Wednesday, March 25, 2026
Homeಕ್ರೈಮ್ಮೂಡಿಗೆರೆ: ಕಾಡ್ಗಿಚ್ಚು ಹರಡದಂತೆ ಎಚ್ಚರ ವಹಿಸಲು ಹಸಿರು ಫೌಂಡೇಷನ್ ಸಂಸ್ಥಾಪಕ ರತನ್ ಊರುಬಗೆ ಒತ್ತಾಯ

ಮೂಡಿಗೆರೆ: ಕಾಡ್ಗಿಚ್ಚು ಹರಡದಂತೆ ಎಚ್ಚರ ವಹಿಸಲು ಹಸಿರು ಫೌಂಡೇಷನ್ ಸಂಸ್ಥಾಪಕ ರತನ್ ಊರುಬಗೆ ಒತ್ತಾಯ

ಮೂಡಿಗೆರೆ :ಮಲೆನಾಡು ಭಾಗಗಳಲ್ಲಿ ಕಾಡ್ಗಿಚ್ಚು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ರತನ್ ಊರುಬಗೆ ಒತ್ತಾಯಿಸುದ್ದಾರೆ

ಹೌದು .. ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್‌ ಜೊತೆ ಮಾತನಾಡಿದ ಅವರು, ಬಿಸಿಲಿನ ಬೇಗೆಗೆ ಅರಣ್ಯದಲ್ಲಿ ಕಾಡ್ಗಿಚ್ಚು ಎಲ್ಲ ಕಡೆ ಹರಡುವ ಸಾಧ್ಯತೆ ಹೆಚ್ಚಿದೆ. ಕಾಡ್ಗಿಚ್ಚು ನಿವಾರಿಸಲು ಅರಣ್ಯ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಿಸಿ, ಜೀವ ಸಂಕುಲಗಳನ್ನು ಉಳಿಸಬೇಕಿದೆ ಅರಣ್ಯದಲ್ಲಿ ಸಂಭವಿಸುವ ಕಾಡ್ಗಿಚ್ಚಿನ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಹಸಿರು ಫೌಂಡೇಷನ್ ಸಂಸ್ಥಾಪಕರಾದ ರತನ್ ದೇವ್ ಊರುಬಗೆ ಈ ಮುಖಾಂತರ ಒತ್ತಾಯಿಸಿದ್ದಾರೆ.

ದೇಶದಲ್ಲಿರುವ ಅರಣ್ಯ ಸಂಪತ್ತಿನಲ್ಲಿ ವಾರ್ಷಿಕ ಹಾಗೂ ಇತರೆ ಕಾಡ್ಗಿಚ್ಚುಗಳು ಸಾಧಾರಣವಾದರೂ ಇವು ನೈಸರ್ಗಿಕವಾಗಿ ಸಂಭವಿಸುವುದಲ್ಲ. ಬಿದಿರುಗಳು ತಾಗಿ ಅಥವಾ ಕಡವೆ ಗೊರಸಿನಿಂದ ನೆಲ ಕೆರೆದಾಗ ಕಾಡ್ಗಿಚ್ಚು ಉಂಟಾಗುವುದಿಲ್ಲ. ಬದಲಾಗಿ, ಮನುಷ್ಯನೇ ಯಾವುದೋ ಕಾರಣಕ್ಕಾಗಿ ಬೆಂಕಿ ಇಡುವುದರಿಂದ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಅರಣ್ಯದಲ್ಲಿರುವ ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾಡಿನ ಕ್ರಿಮಿಕೀಟಗಳಿಂದ ಹಿಡಿದು ಮೊಲ, ಹಾವು, ನೆಲದಲ್ಲಿ ಗೂಡುಕಟ್ಟುವ ಹಕ್ಕಿಗಳು ಹಾಗೂ ಇನ್ನಿತರ ಜೀವ ಸಂಕುಲಗಳ ಮಾರಣ ಹೋಮವಾಗುತ್ತದೆ. ಅಲ್ಲದೆ ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ನಿಧಾನವಾಗಿ ನದಿತೊರೆಗಳಲ್ಲಿ ನೀರು ಕಡಿಮೆಯಾಗುತ್ತದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಕಾಡ್ಗಿಚ್ಚಿನಿಂದ ಆಹಾರ ಹಾಗೂ ಔಷಧಗಳ ಮೂಲಿಕೆಗಳು ನಾಶವಾಗುತ್ತದೆ.

ಅರಣ್ಯ ಉಳಿಸುವ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಬೇಸಿಗೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಅರಣ್ಯಕ್ಕೆ ಕಾವಲುಗಾರರಾಗಿ ನೇಮಿಸಬೇಕು ಎಂದು ಆಗ್ರಹಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!