ಮೂಡಿಗೆರೆ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಡಿಗೆರೆ ತಾಲ್ಲೂಕು ಘಟಕ ಮತ್ತು ಜಿಲ್ಲಾ ಘಟಕ ಇವರ ವತಿಯಿಂದ ಶ್ರವಣದೋಷ ಹೊಂದಿದ ಐದು ಜನ ಪಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ತಾಲೂಕು ಕಚೇರಿಯಲ್ಲಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾನ್ಯ ದಂಡಾಧಿಕಾರಿ ಅಶ್ವಿನಿ ಮಾತನಾಡಿ ವಿಪತ್ತು ನಿರ್ವಹಣೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ‘ಭಾರತೀಯ ರೆಡ್ ಕ್ರಾಸ್ ಸಂಸ್ಥೆ’ಯ ಸೇವಾ ಕಾರ್ಯಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಈ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗುವ ಮೂಲಕ ಸಂಸ್ಥೆಯನ್ನು ಬಲಪಡಿಸುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚಿಕ್ಕಮಗಳೂರು ಜಿಲ್ಲಾ ಘಟಕದ ಸಭಾಪತಿಗಳಾದ ಶ್ರೀ. ಪ್ರದೀಪ್ ಗೌಡ ಮಾತನಾಡಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಹಾಗೂ ವಿಪತ್ತು ನಿರ್ವಹಣಾ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮತ್ತು ಸ್ವಸ್ಥ – ಸುಸ್ಥಿರ ಸಮಾಜದ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯತ್ವವನ್ನು ಪಡೆಯುವುದರ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂಸ್ಥೆಯ ಮಾನವೀಯ ಚಟುವಟಿಕೆಗಳಿಗೆ ಬೆಂಬಲಿಸುವಂತೆ ಕೋರಿದರು,
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಡಿಗೆರೆ ತಾಲ್ಲೂಕು ಘಟಕದ ಸಭಾಪತಿಗಳಾದ ಶ್ರೀ. ಪ್ರವೀಣ್ ಬಣಕಲ್, ಉಪ ಸಭಾಪತಿಗಳಾದ ಪೂರ್ಣೇಶ್ ಮತ್ತಾವರ, ಕಾರ್ಯದರ್ಶಿ ಹರ್ಷ ಹಳೇಕೋಟೆ, ನಿರ್ದೇಶಕರುಗಳಾದ ಪ್ರಶಾಂತ್.ಎಂ.ಎ, ಅಕ್ಷತ್ ಪಟ್ಟದೂರು ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶ್ರೀ. ಜಯರಾಂ ಬಿದರಹಳ್ಳಿ, ಸೀನಿಯರ್ ಜೇಸಿಸ್ ಸಂಸ್ಥೆಯ ಮನಮೋಹನ್, ರೋಟರಿ ಸಂಸ್ಥೆಯ ವಿನೋದ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
