Saturday, August 2, 2025
!-- afp header code starts here -->
Homeಜಿಲ್ಲಾಸುದ್ದಿಮೂಡಿಗೆರೆ :ಬೃಹತ್ ಭಗವಧ್ವಜ ನಿರ್ಮಾಣಕ್ಕೆ‌ ಪ್ರಮೋದ್ ಮುತಾಲಿಕ್ ಗುದ್ದಲಿ ಪೂಜೆ: ಗಣಪತಿ ಲೋಗೋ ರಿಲೀಸ್!

ಮೂಡಿಗೆರೆ :ಬೃಹತ್ ಭಗವಧ್ವಜ ನಿರ್ಮಾಣಕ್ಕೆ‌ ಪ್ರಮೋದ್ ಮುತಾಲಿಕ್ ಗುದ್ದಲಿ ಪೂಜೆ: ಗಣಪತಿ ಲೋಗೋ ರಿಲೀಸ್!

ಮೂಡಿಗೆರೆ: ಪಟ್ಟಣದ ಅಡ್ಯಾಂತಯ ರಂಗ ಮಂದಿರದಲ್ಲಿ ಭವ್ಯ ಭಗವಧ್ವಜ ನಿರ್ಮಾಣದ ಗುದ್ದಲಿ ಪೂಜೆ ಹಾಗೂ ಗಣಪತಿ ಲೋಗೋ ಉದ್ಘಾಟನೆ ಕಾರ್ಯಕ್ರಮವನ್ನು ಶ್ರೀರಾಮ ಸೇನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇರವೇರಿಸಿದರು

ಗಣಪತಿ ದೇವಾಲಯದಲ್ಲಿ ಹಿಂದೂ ಧರ್ಮ ಉದ್ದಾರಕ್ಕೆ ಪೂಜೆ ಸಲ್ಲಿಸಿ ಮೂಡಿಗೆರೆಯ ಪ್ರಮುಖ ಬಿದಿಗಳಲ್ಲಿ ಬೃಹತ್ ಬೈಕ್ ಜಾಥಾ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಶ್ರೀ ರಾಮ ಸೇನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲೀಕ್ ಅವರು, ಅನ್ಯ ಧರ್ಮಿಯರ ಅಟ್ಟ ಹಾಸ ಮೆಟ್ಟಲು ಹಿಂದೂ ಸಮಾಜ ಒಂದಾಗಬೇಕು. ಸಮಾಜ ಒಂದು ಮಾಡುವ ನಿಟ್ಟಿನಲ್ಲಿ ಗಣಪತಿ ಹಬ್ಬ ಆಚರಿಸುತ್ತೇವೆ. ನಮ್ಮ ದೇಶದ ವಿವಿಧ ರಾಜ್ಯಗಳ ಹೆಸರು ಹೇಳಿ ಬಾಂಗ್ಲಾ ವಲಸಿಗರು ನುಸುಳತ್ತಿದ್ದು ತೋಟದ ಮಾಲೀಕರು ಬಾಂಗ್ಲಾ ಮುಸ್ಲಿಂ ರನ್ನು ಬೆಳೆಸುತ್ತಿದ್ದೀರಿ ಇದು ಮುಂದೊಂದು ದಿನ ಹಿಂದೂ ಸಮಾಜಕ್ಕೆ ಮಾರಕ. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಬಹುತೇಕ ರೈತರು ಹಿಂದುಗಳೇ ಆಗಿದ್ದು ಎಚ್ಚರದಿಂದಿರಿ. ಕೂಲಿ ಕಾರ್ಮಿಕರನ್ನು ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಕನ್ನಡಿಗರನ್ನು ಕೊಡುವುದಾಗಿ ತಿಳಿಸಿದರು. ಪಹಲ್ಗಾಮ್‌ʼನಲ್ಲಿ 26 ಜನರನ್ನು ಹಿಂದೂ ಎಂದ ಕಾರಣಕ್ಕೆ ಗುಂಡೇಟಿನಿಂದ ಕೊಂದ ಘಟನೆ ತಲೆಯಲ್ಲಿ ಇಟ್ಟುಕೊಂಡು ನಾವೆಲ್ಲ ಒಂದಾಗಬೇಕು . ಪಾಕಿ ವಿರೋಧ ರಾಷ್ಟ್ರ ಪುಟುಗೋಸಿ ಪಾಕಿ ಪಾಪಿ ಳೊಂದಿಗೆ ಕ್ರಿಕೆಟ್ ಪಂದ್ಯಾವಳಿ ನಿಜಕ್ಕೂ ಬೇಸರ ಎಂದರು.ದೇಶ ಮೊದಲು ಎಂಬ ಮನೋಭಾವನೆ ನಮ್ಮೆಲ್ಲರಲ್ಲೂ ಬರಬೇಕು. ಛತ್ರಪತಿ ಶಿವಾಜಿ, ತಿಲಕ್ ನಮಗೇಕೆ ಎಂದು ಕುಳಿತ್ತಿದ್ದರೆ ನಾವ್ಯಾರು ಇರುತ್ತಿರಲಿಲ್ಲ. ಭಗವಧ್ವಜ ಅಭಿವೃದ್ಧಿ, ಹಿಂದೂ ಸಾಂಕೇತಿಕ ಯಾವ ರಾಜಕೀಯ ಸಂಬಂಧಿಸಿದ್ದಲ್ಲ ಎಂದರು. ಭಗವಧ್ವಜ ದಾನಿಗಳಾದ ನೇಮಿರಾಜ್ ಅವರನ್ನು ಅಭಿನಂದಿಸಿದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಮಾತನಾಡಿ, ಗಣಪತಿ ಮೂರ್ತಿ ಹಿಂದೂ ಸಮಾಜಕ್ಕೆ ಸೇರಿದ್ದು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸೇರಿದ್ದಲ್ಲ. ಹಿಂದೂ ಜನಾಂಗದ ಆರಾಧ್ಯ ದೈವ ಗಣಪತಿಗೆ ನಾವೆಲ್ಲರೂ ತಲೆ ಬಾಗೋಣ. ಬಾಲ್ಯ ಹಾಗೂ ದಾಂಪತ್ಯ ಬದುಕಿನಲ್ಲಿ ಗಣಪತಿಯ ಶಕ್ತಿಯನ್ನು ನೆನಪಿಸಿಕೊಂಡು ಹಿಂದೂ ಜನಾಂಗದಲ್ಲಿ ಹುಟ್ಟಿ ನನ್ನ ಧರ್ಮ ರಕ್ಷಣೆ ನಮ್ಮ ಹೊಣೆ, ಬಾಂಬೆ ಮಟ್ಟದಲ್ಲಿ ಗಣಪತಿ ಕಾರ್ಯಕ್ರಮವನ್ನು ಆಚರಿಸಲು ಸಲಹೆ ನೀಡಿದರು.

ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಅನುಕುಮಾರ್ ಪಟ್ಟದೂರು ಮಾತನಾಡಿ, ಈ ಹಿಂದಿನಿಂದ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ನಮ್ಮತನ ಅನ್ನೋದು ಎಲ್ಲರಿಗೂ ಇರಲಿ. ಹಿಂದೂತ್ವ ನಮ್ಮೆಲ್ಲರ ಸ್ವತ್ತು. ಜಾತಿ ಬೇಧ ಮರೆತು ಒಗ್ಗಟ್ಟಿನಿಂದ ನಾವೆಲ್ಲರೂ ಕಾರ್ಯಕ್ರಮ ನಡೆಸೋಣ. ಐಷಾರಾಮಿ ಬದುಕಿನಿಂದ ಹೊರಬಂದು ಸರಳತೆ, ಸಾಂಸ್ಕೃತಿಕ ಬದುಕನ್ನು ನಡೆಸೋಣ ಎಂದರು

ಈ ವೇಳೆ ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ರಘು ಜನ್ನಾಪುರ,ಗಣಪತಿ ಸಮಿತಿ ಸದಸ್ಯರು, ಹಿಂದೂ ಭಕ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!