ಮೂಡಿಗೆರೆ: ನಗರದ ಮಾರ್ಕೆಟ್ ರಸ್ತೆಯಲ್ಲಿ ಫಿಶ್ ಮಾರ್ಕೆಟ್ ಎಂದು ನಿರ್ಮಿಸಲಾದ ಭವ್ಯ ಕಟ್ಟಡ ಮೂಲೆ ಸೇರಿ ಬರೋಬ್ಬರಿ ಹತ್ತು ವರ್ಷಗಳ ಮೇಲಾಯ್ತು ಆದರೂ ಈ ಕಟ್ಟಡಕ್ಕೆ ಉಪಯೋಗಿಸುವ ಭಾಗ್ಯ ಮಾತ್ರ ಇನ್ನು ಸಿಕ್ಕಿಲ್ಲ
ಹೌದು ಲಕ್ಷ ಲಕ್ಷ ವೆಚ್ಚದಲ್ಲಿ ಫಿಶ್ ಮಾರ್ಕೆಟ್ ಗೆಂದು ನಿರ್ಮಿಸಲಾದ ಕಟ್ಟಡವು ಉಪಯೋಗಕ್ಕೆ ಬಾರದೆ ಮೂಲೆ ಸೇರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕಟ್ಟಡವು ಭೂತ ಬಂಗಲೆಯಾತಾಗಿದ್ದು ಸ್ಥಳೀಯರು ವಾಹನ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದಾರೆ ಈಗಾಗಲೇ ಚಾವಣಿ ಸೋರಿಕೆ, ನೆಲ ಹಾಸು ಹೋಗಿದ್ದು, ಕಿಟಕಿ, ಬಾಗಿಲುಗಳು ಭಗ್ನ ಅವಶೇಷ ಕಂಡಿವೆ. ಈಗಾಗಲೇ ಕಟ್ಟಡ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಉಂಡು ಹೋದ ಕೊಂಡು ಹೋದ ಎಂಬತಾಗಿದ್ದು ನಗರದ ಹೊರವಲಯದಲ್ಲಿ ನಿರ್ಮಿಸಲಾದ ಫಿಶ್ ಮಾರ್ಕೆಟ್ ಬಳಸುವ ಮುನ್ನವೇ ಭೂತ ಬಂಗಲೆಯಾಗಿದೆ.
ಸರಕಾರಿ ಅನುದಾನಕ್ಕೆ ಇದೊಂದು ದೊಡ್ಡ ನಿದರ್ಶನ ಎನ್ನುವ ಮಾತು ಜನಜನಿತವಾಗಿದ್ದು, ಕಳೆದ ಹತ್ತು ವರ್ಷಗಳ ಹಿಂದಷ್ಟೇ ನಿರ್ಮಾಣಗೊಂಡ ಕಟ್ಟಡ ಬಳಸುವ ಮುನ್ನವೇ ದುರಸ್ತಿಗೆ ಬಂದಿರುವುದು ದೌರ್ಬಾಗ್ಯವೇ ಸರಿ. ಇಂದೋ ನಾಳೆಯೋ ಬಿದ್ದು ಪುಡಿ-ಪುಡಿಯಾಗುವ ಹಂತ ತಲುಪಿರುವ ಕಟ್ಟಡ ನವೀಕರಿಸಿ ಮತ್ತಷ್ಟು ಸರ್ಕಾರದ ಹಣ ಅಲ್ಲ ಸಾರ್ವಜನಿಕರ ಹಣ ತಿಂದು ತೆಗುವ ಯೋಜನೆ ಪಟ್ಟಣ ಪಂಚಾಯಿತಿ ಅಧಿಕಾರಿಗಳದ್ದು ಎಂಬುದು ಸಾರ್ವಜನಿಕರ ಮಾತಾಗಿದೆ.
ಸುಮಾರು 25 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿ ಈ ಕಟ್ಟಡ ನಿರ್ಮಾಣ ಮಾಡಲಾಗಿತ್ತು.ಮಾಜಿ ಶಾಸಕರು ಈ ಕಟ್ಟಡಕ್ಕೆ ಚಾಲನೆ ನೀಡಿ, ಉದ್ಘಾಟನೆ ಮಾಡಿದ್ದರು. ಆದರೆ ಉದ್ಘಾಟನೆಯಾದ ಮೇಲೆ ಒಂದೂ ದಿನವೂ ಬಳಕೆಗೆ ಬಂದಿಲ್ಲ. ವಿಶೇಷ ಅಧಿಕಾರಿಗಳು, ತಾಲ್ಲೂಕಿನ ಪ್ರಮುಖ ಗಣ್ಯರು ಸೇರಿ ಸಾರ್ವಜನಿಕರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಧಿಕಾರಿಗಳ ಗುತ್ತಿಗೆದಾರರ ನಿರ್ಲಕ್ಷದ ಫಲವಾಗಿ ನಿರೀಕ್ಷೆ ಉಲ್ಟಾ ಹೊಡೆದಿದೆ. ಕಟ್ಟಡ ಸಂಪೂರ್ಣ ಹಾಳಾಗಿದ್ದು, ಚಾವಣಿ ಕೆಲವು ಕಡೆ ಬಿರುಕು ಬಿಟ್ಟಿದ್ದರೆ ನೆಲ ಹಾಸುಗಳಲ್ಲೆ ಕಿತ್ತು ಹೊಗಿವೆ. ವರ್ಷದಿಂದ ವರ್ಷಕ್ಕೆ ಕಟ್ಟಡ ಕುಸಿಯ ತೊಡಗಿದೆ. ಲಕ್ಷಗಟ್ಟಲೆ ಅನುದಾನ ವೆಚ್ಚ ಮಾಡಿದರೂ, ಕಟ್ಟಡ ಕಾಮಗಾರಿ ಅಪೂರ್ಣಗೊಂಡು, ಇದ್ದೂ ಇಲ್ಲವಾಗಿದೆ. ಒಮ್ಮೆಯೂ ಉಪಯೋಗಕ್ಕೆ ಬಾರದ ಕಟ್ಟಡ ಈಗ ಮದ್ಯ ಸೇವನೆ ಸೇರಿ ಇತರ ಕಾನೂನು ಬಾಹಿರ ಚಟುವಟಿಕೆಗೆ ಬಳಕೆಯಾಗುತ್ತಿರುವುದು ವಿಪರ್ಯಾಸದ ಸಂಗತಿ.
ಕಳಪೆ ಕಟ್ಟಡದ ಸುತ್ತಲೂ ಕಟ್ಟಿರುವ ಗೋಡೆ ಬಿರುಕು ಬಂದಿದ್ದು . ಕಳಪೆ ಮಟ್ಟದ ಸಿಮೆಂಟ್ ಬಳಕೆಯೇ ಇದಕ್ಕೆ ಕಾರಣ ಎನ್ನುವ ಆರೋಪ ಹೆಚ್ಚಿದ್ದು, ಗುಣಮಟ್ಟದ ಕೆಲಸದ ಬದಲಾಗಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪ-ಪ್ರತ್ಯಾರೋಪ ಇನ್ನೂ ಚಾಲ್ತಿ ಇವೆ. ಒಳ ಹೋದರೆ ಹೊರ ಬರುವವರೆಗೂ ಜೀವ ಕೈಯಲ್ಲಿ ಹಿಡಿದು ಬರುವ ಸ್ಥಿತಿ ನಿರ್ಮಾಣವಾಗಿದೆ.
ಕಟ್ಟಡ ನಿರ್ಮಾಣ ವಾಗಿದ್ದನಿಂದಲೂ ಅಸಮಾಧಾನ ವ್ಯಕ್ತವಾಗುತ್ತಿದ್ದರು ನಿರ್ಮಾಣಗೊಂಡಿರುವ ಕಟ್ಟಡದ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕ್ಯಾರೇ ಎನ್ನುತ್ತಿಲ್ಲ. ಈ ಕಟ್ಟಡವು ಇಸ್ಪೀಟ್, ಜೂಜಾಟ ಅಡ್ಡೆಯಾಗಿ ಮಾರ್ಪಟ್ಟಿದೆ.
ಹಿಂದಿನ ಅಧಿಕಾರಿಗಳು ಇಂಜಿನಿಯರ್ ಹಾಗೂ ಗುತ್ತಿಗೆದಾರರ ಎಡವಟ್ಟಿನಿಂದ ಆದ ಈ ಕೆಲಸದ ಕುರಿತು ತನಿಖೆಯಾಗಬೇಕು. ಲಕ್ಷ ಹಾಳು ಮಾಡಿದವರು ಈಗ ಕೋಟಿ ಲೂಟಿ ಮಾಡಲು ನಿಂತಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಮೂಡಿದೆ.
ವರದಿ :ಪುನೀತ್ ಕಡಿದಾಳ್
9483811948
