Thursday, March 5, 2026
Homeಜಿಲ್ಲಾಸುದ್ದಿಮೂಡಿಗೆರೆ: ಗೊಡ್ಡು ಸಂಪ್ರದಾಯಗಳಿಗೆ ಗುಡ್‌ ಬೈ: ನೂತನ ಮನೆಯ ಗೃಹಪ್ರವೇಶಕ್ಕೆ ಭರ್ಜರಿ ಬಾಡೂಟ

ಮೂಡಿಗೆರೆ: ಗೊಡ್ಡು ಸಂಪ್ರದಾಯಗಳಿಗೆ ಗುಡ್‌ ಬೈ: ನೂತನ ಮನೆಯ ಗೃಹಪ್ರವೇಶಕ್ಕೆ ಭರ್ಜರಿ ಬಾಡೂಟ

ಮೂಡಿಗೆರೆ : ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡು ಅನೇಕ ಕಾರ್ಯಕ್ರಮ ನಡೆಯುವುದು ಸರ್ವೇ ಸಾಮಾನ್ಯ ಆದರೆ ‎ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಹುಲ್ಲೆಮನೆ ಗ್ರಾಮದಲ್ಲಿ ಇಂತಹ ಗೊಡ್ಡು ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ವಿಶೇಷವಾಗಿ ತಾವು ನಿರ್ಮಿಸಿದ ನೂತನ ಮನೆಯ ಗೃಹ ಪ್ರವೇಶ ಮಾಡಿರುವ ವಿಶೇಷ ಘಟನೆ ತಾಲೂಕಿನಲ್ಲಿ ನಡೆದಿದೆ.

ಹೌದು ಹುಲ್ಲೆಮನೆ ಕುಂದೂರು ಗ್ರಾಮದ ಉಮೇಶ್ ರುಕ್ಮಿಣಿ ದಂಪತಿಗಳು ಕಷ್ಟಪಟ್ಟು ಇಷ್ಟಪಟ್ಟು ಪ್ರೀತಿಯಿಂದ ಕಟ್ಟಿದ ನೂತನ ಮನೆಯ ಗೃಹಪ್ರವೇಶವನ್ನು ಗೊಡ್ಡು ಸಂಪ್ರದಾಯಗಳನ್ನು ಧಿಕ್ಕರಿಸಿ ತಮ್ಮ ಮುದ್ದಿನ ಮಕ್ಕಳ ಮೂಲಕ ಉದ್ಘಾಟಿಸಿದ್ದೆ ವಿಶೇಷವಾಗಿದ್ದು ಅದಲ್ಲದೆ ತಾಳ್ಮೆಯ ಪ್ರತೀಕ ಬುದ್ಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರತಿಜ್ಞಾವಿಧಿಯನ್ನು ಹೇಳುವ ಮುಖೇನ ರಾಷ್ಟ್ರದಲ್ಲಿ ಮೌಡ್ಯ ಕಂದಾಚಾರ ಅಜ್ಞಾನ ತುಂಬಿ ತುಳುಕುತ್ತಿರುವ ಈ ದಿನಗಳಲ್ಲಿ ಪುರೋಹಿತಶಾಹಿಯ ಯಾವುದೇ ಆಚರಣೆಯನ್ನು ಮಾಡದೆ ತಾವು ನಿರ್ಮಿಸಿದ ನೂತನ ಮನೆಯ ಅಂಗಳದಲ್ಲಿಯೇ ಬಾಡೂಟವನ್ನು ಮಾಡಿಸಿ ನೆರೆದಿದ್ದ ಎಲ್ಲಾ ನೆಂಟರಿಷ್ಟರಿಗೆ ಬಡಿಸಿ ಈ ಸಮಾಜಕ್ಕೆ ಒಂದು ರೀತಿಯಲ್ಲಿ ಮಾದರಿಯಾಗಿದ್ದಾರೆ.

ಪ್ರಗತಿಪರ ಚಿಂತಕ ಡಾ. ಹರೀಶ್ ನಲ್ಕೆರವರಿಂದ ಪ್ರತಿಜ್ಞಾವಿಧಿಯನ್ನು ಬೋಧಿಸಿ ವೈಚಾರಿಕತೆಯ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿಸಿದ್ದು ಮತ್ತೊಂದು ವಿಶೇಷದ ಸಂಗತಿ.

ಈ ಸಂದರ್ಭದಲ್ಲಿ ಸುರೇಶ್ ಹುಲ್ಲೆಮನೆ, ರಮೇಶ್ ಹುಲ್ಲೆಮನೆ, ಕುಮಾರ್ ಉದುಸೆ, ರಮೇಶ್ ಗುಪ್ತ ಶೆಟ್ಟಿಹಳ್ಳಿ ಸೇರಿದಂತೆ ಬಂದು ಬಳಗದವರು ಗ್ರಾಮಸ್ಥರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!