Saturday, March 28, 2026
Homeಕ್ರೈಮ್ಮೂಡಿಗೆರೆ: ಕಾಫಿನಾಡಲ್ಲಿ ಭಾರೀ ಗಾಳಿ ಮಳೆ: ಧರೆಗುರುಳಿದ ತೆಂಗಿನ ಮರ: ವಾಹನ ಸವಾರರ ಪರದಾಟ!

ಮೂಡಿಗೆರೆ: ಕಾಫಿನಾಡಲ್ಲಿ ಭಾರೀ ಗಾಳಿ ಮಳೆ: ಧರೆಗುರುಳಿದ ತೆಂಗಿನ ಮರ: ವಾಹನ ಸವಾರರ ಪರದಾಟ!

ಮೂಡಿಗೆರೆ: ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಇಂದು ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ಅಡಿಕೆ ಮತ್ತು ತೆಂಗಿನ ಮರಗಳು ಧರೆಗುರುಳಿವೆ.

ಭಾರಿ ಗಾಳಿ ಬೀಸಿ, ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಬಿಸಿಲಿನ ತಾಪಕ್ಕೆ ನಲುಗಿದ್ದ ತೋಟಗಳು ಮಳೆಯಿಂದ ಚೇತರಿಸಿಕೊಂಡಂತಾಗಿದೆ. ಆದರೆ ರಭಸವಾಗಿ ಬೀಸಿದ ಗಾಳಿಗೆ ಅಲ್ಲಲ್ಲಿ ತೆಂಗು, ಅಡಿಕೆ ಮತ್ತು ಬಾಳೆ ಗಿಡಗಳು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆಎಂದು ಆ ಭಾಗದ ರೈತರು ತಿಳಿಸಿದ್ದಾರೆ.

ಅಲ್ಲದೆ ಪಟ್ಟಣದ ಮಲ್ನಾಡ್ ಕ್ಲಿನಿಕ್ ಸಮೀಪ ತೆಂಗಿನ ಮರವೊಂದು ಧರೆಗುರುಳಿ ವಿದ್ಯುತ್ ತಂತಿ ಗಳು ಕಟ್ ಆಗಿರುವ ಘಟನೆ ನಡೆದಿದ್ಫು ತೆರವು ಕಾರ್ಯ ಮುಂದುವರೆದಿದೆ. ಅದೃಶ್ವವಶಾತ್ ಮರ ಅಂಗಡಿ ಮುಂಗಟ್ಟು ಮೇಲೆ ಬೀಳದಿದಿರುವುದು ಮಾಲೀಕರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಬಿದರ ರಹಳ್ಳಿ ಸಮೀಪ ಕ್ಯಾಂಟೀನ್ ಒಂದರ ಮೆಲ್ಚಾವಣೆ ಗಾಳಿಗೆ ಹಾರಿ ಹೋಗಿದ್ದು ಮಾಲೀಕನ ಕಣ್ಣಿರಿಗೆ ಕಾರಣವಾಗಿದೆ. ಉತ್ತಮ ಮಳೆ ಮಧ್ಯಾಹ್ನದ ವೇಳೆ ಮಳೆ ಸುರಿದಿದ್ದು ಕಾಫಿ ಬೆಳೆಗಾರರಲ್ಲಿ ಒಂದಿಷ್ಟು ರಿಲ್ಯಾಕ್ಸ್‌ ನೀಡಿದಂತಾಗಿದೆ.

ಇಂದು ಮಧ್ಯಾಹ್ನ 1.30 ವೇಳೆಗೆ ಗುಡುಗು ಸಹಿತ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು. ಪಟ್ಟಣವೂ ಸೇರಿ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲೂ ಹದವಾದ ಮಳೆ ಸುರಿಯಿತು.

ಉತ್ತಮವಾಗಿ ಮಳೆ ಬಂದಿದ್ದರಿಂದ ಅಡಿಕೆ ತೋಟಗಳಿಗೆ ಅನುಕೂಲವಾಗಿದೆ. ಅಲ್ಲದೇ ಬಿಸಿಲಿನ ಬೇಗೆಯಿಂದ ಬಸವಳಿದ್ದು ಜನರಿಗೆ ತಂಪೆರೆದಂತಾಗಿದೆ.

ವರದಿ:ಪುನೀತ್ ಕಡಿದಾಳು
ಮೂಡಿಗೆರೆ
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!