ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೊಮ್ಮೆನಹಳ್ಳಿಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಚೇತನ್ ಎಂಬ ಯುವಕನಿಗೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದು, ಕಾರು ಚಾಲಕ ಪರಾರಿಯಾಗಿದ್ದಾನೆ.
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಚೇತನ್ ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಅಮಾಯಕ ಚೇತನ್ ಜೀವ ತೆಗೆದ ಕಿರಾತಕನ ಹುಡುಕುವ ಕೆಲಸವನ್ನ ಖಾಕಿ ಮಾಡಬೇಕಿದೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ. ಹೀಗೆ ಪ್ರತಿಯೊಬ್ಬರು ಕಣ್ಣೀರು ಹಾಕುತ್ತಾ ಇರೋದು, ರಂಗನಾಥ್ ಹಾಗೂ ಶಕುಂತಾ ದಂಪತಿ ಪುತ್ರ ಚೇತನ್ ಸಾವಿಗೆ. ಕೇವಲ 33 ವಯಸ್ಸಿಗೆ ತನ್ನ ಬಾಳಿಗೆ ಗುಡ್ ಬೈ ಹೇಳಿದ್ದಾರೆ ಚೇತನ್. ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ವ್ಯಕ್ತಿಯೊಬ್ಬ, ಚೇತುವಿನ ಜೀವವನ್ನೇ ತೆಗೆದುಬಿಟ್ಟಿದ್ದಾನೆ. ಆತನ ಮೋಜಿನ ಕಾರು ಚಾಲನೆಗೆ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ತನ್ನ ಪಲ್ಸರ್ ಬೈಕ್ ನಲ್ಲಿ ಹೋಗುತ್ತಿದ್ದವನಿಗೆ ಕಾರು ಡಿಕ್ಕಿ ಕೊಟ್ಟಿದ್ದರಿಂದ ಸ್ಥಳದಲ್ಲೇ ಚೇತನ್ ಕುಸಿದುಬಿದ್ದಿದ್ದಾರೆ. ತಲೆಗೆ ಬಲವಾದ ಏಟು ಆಗಿದ್ದರಿಂದ ಸ್ಥಳದಲ್ಲೇ ಒದ್ದಾಡಿದ್ದಾರೆ. ಆದ್ರೆ ಗುದ್ದಿದ್ದ ಕಾರು ಚಾಲಕ ಮಾತ್ರ ನಿಲ್ಲಿಸದೇ ಹಿಟ್ ಆಂಡ್ ರನ್ ಮಾಡಿದ್ದಾನೆ.!
ಈ ವೇಳೆ ಕಾರು ಬೈಕ್ ಗೆ ಗುದ್ದಿ ಪರಾರಿಯಾಗುತ್ತಿರೋದ್ದನ್ನ ಕೆಲವರು ನೋಡಿದ್ದಾರೆ. ಕೊನೆಗೆ ಅದನ್ನ ಸಿಸಿಟಿವಿಯಲ್ಲಿ ಖಚಿತಪಡಿಸಿಕೊಂಡಿದ್ದಾರೆ.. ಪ್ರತ್ಯಕ್ಷದರ್ಶಿಗಳು ಆರೋಪಿಸುವ ಪ್ರಕಾರ ಕಾರು, ಚಿಕ್ಕಮಗಳೂರು ಸಮೀಪದ ಹುಕ್ಕುಂದ ಗ್ರಾಮದ ಸಂದೀಪ್ ಎಂಬುವರದ್ದು ಅಂತಾ ಆರೋಪ ಮಾಡಲಾಗಿದೆ. ಆದರೆ ಪ್ರಭಾವಿಗಳು ಅವರನ್ನ ಪ್ರಕರಣದಿಂದ ಬಚಾವ್ ಮಾಡಲು ಮುಂದಾಗಿದ್ದಾರೆ ಅಂತಾ ಕುಟುಂಬಸ್ಥರು, ಸ್ಥಳೀಯರು ಆರೋಪಿಸಿದ್ದಾರೆ. ಆರೋಪಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
