Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ: ದತ್ತ ಜಯಂತಿ ಅಂಗವಾಗಿ ವಿ. ಹಿ.ಪ. ಬಜರಂಗದಳ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ಮೂಡಿಗೆರೆ: ದತ್ತ ಜಯಂತಿ ಅಂಗವಾಗಿ ವಿ. ಹಿ.ಪ. ಬಜರಂಗದಳ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ಮೂಡಿಗೆರೆ: ದತ್ತ ಜಯಂತಿ ಅಂಗವಾಗಿ ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಬೈಕ್ ಜಾಥಾವನ್ನು ದತ್ತ ಮಾಲಾ ಭಕ್ತರು ಉತ್ಸಾಹ ಭರಿತವಾಗಿ ಅದ್ದೂರಿಯಾಗಿ ನಡೆಸಿದರು. ಕೊಲ್ಲಿ ಬೈಲ್ ವೃತ್ತದಿಂದ ಪ್ರಾರಂಭಗೊಂಡ ಜಾಥಾ ಹ್ಯಾಂಡ್ ಪೋಸ್ಟ್ ಸರ್ಕಲ್‌ವರೆಗೆ ಸಾಗಿತು.

ಈ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚು ಬೈಕ್‌ಗಳಲ್ಲಿ ದತ್ತ ಮಾಲಾಧಾರಿಗಳು ಜಾಥೆಯಲ್ಲಿ ಭಾಗವಹಿಸಿ ಭಕ್ತಿ–ಭಾವನೆ ತೋರಿದರು. ಜಾಥಾ ವೇಳೆ ದತ್ತನಾಮ ಸ್ಮರಣೆ, ಧ್ವಜ ಪ್ರದರ್ಶನ ಮತ್ತು ಭಾರತ ಮಾತೆಗೆ ಜೈ ಘೋಷಣೆ ಹಾಗೂ ಶಾಂತಿಯ ಸಂದೇಶವನ್ನು ಪ್ರಸಾರ ಮಾಡಲಾಯಿತು.

ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಜಾಥಾ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದು, ಕಾರ್ಯಕ್ರಮವು ಶಾಂತಿಯುತವಾಗಿ ಜರುಗಿತು.

ಈ ಕಾರ್ಯಕ್ರಮದಲ್ಲಿ VHP ತಾಲ್ಲೂಕು ಅಧ್ಯಕ್ಷ ಸುದೇವ ಗುತ್ತಿ, ಬಜರಂಗದಳ ತಾಲೂಕು ಪ್ರಮುಖ್ ಸಂತೋಷ್ ಶುಭನಗರ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಸಮಾಜ ಸೇವಕ ವಿಜಯ್ ಕುಮಾರ್, ಬಿಜೆಪಿ ಮುಖಂಡ ಕೆ. ಸಿ. ರತನ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!