Monday, April 13, 2026
Homeಕ್ರೈಮ್ಮೂಡಿಗೆರೆ: ಆನೆ ಹಾವಳಿಗೆ ತಾಲೂಕಿನ ರೈತರು ತತ್ತರ : ಶಾಶ್ವತ ಪರಿಹಾರಕ್ಕೆ ಅನ್ನದಾತರ ಒತ್ತಾಯ

ಮೂಡಿಗೆರೆ: ಆನೆ ಹಾವಳಿಗೆ ತಾಲೂಕಿನ ರೈತರು ತತ್ತರ : ಶಾಶ್ವತ ಪರಿಹಾರಕ್ಕೆ ಅನ್ನದಾತರ ಒತ್ತಾಯ

ಮೂಡಿಗೆರೆ:ತಾಲೂಕಿನ ಬಹುತೇಕ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೆಗಳ ಅಟ್ಟಹಾಸ ಮಿತಿ ಮೀರಿದ್ದು ಕಾಫಿ ಅಡಿಕೆ ಭತ್ತದ ಗದ್ದೆಗಳನ್ನು ಪುಡಿ ಪುಡಿ ಮಾಡುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಣ್ಣೀರು ಹಾಕುತ್ತಿದ್ದಾರೆ. ಆನೆಗಳ ಹಾವಳಿಗೆ ಬೇಸತ್ತು ಸಾವಿರಾರು ಎಕರೆ ಭೂಮಿ ಪಾಳು ಬಿಡಲಾಗಿದೆ. ‘ಹಲವಾರು ವರ್ಷಗಳಿಂದ ಕಾಡಾನೆ, ಕಾಟಿ ಹುಲಿ. ಕರಡಿಯಂತಹ ಭಯ ಬಿಳಿಸುವ ಪ್ರಾಣಿಗಳು ಹಾವಳಿ ಹೆಚ್ಚಾಗಿದೆ. ಜೀವ ಹಾನಿ ಸಂಭವಿಸಿದಾಗ ಒಂದು ಅಥವಾ ಎರಡು ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಿ ಕೈ ತೊಳೆದು ಕೊಳ್ಳಲಾಗುತ್ತದೆ. ಕಾಡಾನೆ ದಾಳಿಯಿಂದ ಆಗುವ ಹಾನಿಯನ್ನು ‌ಊಹಿಸಲು‌ ಸಾಧ್ಯವಿಲ್ಲ. ಒಂದು ಬಾರಿ ಒಂದು ಕಾಡಾನೆ‌ ತೋಟಕ್ಕೆ ಬಂದರೆ ಮರು ಗಿಡ ಹಾಕಿ ಫಸಲು ತೆಗೆಯಲು ಕನಿಷ್ಠ 6ವರ್ಷ ಕಾಯಬೇಕಾಗುತ್ತದೆ. ಕಾಡಾನೆ ದಾಳಿಯು ಒಂದು ವರ್ಷದ ಬೆಳೆಯನ್ನಷ್ಟೇ ಅಲ್ಲದೇ ಐದಾರು ವರ್ಷಗಳ ಬೆಳೆಯನ್ನು ನಷ್ಟ ಮಾಡುತ್ತವೆ. ಆದ್ದರಿಂದ ಕಾಡಾನೆ ಹಾವಳಿ ತಡೆಯಲು ಶಾಶ್ವತ ಯೋಜನೆ ರೂಪಿಸಬೇಕು’ ಎನ್ನುತ್ತಾರೆ ಗೋಣಿಬೀಡು ಹೋಬಳಿ ಜಿ ಹೊಸಳ್ಳಿ ಗ್ರಾಮಸ್ಥರು

ತಾಲ್ಲೂಕಿನಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮೀಸಲು ಅರಣ್ಯವಿದ್ದರೂ ಕಾಡಾನೆಗಳು ನಾಡಿನತ್ತ ಬರಲು ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರ ಇಲ್ಲ ಎಂಬುದು ಹುರುಡಿ ವಿಕ್ರಂ ಗೌಡ ಆರೋಪವಾಗಿದ್ದು ವನ್ಯ ಪ್ರಾಣಿಗಳ ಮೇವಿಗಾಗಿ ಅರಣ್ಯ ಇಲಾಖೆ ಜಾರಿಗೊಳಿಸಿದ ಯೋಜನೆಗಳು ವಿಫಲವಾಗಿರುವುದರಿಂದ ಕಾಡಾನೆಗಳು ಅಹಾರವನ್ನು ಹರಸಿ ನಾಡಿಗೆ ಬರುತ್ತಿವೆ. ಕಾಡಿನಲ್ಲಿ ‌ಮೇವು ಬೆಳೆಸಲು ಪರಿಣಾಮಕಾರಿಯಾಗಿ ಮುಂಚೂಣಿಗೆ ತರಬೇಕು ಎಂಬುದು ಅವರ ವಾದವಾಗಿದೆ ತಾಲ್ಲೂಕಿನಲ್ಲಿ ಕಾಡಾನೆಗಳಿಂದ ಬೆಳೆ ಹಾನಿ‌ ಮಾತ್ರವಲ್ಲದೇ ಕಾಡಾನೆ‌ ದಾಳಿ ಪ್ರದೇಶದಲ್ಲಿ ಜನ ಮನೆಯಿಂದ ಹೊರ ‌ಬರಲು‌ ಹೆದರುವಂತಾಗಿದೆ.

ಮರಬೈಲು, ಗಾಡಿಚೌಕ, ಚಂದ್ರಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ತಿಂಗಳ ಹಿಂದೆ ಭುವನೇಶ್ವರಿ ಹಾಗೂ ಬೀಟಮ್ಮ ಕಾಡಾನೆಗಳ ಗುಂಪು ಹಾವಳಿ ಮಾಡಿವೆ. ಕಳೆದ ತಿಂಗಳಲ್ಲಿ ಎರಡು ಕಾಡಾನೆಗಳು ಈ ಭಾಗದಲ್ಲಿ ಹಗಲು ರಾತ್ರಿ ಎನ್ನದೆ ಸಂಚರಿಸಿ ಭತ್ತದ ಗದ್ದೆ ತೋಟಗಳನ್ನು ನಾಶ ಮಾಡಿದೆ. ನಂತರ ಬಕ್ಕಿ ಯಲ್ಲಿ ಕಾಣಿಸಿಕೊಂಡು ತೋಟ ಮತ್ತು ಗದ್ದೆಗಳಿಗೆ ಹಾನಿಯುಂಟು ಮಾಡಿವೆ. ತಾಲ್ಲೂಕಿನಲ್ಲಿ ರೈತ ಸಂಘದ ಸೇರಿದಂತೆ ಆನೇಕ ಸಂಘ ಸಂಸ್ಥೆಯ ಮುಖಂಡರು ಪ್ರತಿಭಟನೆ ನಡೆಸಿ ಕಾಡನೆ ಗಳನ್ನು ನಮ್ಮ ಭಾಗದಿಂದ ಓಡಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಳ್ಳಿ ಪ್ರದೇಶಗಳಲ್ಲದೆ ಪಟ್ಟಣ ಕೇಂದ್ರ ಭಾಗದಲ್ಲಿ ಕೂಡ ಕಾಡಾನೆಗಳು ಸಂಚಾರ ಮಾಡಿವೆ. ಕೆಲ ದಿನಗಳ ಹಿಂದೆ ಬೀಳಗುಳ ಬೀಜುವಲ್ಲಿ ಛತ್ರಮೈದಾನ ಭಾಗದಲ್ಲಿ ಬಂದು ಹಿಂತುರುಗಿವೆ ತಾಲ್ಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕಾಡಾನೆ ಚಲನ ವಲನ ಕಂಡು ಬಂದಿದೆ. ಆದರೂ ಸಹ ಜನಪ್ರತಿನಿಧಿಗಳು ಜನರ ಜೀವ ದ ಜೊತೆಗೆ ಚೆಲ್ಲಾಟ ಆಡುತ್ತಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ರೈತರು ಬೆಳೆದ ವಿವಿಧ ಮಳೆಯಾಶ‍್ರಿತ ಬೆಳೆಗಳನ್ನು ಮತ್ತು ಅಡಿಕೆ ತೆಂಗು ಬಾಳೆ ಮತ್ತು ತೋಟದ ಕೊಳವೆಬಾವಿಗೆ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ನಾಶ ಮಾಡಿ ನಷ್ಟ ಉಂಟು ಮಾಡುತ್ತಿವೆ. ಇದಲ್ಲದೆ ಆನೆಗಳ ದಾಳಿಯಿಂದ ಪ್ರತಿವರ್ಷ ಜನರು ಬಲಿಯಾಗುತ್ತಿದ್ದಾರೆ. ಅದೇ ರೀತಿ ರೈತರ ತೋಟ ಅಳವಡಿಸಿರುವ ವಿದ್ಯುತ್‍ ತಂತಿಗಳನ್ನು ತುಳಿದು ಆನೆಗಳು ಸಹ ಬಲಿಯಾಗುತ್ತಿವೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಈ ಹಿಂದೆ ಕಾಡಾನೆಗಳ ಉಪಟಳ ಕೇವಲ ಕಾಡಂಚಿನ ಕೆಲವೇ ಗ್ರಾಮಗಳಿತ್ತು. ಆದರೆ ಎರಡು ವರ್ಷಗಳಿಂದ ಈಚೆಗೆ ಕಾಡಾನೆಗಳು ಬರದೆ ಇರುವ ಗ್ರಾಮಗಳ ವ್ಯಾಪ್ತಿಯಲ್ಲೂ ಉಪಟಳ ಹೆಚ್ಚಾಗಿದೆ. ಕಾಡಾನೆಗಳ ಉಪಟಳದಿಂದ ತಾಲ್ಲೂಕಿನ ಊರುಬಗೆ ಜಿ. ಹೊಸಳ್ಳಿ ಹೊಸಕೆರೆ ಅಲ್ಲದೆ ಹಲವು ಗ್ರಾಮಗಳಲ್ಲಿ ರೈತರು ಬೆಳೆದ ಅಡಿಕೆ ಬಾಳೆ ಬೆಳೆ ನಾಶವಾಗಿವೆ.ಹಲವು ಮಂದಿ ಈ ಕೆಲ ಹಿಂದಿನ ವರ್ಷದಲ್ಲಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಉಪಟಳ ನೀಡುತ್ತಿದ್ದ ಒಂದು ಕಾಡಾನೆಯನ್ನು ಸೆರೆ ಹಿಡಿದ್ದರೂ ಸಹ ಹಲವು ಆನೆಗಳು ತಾಲ್ಲೂಕಿನ ವ್ಯಾಪ್ತಿಯಲ್ಲಿ ಗೋಣಿಬೀಡು ಹೋಬಳಿ ಜಿ ಹೊಸಹಳ್ಳಿ ಹಿರೇಶಿಗಾರ ಗ್ರಾಮದ ಚಂದ್ರಶೇಖರ ಅವರಿಗೆ ಸೇರಿದ ತೋಟ ಕಾಫಿ, ತೆಂಗು, ಬಾಳೆ ಅಡಿಕೆ, ನರ್ಸರಿ ಯನ್ನು ಬಿಟಮ್ಮ 2 ಗುಂಪಿನ ಆನೆಗಳು ನಾಶ ಮಾಡಿದ್ದು ಇಲ್ಲಿನ ಜನರು ಆತಂಕದಲ್ಲಿಯೇ ಜೀವ ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ನಿರ್ಮಾಣ ವಾಗಿರುವದು ಅಷ್ಟೇ ಸತ್ಯವಾಗಿದೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಜನಪ್ರತಿನಿದಿಗಳು ಎಚ್ಚೇತ್ತು ಶಾಶ್ವತ ಪರಿಹಾರ ನೀಡಲಿ ಎಂಬುದು ಸಾರ್ವಜನಿಕರ ಧ್ವನಿಯಾಗಿ ಪಬ್ಲಿಕ್ ಇಂಪ್ಯಾಕ್ಟ್ ಸರ್ಕಾರವನ್ನು ಒತ್ತಾಯಿಸುತ್ತದೆ.

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!