Wednesday, February 11, 2026
Homeಕ್ರೈಮ್ಮೂಡಿಗೆರೆ: ಸ್ಮಶಾಣಕ್ಕೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಗುಣಿಬೈಲ್ ಗ್ರಾಮಸ್ಥರ ಆಗ್ರಹ

ಮೂಡಿಗೆರೆ: ಸ್ಮಶಾಣಕ್ಕೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಗುಣಿಬೈಲ್ ಗ್ರಾಮಸ್ಥರ ಆಗ್ರಹ

ಮೂಡಿಗೆರೆ:ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣಿಬೈಲ್ ಎಂಬ ಗ್ರಾಮದ ಜನರು ಸ್ಮಶಾಣಕ್ಕೆ ಹೋಗಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೆ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿ ಮಾತನಾಡಿದ ಗುಣಿಬೈಲ್ ಗ್ರಾಮದ ಪುನೀತ್ ಕಳೆದ ನವೆಂಬರ್ ನಲ್ಲಿ ರಸ್ತೆ ಅಪಘಾತದಲ್ಲಿ ನನ್ನ ತಂದೆ ತೀರಿಹೋಗಿದ್ದು ಅವರ ಪಾರ್ಥಿವ ಶರೀರವನ್ನು ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲು ಸ್ಮಶಾಣಕ್ಕೆ ಸೂಕ್ತ ದಾರಿ ವ್ಯವಸ್ಥೆ ಇಲ್ಲದೆ ಪರದಾಡಿದ ಪ್ರಸಂಗವನ್ನು ಹಂಚಿಕೊಂಡರು.

ನೋವು ಅನುಭವಿಸಿದವರಿಗೆ ಮಾತ್ರ ನೋವಿನ ಬೆಲೆ ಅರ್ಥ ಆಗುತ್ತದೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ವಾಯುಸೇನೆ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ನನಗೆ ಆದ ದುಃಖದ ಘಟನೆ ಮತ್ತೆ ಮರಕಳಿಸದೇ ಇರಲಿ ಈ ದೃಷ್ಟಿಯಿಂದ ಗ್ರಾಮಸ್ಥರು ಸೇರಿ ಸ್ವಂತ ಖರ್ಚಿನಲ್ಲಿ ಸ್ಮಶಾಣ ಸ್ವಚ್ಛತೆಗೆ ಮುಂದಾಗಿರುವುದಾಗಿ ತಿಳಿಸಿದರು.

ಸುಮಾರು 8 ಎಕರೆ ಹಿಂದೂ ರುದ್ರ ಭೂಮಿಯನ್ನು ಗ್ರಾಮದವರೇ ದೇಣಿಗೆ ಸಂಗ್ರಹಿಸಿ ಕಾಡು ಕೂಡಿ ಹೋಗಿದ್ದ ಸ್ಮಶಾಣ ವನ್ನು ಸಂಪೂರ್ಣ ಸ್ವಚ್ಛ ಮಾಡಿರುವುದಾಗಿ ಹೇಳಿದರು

ಈ ಮೂಲಕ ರಸ್ತೆ ಹಾಗೂ ಸ್ಮಶಾಣ ಕ್ಕೆ ಸರ್ಕಾರ ಮತ್ತು ತಾಲೂಕಿನ ಜನ ಪ್ರತಿನಿದಿಗಳು ಗಮನ ಹರಿಸಿ ಇನ್ನಾದರೂ ಎಚ್ಚೆತ್ತು ಮುಂದಿನ ದಿನಗಳಲ್ಲಿ ಅಂತ್ಯಕ್ರಿಯೆ ಕಾರ್ಯಗಳು ಸುಸುಸ್ತ್ರ ವಾಗಿ ನಡೆಯಲು ರಸ್ತೆ ವ್ಯವಸ್ಥೆ ಕಲ್ಪಿಸಿ ಸೂಕ್ತ ವ್ಯವಸ್ಥೆಯನ್ನು ಹಾಗೂ ಗ್ರಾಮದ ಸಮಸ್ಯೆಗಳನ್ನ ಬಗೆಹರಿಸುವಂತೆ ಒತ್ತಾಯಿಸಿದರು.

ಗ್ರಾಮದ ಮುಖಂಡ ಪೂರ್ಣೇಶ್ ಮಾತನಾಡಿ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮನವರು ಈ ಹಿಂದೆ ಗ್ರಾಮದ ಮುಖ್ಯ ರಸ್ತೆಗೆ ಹಣ ನೀಡಿ ಮುಖ್ಯ ರಸ್ತೆಯನ್ನು ದುರಸ್ಥಿಗೋಳಿಸಿದ್ದು,ಸ್ಮಶಾಣದ ರಸ್ತೆ ಕುರಿತಾಗಿ ಈಗಾಗಲೇ ನಿಮ್ಮ ಗಮನಕ್ಕೆ ತಂದಿದ್ದು ಶವಗಳನ್ನು ರಸ್ತೆ ತೊಂದರೆ ಯಿಂದಾಗಿ ಸ್ಮಶಾನಕ್ಕೆ ತರಲು ಪೆಚಡುವ ಪರಿಸ್ಥಿತಿ ಉದ್ಭವಗೊಂಡಿದ್ದು ಕೂಡಲೆ ತಾವು ಇದರ ಬಗ್ಗೆ ಗಮನ ಹರಿಸಿ ಸ್ಮಶಾಣ ದಲ್ಲಿ ಶವ ಸಂಸ್ಕಾರಕ್ಕೆ ರಸ್ತೆ ಜೊತೆಗೆ ಶೆಡ್ ಅವಶ್ಯಕತೆ ಇದ್ದು ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆ ಮನವಿ ಮಾಡಿದರು

ಇದೆ ವೇಳೆ ಗ್ರಾಮಸ್ಥರಾದ ರಾಜೇಶ್ ಮಾತನಾಡಿ 25- 30 ವರ್ಷಗಳಿಂದ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಮಾತ್ರ ಬರುವ ರಾಜಕಾರಣಿಗಳು ಗ್ರಾಮದ ಕಷ್ಟ ಮೂಲಭೂತ ಸಮಸ್ಯೆಗಳನ್ನು ಕೇಳಲು ಬಂದಿಲ್ಲ. ಚುನಾವಣೆ ಮುಗಿದ ಮೇಲೆ ಯಾರು ಕೂಡ ಸುಳಿಯದೆ ಗ್ರಾಮವನ್ನು ಕಡೆಗಣನೇ ಮಾಡುತ್ತಿರುವುದಾಗಿ ಆರೋಪಿಸಿದರು

ಸ್ಮಶಾಣದ ಜಾಗವನ್ನು ಪ್ರಭಾವಿ ವ್ಯಕ್ತಿಗಳು ಈಗಾಗಲೇ ಒತ್ತುವರಿ ಮಾಡಿ ದೋಚಿದ್ದು ದಂಡಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು

ಉಳಿದ ಭೂಮಿಯನ್ನು ಕಾನೂನು ರೀತಿಯಲ್ಲಿ ದಾಖಲಾತಿ ಮಾಡಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವ ರೀತಿಯಲ್ಲಿ ಅರಣ್ಯ ಇಲಾಖೆ ಗಿಡ ನೆಟ್ಟು. ಕಾಪಾಡಿ ಕೊಡಬೇಕು ಎಂಬುದಾಗಿ ಒತ್ತಾಯಿಸಿದರು

ಈ ಸಂದರ್ಭದಲ್ಲಿ ರಕ್ಷಿತ್ ಗುರು, ಪೂರ್ಣೇಶ್ ಪುನೀತ್ ಸೇರಿದಂತೆ ಗ್ರಾಮಸ್ಥರು ಇದ್ದರು

ವರದಿ -ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!