ಮೂಡಿಗೆರೆ: ಸರ್ಕಾರದ ವಿಶೇಷ ಅನುದಾನದಡಿಯಲ್ಲಿ ಕಡೂರು ಮಂಗಳೂರು ಹೆದ್ದಾರಿ 173 ಮುಖ್ಯರಸ್ತೆಯ ಬಿಳಗುಳದಲ್ಲಿ ನಿರ್ಮಿಸಿರುವ ಹೆಸಗಲ್ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು.

ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ನಯನ ಮೋಟಮ್ಮ, ಉತ್ತಮ ಸದಸ್ಯಬಲ ಹೊಂದಿರುವ ಪಂಚಾಯಿತಿಯ ಕಟ್ಟಡ ಇಲ್ಲಿಯವರೆಗೆ ಬಹಳ ಕಿರಿದಾಗಿತ್ತು. ಇದರಿಂದ ಸದಸ್ಯರ ಕಾರ್ಯಕಲಾಪಗಳು ಹಾಗೂ ಸಾರ್ವಜನಿಕರ ಕೆಲಸಗಳಿಗೂ ಸಮಸ್ಯೆಯಾಗುತ್ತಿತ್ತು. ಇದೀಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿರುವುದರಿಂದ ಹಲವು ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ ಎಂದು ತಿಳಿಸಿದರು ಹಾಗೆ
ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು
ಮಾಜಿ ವಿಧಾನ ಪರಿಷದ್ ಸಭಾಪತಿ ಪ್ರಾಣೇಶ್ ಮಾತನಾಡಿ, ಹೆಸಗಲ್ ಗ್ರಾಮವು ಇತ್ತೀಚೆಗೆ ವೇಗವಾಗಿ ಅಭಿವೃದ್ಧಿಹೊಂದುತ್ತಿದೆ. ಜನಸಂಖ್ಯೆಯೂ ಹೆಚ್ಚಾಗಿರುವುದರಿಂದ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ.ಎಂದರು.
ಒಟ್ಟು ಅಂದಾಜು ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪಂಚಾಯಿತಿ ಕಟ್ಟಡದಲ್ಲಿ ಸಭಾಂಗಣ, ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿ, ಕಾರ್ಯದರ್ಶಿ, ಕರವಸೂಲಿಗಾರ, ಗಣಕಯಂತ್ರ ನಿರ್ವಾಹಕರ ಮತ್ತು ಅಭಿಲೇಖಾಲಯ ಕೊಠಡಿಗಳು ಹಾಗೂ ಶೌಚಾಲಯ ವ್ಯವಸ್ಥೆಯಿದೆ.ಎಂದರು
ಈ ಕಾರ್ಯಕ್ರಮ ದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೇ ನಜ್ಮಾ ಬೇಗಂ ಸದಸ್ಯರುಗಳಾದ ಶಿವಣ್ಣ, ಆಶಾ. ಅರವಿಂದ್, ಖಾಲಿಮ್ ಉಲ್ಲಾ, ಪೂರ್ಣೇಶ್, ಸುಧಾ ರಾಧಾ, ಸತ್ಯವತಿ, ನಂದ. ಬಿ. ಎಂ,
ಹಾಲಮ್ಮ, ರವಿ ಪ್ರಶಾಂತ್. ಕಾರ್ಯ ನಿರ್ವಣಾಧಿಕಾರಿ ದಯವತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು
ವರದಿ :ಪುನೀತ್ ಕಡಿದಾಳ್
9483811948
