತ್ತಿದೆ ಎಂದು ನೋವನ್ನು ಹೊರ ಹಾಕಿದರೂ ಸಣ್ಣಪುಟ್ಟ ರೈತರು ಕೃಷಿಯನ್ನೇ ಕೈಬಿಡುತ್ತೇವೆ ಎನ್ನುವಷ್ಟರ ಮಟ್ಟಿಗೆ ಸಮಸ್ಯೆಗೆ ತುತ್ತಾಗಿದ್ದಾರೆ. ಕಳೆದ ಒಂದುವಾರದಿಂದ ಈ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟಲು ಸಾಧ್ಯವಾಗಿಲ್ಲ.

ಆನೆ ಹಾವಳಿಯಿಂದಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾಫಿ, ಗದ್ದೆ, ಅಡಿಕೆ, ಬಾಳೆ,ಮೆಣಸು. ಬೆಳೆಗಳು ನಷ್ಟವಾಗುತ್ತಿದೆ. ಆನೆ ದಾಳಿಯಿಂದ ಮನುಷ್ಯರು ಸತ್ತ ಮೇಲೆ ಅರಣ್ಯಾಧಿಕಾರಿಗಳು ಓಡಿ ಬರುತ್ತಾರೆ. ವನ್ಯಜೀವಿ ದಾಳಿಯಿಂದ ರೈತರು ಸತ್ತರೆ ದೆಹಲಿ ಸರ್ಕಾರ ₹ 1 ಕೋಟಿ ಪರಿಹಾರ ನೀಡಿರುವ ಉದಾಹರಣೆಗಳಿದ್ದು ಆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗವನ್ನೂ ಕಲ್ಪಿಸಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಈ ನಿರ್ಲಕ್ಷ್ಯ ತೋರಿಸಲಾಗುತ್ತಿದೆ’ ಎಂದು ಯುವ ರೈತ ಅಮರ್ ಪಟೇಲ್ ಹೇಳಿದರು

‘ಪುಂಡಾನೆ ಒಂಟಿ ಸಲಗ, ಗುಂಪು ಆನೆಗಳು ತೋಟಕ್ಕೆ ಲಗ್ಗೆಯಿಡುತ್ತಿದ್ದು ಸೆರೆ ಹಿಡಿದು ಬೇರೆ ಜಿಲ್ಲೆಗೆ ರವಾನಿಸಬೇಕು. ರೈತರು ತಾಲ್ಲೂಕಿನಲ್ಲಿ ಬದುಕುವುದೇ ಕಷ್ಟವಾಗಿದೆ. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದೂ ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆ ನೀಡಿದ್ದಾರೆ.

ಕೆಲವು ಭಾಗದಲ್ಲಿ ಸೋಲಾರ್‌ ಬೇಲಿಗೂ ಕ್ಯಾರೆ ಎನ್ನದ ಆನೆಗಳು ಅವುಗಳನ್ನೇ ಮೆಟ್ಟಿ ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ ಫಸಲು ನಾಶ ಪಡಿಸುತ್ತಿವೆ. ಆನೆಗಳು ಬರೀ ಕಾಫಿ ಫಸಲು ನಾಶ ಪಡಿಸುತ್ತಿಲ್ಲ. ಅಲ್ಲೇ ಠಿಕಾಣಿ ಹೂಡಿ ತೋಟದ ಆನೆಗಳಾಗಿ ಬದಲಾಗಿವೆ. ಆನೆ ಪ್ರದೇಶಗಳಿಗೆ ವ್ಯಾಪ್ತಿಯಲ್ಲಿ ‘ಹ್ಯಾಂಗಿಂಗ್‌ ಸೋಲಾರ್‌ ಬೇಲಿ’ ನಿರ್ಮಿಸಬೇಕು. ಈ ಎಂದು ಒತ್ತಾಯಿಸಿದ್ದಾರೆ

ಹೆಚ್ಚು ಹೆಚ್ಚು ಸುದ್ದಿಗಳಿಗೆ ಪಬ್ಲಿಕ್ ಇಂಪ್ಯಾಕ್ಟ್ ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಫಾಲೋ ಮಾಡಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!