ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚುತ್ತಿದ್ದೂ ಮೂಡಿಗೆರೆ ತಾಲೂಕಿನ ಕಾರ್ಲಗದ್ದೆ ಗ್ರಾಮದ ಪ್ರಹ್ಲಾದ್ ಅವರ ತೋಟಕ್ಕೆ ಕಾಡಾನೆ ಗುಂಪು ನುಗಿ ತೋಟವನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಈ ಭೂಮಿಯನ್ನೇ ನಂಬಿ ಬದುಕು ನಡೆಸುತ್ತಿದ್ದವರಿಗೆ ಆನೆ ಹಾವಳಿಯಿಂದಾಗಿ ರೈತ ಕಂಗಲಾಗಿದ್ದಾರೆ.
ಆನೆ ಹಾವಳಿ ಬಗ್ಗೆ ಮಾತನಾಡಿದ ರೈತ ಪ್ರಹ್ಲಾದ್, ತೋಟಕ್ಕೆ ಸುಮಾರು 40 ಕಾಡಾನೆಗಳು ಏಕಾಏಕಿ ಲಗ್ಗೆಯಿಟ್ಟ ಪರಿಣಾಮ ನನ್ನ ಹಾಗೂ ಅಕ್ಕ ಪಕ್ಕದ ತೋಟದಲ್ಲಿರುವ ಕಾಪಿ ಗಿಡಗಳು ಪುಡಿ ಪುಡಿಯಾಗಿದ್ದು ಬೆಲೆ ಬಾಳುವ ಸಿಲ್ವರ್ ಮರಗಳನ್ನು ಬೀಳಿಸಿದ್ದು ಕುಟುಂಬದವರ ಜೀವನಕ್ಕೆ ಆಸರೆಯಾಗಿದ್ದ ತೋಟ ಆನೆ ದಾಳಿಯಿಂದ ನಾಶವಾಗಿದೆ.
ನನಗೆ ಚಿಕ್ಕ ವಯಸ್ಸಿದ್ದಾಗ ತಂದೆ ಅಗಲಿದರು, ತದನಂತರ ಕಷ್ಟ ಪಟ್ಟು ತೋಟ ಮಾಡಿ ಮಕ್ಕಳಂತೆ ಪೋಷಿಸಿ ಗಿಡಗಳನ್ನು ಬೆಳೆಸಿದ್ದು ತೋಟ ನೋಡಲು ಕಷ್ಟ ಆಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿದ್ದು ತಿಂಗಳಿಗೆ 3500 ಗಿಂತ ಅಧಿಕ ಹಣ ಔಷದಿಗೆ ಎತ್ತಿಡಬೇಕು. ಅಲ್ಪ ಸ್ವಲ್ಪ ತೋಟದಿಂದಲೇ ಎಲ್ಲವು ನಡೆಸುತ್ತಿದ್ದೂ ಆನೆ ಹಾವಳಿಯಿಂದ ಜೀವನ ನಡೆಸಲು ಚಿಂತೆಯಾಗಿದೆ. ನಾನು ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇನೆ ಯಾವುದೇ ಪ್ರಯೋಜನ ಆಗಿಲ್ಲ.
ನನ್ನ ಮುಂದಿನ ಜೀವನ ನಡೆಸಲು ಕಷ್ಟ ಆಗಿದ್ದು, ವಿಷ ಕುಡಿಯುವುದಾಗಿ ತಿಳಿಸಿದರು. ಈಗಾಗಲೇ ತಾಲೂಕಿನಲ್ಲಿ ಆನೆ ಹಾವಳಿ ಮಿತಿ ಮೀರಿದ್ದು ಅನೇಕ ಮಂದಿ ಬಲಿಯಾಗಿದ್ದಾರೆ
ಆನೆಗಳ ನಿಯಂತ್ರಣಕ್ಕೆ ಎಲಿಫ್ಯಾಂಟ್ ಟಾಸ್ಕ್ ಪೋರ್ಸ್ ಕಾರ್ಯನಿರ್ವಹಿಸುತ್ತಿದ್ದರು ಆನೆಗಳ ನಿಯಂತ್ರಣಕ್ಕೆ ಬಂದಿಲ್ಲ, ತಾಲೂಕಿನ ಹೊಸಕೆರೆ, ಬೈರಾಪುರ, ಕುಂಬರಡಿ ಕಸ್ಕೆಬೈಲ್, ಚಂದ್ರಪುರ ಮುಂತಾದ ಗ್ರಾಮಗಳಲ್ಲಿ ಕಾಡಾನೆ ದಾಳಿಯಿಂದ ರೈತರ ತೋಟ, ಗದ್ದೆ ಹಾಳಾಗುವ ಜೊತೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ
ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಇಲ್ಲಿನ ರೈತರು ಅನೇಕ ಬೇಡಿಕೆ ಇಡುತ್ತಲೆ ಬಂದಿದ್ದು ಯಾವುದೇ ಪ್ರಯೋಜನ ಆಗಿರುವುದಿಲ್ಲ. ರೈತರ ಜೀವನದ ಜೊತೆ ಚೆಲ್ಲಾಟ ಆಡದೆ ಕಾಡಾನೆ ಕಾರಿಡಾರ್ʼಗೆ ಹೆಚ್ಚಿನ ಗಮನ ಕೊಟ್ಟು ರೈತರ ಜೀವನವನ್ನು ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.